newsfirstkannada.com

ಟೊಮ್ಯಾಟೋ ರೇಟ್​​ ಕೇಳಿ ದಂಗಾದ ಗ್ರಾಹಕರು; ಕಳ್ಳರ ಹಾವಳಿ; ಜಮೀನಿನಲ್ಲೇ ರೈತರ ಠಿಕಾಣಿ!

Share :

09-07-2023

    ದಿನಸಿಗೊಂದು ಕಾಲ..! ತರಕಾರಿಗೊಂದು ಕಾಲ..!

    ತರಕಾರಿ ಸಾಮ್ರಾಜ್ಯದಲ್ಲಿ ಟೊಮ್ಯಾಟೋ ದರ್ಬಾರ್​

    ಕೆಂಪು ರಾಣಿಯ ಕಿಡ್ನ್ಯಾಪ್​ಗೆ ಖದೀಮರ ಸ್ಕೆಚ್​..!

ದಾವಣಗೆರೆ: ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅನ್ನೋದು ಗಾದೆ ಮಾತಿದೆ. ಸದ್ಯ ತರಕಾರಿಗಳಿಗೆ ಸುವರ್ಣಕಾಲ. ಅದ್ರಲ್ಲೂ ಟೊಮ್ಯಾಟೋ ರೇಟ್​ ಕೇಳುವ ಹಾಗೇ ಇಲ್ಲ. ಬೇಕಾದರೆ ತಗೊಳ್ಳಿ, ಇಲ್ಲಾಂದ್ರೆ ಬಿಡಿ ಅನ್ನುತ್ತಿದ್ದಾರೆ ವ್ಯಾಪಾರಿಗಳು. ದರ ಹೆಚ್ಚಾದ ಮೇಲಂತೂ ಟೊಮ್ಯಾಟೋಗೆ ಇನ್ನಿಲ್ಲದ ಡಿಮ್ಯಾಂಡ್ ಬಂದಿದೆ. ಅದು ಕೂಡ ರಾತ್ರಿ-ಹಗಲು ಪಾಳಿಯಲ್ಲಿ ಕಾಯುವಷ್ಟು.

ಒಂದೆಡೆ ಮಾರ್ಕೆಟ್​ನಲ್ಲಿ ಆಕಾಶಕ್ಕೆ ಏಣಿ ಹಾಕುತ್ತಿರುವ ರೇಟು. ಮತ್ತೊಂದೆಡೆ ಚಿನ್ನವನ್ನ ಕಾಯುವ ಹಾಗೇ ಕಾವಲು ಕಾಯೋ ರೈತ. ಈಗ ಎಲ್ಲಿ ನೋಡಿದ್ರೂ ಕೆಂಪು ರಾಣಿಯದ್ದೇ ಕಾರುಬಾರು. ನನ್ನ ನೀನು ಪಡೆಯಲಾರೆ, ತಿಳಿದು ತಿಳಿದು ಹಠವೇತಕೆ ಎಂಬ ರಾಗದಲ್ಲಿ ಹಾಡಿ ಜನಸಾಮಾನ್ಯನನ್ನು ನೋಡಿ ಈ ರಾಣಿ ಗೇಲಿ ಮಾಡೋಕೆ ಶುರುಮಾಡಿದ್ದಾಳೆ.

ಟೊಮ್ಯಾಟೋಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು…!

