newsfirstkannada.com

ಅಭಿಮಾನಿಗಳಿಗೆ ಹಬ್ಬ.. ಕೊಹ್ಲಿಗೆ ಹಿಟ್​ಮ್ಯಾನ್​ ಸಾಥ್​​.. ರೋಹಿತ್​​ ಆರ್​​ಸಿಬಿ ಕ್ಯಾಪ್ಟನ್​!

Share :

Published July 2, 2024 at 5:42pm

    ವಿರಾಟ್​ ಕೊಹ್ಲಿಯಲ್ಲ ಆರ್​​ಸಿಬಿ ಮುಂದಿನ ಕ್ಯಾಪ್ಟನ್ ರೋಹಿತ್​​!

    ಐಪಿಎಲ್​ ಆಕ್ಷನ್​ನಲ್ಲಿ ರೋಹಿತ್​ ಮೇಲೆ ಆರ್​​ಸಿಬಿ ಫ್ಯಾನ್ಸ್​ ಕಣ್ಣು

    ಕೊಹ್ಲಿ, ರೋಹಿತ್​​ ಇಬ್ಬರು ಆರ್​​ಸಿಬಿಗೆ ಕಪ್​ ಗೆಲ್ಲಿಸಲಿ ಎಂದು ಟ್ರೆಂಡ್​​

ಬಹುನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೌತ್​ ಆಫ್ರಿಕಾ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಈ ಮೂಲಕ 2ನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ. ವಿಶ್ವಕಪ್​ ಗೆದ್ದ ಕೂಡಲೇ ಟೀಮ್​ ಇಂಡಿಯಾದ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಇನ್ನು, ಟಿ20 ಕ್ರಿಕೆಟ್‌ನಿಂದ ವಿರಾಟ್ ಕೊಹ್ಲಿ ನಿವೃತ್ತಿ ಆಗಿದ್ದಾರೆ ಅನ್ನೋ ಬೇಸರದಲ್ಲಿರೋ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಒಂದಿದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ಕೊಹ್ಲಿ ಬಗ್ಗೆ ಬಿಗ್​ ಅಪ್ಡೇಟ್​​ ನೀಡಿದೆ. ಸದ್ಯ ಕೊಹ್ಲಿ ಅಂತರಾಷ್ಟ್ರೀಯ ಮಹತ್ವದ ಜವಾಬ್ದಾರಿಗಳಿಂದ ಮುಕ್ತರಾಗಿದ್ದು, ಐಪಿಎಲ್​​ನಲ್ಲಿ ಮತ್ತೆ ಆರ್​​ಸಿಬಿ ತಂಡವನ್ನು ಮುನ್ನಡೆಸಲು ಕೊಹ್ಲಿಗೆ ಮನವರಿಕೆ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​ ಈಗ 40 ವರ್ಷ. ಹಾಗಾಗಿ ಐಪಿಎಲ್​​ನಿಂದ ಫಾಫ್​ ನಿವೃತ್ತಿ ಆಗೋ ಸಾಧ್ಯತೆ ಇದೆ. ಇದಾದ ಬಳಿಕ ಆರ್​​ಸಿಬಿ ತಂಡಕ್ಕೆ ಹೊಸ ಕ್ಯಾಪ್ಟನ್​ ಬೇಕಿದ್ದಾರೆ. ಆದ್ದರಿಂದ ಮುಂದಿನ ಸೀಸನ್​ಗೆ ಕೊಹ್ಲಿ ಅವರಿಗೆ ಆರ್​​ಸಿಬಿ ಪಟ್ಟ ನೀಡಲು ಫ್ರಾಂಚೈಸಿ ನಿರ್ಧಾರ ಮಾಡಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ರೋಹಿತ್​ ಶರ್ಮಾ ಕ್ಯಾಪ್ಟನ್ಸಿಗೆ ಆರ್​​ಸಿಬಿ ಫ್ಯಾನ್ಸ್​ ಒತ್ತಾಯ

ಇನ್ನೊಂದೆಡೆ ವಿರಾಟ್​ ಕೊಹ್ಲಿಗೆ ಕ್ಯಾಪ್ಟನ್ಸಿ ಒತ್ತಡ ಬೇಡ. ರೋಹಿತ್​ ಶರ್ಮಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಬಳಿಕ ಐಪಿಎಲ್​ ಆಡೋದಾಗಿ ಹೇಳಿದ್ದಾರೆ. ಮುಂದಿನ ಸೀಸನ್​ ವೇಳೆಗೆ ರೋಹಿತ್​ ಮುಂಬೈ ಇಂಡಿಯನ್ಸ್​ ತೊರೆಯೋದು ಗ್ಯಾರಂಟಿ. ಆಕ್ಷನ್​​ನಲ್ಲಿ ಆರ್​​ಸಿಬಿ ರೋಹಿತ್​ ಶರ್ಮಾ ಅವರನ್ನು ಖರೀದಿ ಮಾಡಲಿ. ರೋಹಿತ್​ ಕ್ಯಾಪ್ಟನ್​ ಆಗಲಿ, ಕೊಹ್ಲಿ ಆರ್​​ಸಿಬಿ ಪರ ಚೆನ್ನಾಗಿ ಆಡಿ ಕಪ್​ ಗೆಲ್ಲಿಸಲಿ ಎಂದು ಫ್ಯಾನ್ಸ್​ ಸೋಷಿಯಲ್​ ಮೀಡಿಯಾದಲ್ಲಿ ಫುಲ್​ ಟ್ರೆಂಡ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ವಿಶ್ವಕಪ್​​ ಗೆದ್ದ ಬೆನ್ನಲ್ಲೇ ಮಹತ್ವದ ನಿರ್ಧಾರ.. ವಿರಾಟ್​​​ ಕೊಹ್ಲಿ ಮತ್ತೆ ಆರ್​​ಸಿಬಿ ಕ್ಯಾಪ್ಟನ್​​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಭಿಮಾನಿಗಳಿಗೆ ಹಬ್ಬ.. ಕೊಹ್ಲಿಗೆ ಹಿಟ್​ಮ್ಯಾನ್​ ಸಾಥ್​​.. ರೋಹಿತ್​​ ಆರ್​​ಸಿಬಿ ಕ್ಯಾಪ್ಟನ್​!

https://newsfirstlive.com/wp-content/uploads/2024/07/Kohli_Rohit-RCB.jpg

Load More