ಶಿಕ್ಷಣಕ್ಕೆ ಕೊಡಬೇಕಾದ ಉತ್ತೇಜನ, ಹಣ ಸರ್ಕಾರ ಕೊಟ್ಟಿಲ್ಲ
ಸಿದ್ದರಾಮಯ್ಯ ಸರ್ಕಾರದ ಮೇಲೆ ಲಂಚದ ಆರೋಪಗಳಿವೆ
ಮೋದಿಗೆ ಸವಾಲ್ ಹಾಕಿದ್ದಕ್ಕೆ ಅಶ್ವತ್ ನಾರಾಯಣ್ ಗರಂ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಘೋಷಣೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕಿದ ವಿಚಾರಕ್ಕೆ ಮಾಜಿ ಸಚಿವ ಅಶ್ವತ್ ನಾರಾಯಣ್ ಅವರು ಕೆಂಡಾಮಂಡಲರಾಗಿದ್ದಾರೆ. ರಾಜಕೀಯದಲ್ಲಿ 40 ವರ್ಷಗಳ ಅನುಭವವಿರುವ, 14 ಬಜೆಟ್ ಕೊಟ್ಟ ಸಿಎಂ ಸಿದ್ದರಾಮಯ್ಯನವರೇ ನಿಮಗೆ ತಾಕತ್ ಇದ್ದರೇ, ನಿಮ್ಮ ಅನುಭವ, ಕಾಳಜಿಯನ್ನ ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ಕೊಡುವ ಮೂಲಕ ಮಾಡಿ ತೋರಿಸಿ. ಆಗ ನಿಮ್ಮ ತಾಕತ್ಗೆ ಮೆಚ್ಚುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕ್ಷಣಕ್ಕೆ ಕೊಡಬೇಕಾದ ಉತ್ತೇಜನ, ಹಣ ಕೊಟ್ಟಿಲ್ಲ. ನಿಮ್ಮ ದೃಷ್ಟಿಯಲ್ಲಿ ಯಾರು ವಿದ್ಯಾವಂತರಾಗಬಾರದು. ಅಸಹಾಯಕರಾಗಿರಬೇಕು. ನೀವು ಕೊಡುವುದಕ್ಕೆ ಕೈ ಚಾಚಿ ಕೇಳುತ್ತಿರಬೇಕು. ಆ ಪರಿಸ್ಥಿತಿಯನ್ನು ನಿರ್ಮಾಣ ಮಾಡುವ ಉದ್ದೇಶ ಸರ್ಕಾರ ಹೊಂದಿದೆ. 21ನೇ ಶತಮಾನ ಜ್ಞಾನಾಧರಿತವಾದ ಶತಮಾನ. ಇದರ ಆಧಾರಿತವಾಗಿಯೇ ಆರ್ಥಿಕ ವ್ಯವಸ್ಥೆ ನಡೆಯುತ್ತಿರುವುದು. ಅದನ್ನು ಯಾವ ರೀತಿ ಉತ್ತೇಜನ ಕೊಡಬೇಕು ಎನ್ನುವುದರ ಬಗ್ಗೆ ಒಂದೇ ಒಂದು ಪರ್ಸೆಂಟ್ ಕಾಳಜಿ ಇದೆಯಾ ನಿಮಗೆ ಎಂದು ಸಿಎಂ ಸಿದ್ದರಾಮಯ್ಯರನ್ನ ಪ್ರಶ್ನೆ ಮಾಡಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸುತ್ತಿರುವುದು ನೀವು. ಗುಣಮಟ್ಟದ ಆರೋಗ್ಯ ಸೇವೆ ಕೊಡ್ತೀನಿ ಎಂದು ಹೇಳಿ, ಈಗ ನಿಮಗೆ ಕೊಡುವುದಕ್ಕೆ ಆಗುತ್ತಿದೆಯಾ? ಭ್ರಷ್ಟಾಚಾರ ಇಲ್ಲದಂತ ಆಡಳಿತ ಕೊಡಿ. ಅಧಿಕಾರಿಗಳ ವರ್ಗಾವಣೆಯಲ್ಲಿ ಲಂಚದ ಆರೋಪಗಳು ನಿಮ್ಮ ಕುಟುಂಬ, ನಿಮ್ಮ ಮಂತ್ರಿಗಳ ಮೇಲೆ, ಸರ್ಕಾರ ಮೇಲೆ ಇದೆ. ಭ್ರಷ್ಟಾಚಾರಿಗಳೆಂದು ಪಟ್ಟ ಗಳಿಸಿಕೊಂಡಿರುವ ನೀವು ತಾಕತ್ ಬಗ್ಗೆ ಮಾತನಾಡುತ್ತೀರಾ ಎಂದು ಕಿಡಿಕಾರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