ಹೀಗೆ ಹಣ್ಣಣ್ಣಾಗಿ ಎಲ್ಲರನ್ನು ಸೆಳೆಯುವ ಕೆಂಪು ರಾಣಿ ಟೊಮ್ಯಾಟೋಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಅಂದ್ರೆ ರೇಟು ಬಂದ್ಬಿಟ್ಟಿದೆ. ಕೆಲವರಂತೂ ಟೊಮ್ಯಾಟೋ ರೇಟ್​ ಕೇಳಿ ಅಡುಗೆಗೆ ಹಾಕೋದಕ್ಕೆನೇ ಹಿಂದೆಮುಂದೆ ನೋಡುವಂತಾಗಿದೆ. ಅತ್ತ ಟೊಮ್ಯಾಟೋ ದುಬಾರಿಯಾಗ್ತಿದ್ದಂತೆ ಇತ್ತ ಕಳ್ಳರ ಹಾವಳಿ ಹೆಚ್ಚಾಗಿದೆ. ಕಳ್ಳರು ಜಮೀನುಗಳಿಗೆ ನುಗ್ಗಿ ಟೊಮ್ಯಾಟೋ ಕದಿಯೋಕೆ ಶುರುಮಾಡಿದ್ದಾರೆ. ಹೀಗಾಗಿ ರೈತರು ಟೊಮ್ಯಾಟೋ ಬೆಳೆ ರಕ್ಷಣೆಗಾಗಿ ಕಣ್ಣಲ್ಲಿ ಎಣ್ಣೆ ಬಿಟ್ಕೊಂಡು ಕಾಯ್ತಿದ್ದಾರೆ. ಹಗಲಿರುಳು ಪಾಳಿಯಂತೆ ಟೊಮ್ಯಾಟೋಗೆ ಕಾವಲು ಕೊಡ್ತಿದ್ದಾರೆ.

ಜಮೀನಿನಲ್ಲೇ ಟ್ರ್ಯಾಕ್ಟರ್ ಟ್ರಾಲಿ ಹಾಕಿ ಕಾಯ್ತಿರುವ ರೈತರು

ಬೆಲೆ ಏರಿಕೆಯಾಗುತ್ತಿದ್ದಂತೆ ಟೊಮ್ಯಾಟೋ ಬೆಳೆಗಳಿಗೆ ಕಳ್ಳರು, ಖದೀಮರು ಕಣ್ಣು ಹಾಕಿದ್ದಾರೆ. ದಾವಣಗೆರೆ ಸೇರಿ ಹಲವೆಡೆ ಅಕ್ಕಪಕ್ಕದ ಜಮೀನುಗಳಿಗೆ ನುಗ್ಗುತ್ತಿದ್ದಾರೆ. ಹೀಗಾಗಿ ಜಮೀನಿನಲ್ಲೇ ಟ್ರ್ಯಾಕ್ಟರ್ ಟ್ರಾಲಿ ಹಾಕಿ ರೈತರು ಕಾಯ್ತಿದ್ದಾರೆ. ಎರಡೆರಡು ಪಾಳಿಗಳಲ್ಲಿ ಟೊಮ್ಯಾಟೋ ಕಾವಲು ಕಾಯುತ್ತಿದ್ದಾರೆ. ಹಗಲು ಮತ್ತು ರಾತ್ರಿ ಟೊಮ್ಯಾಟೋಗೆ ಸರ್ಪಗಾವಲು ಹಾಕಿದ್ದಾರೆ. ಹಾಸನದಲ್ಲಿ ಟೊಮ್ಯಾಟೋ ಕಳವು ಬಳಿಕ ರೈತರಿಗೆ ಈ ಒತ್ತಡ ಹೆಚ್ಚಾಗಿದೆ.

ಜನರ ಜೇಬಿಗೆ ಖಾರವಾದ ಹಸಿ ಮೆಣಸಿನಕಾಯಿ

ಮಳೆಯಾದರೂ ತರಕಾರಿಗಳ ಬೆಲೆ ಕಡಿಮೆಯಾಗಿಲ್ಲ. ಜನರ ಜೇಬಿಗೆ ಮೆಣಸಿನಕಾಯಿ ಬೆಲೆ ಖಾರವಾಗಿದೆ. ಹಸಿ ಟೊಮ್ಯಾಟೋ ಬೆನ್ನಲ್ಲೇ ಮೆಣಸಿನಕಾಯಿ ರೇಟು ಹೆಚ್ಚಾಗಿದೆ. ರಾಜ್ಯ ಮಾತ್ರವಲ್ಲದೇ ದೇಶಾದ್ಯಂತ ಹಸಿ ಮೆಣಸಿನಕಾಯಿ ಬೆಲೆ ಭಾರೀ ಏರಿಕೆಯಾಗಿದೆ. ಕಳೆದ ತಿಂಗಳು ಕೆಜಿಗೆ 60 ರೂಪಾಯಿಯಿದ್ದ ದರ ಈಗ ಡಬಲ್​ಗಿಂತ ಜಾಸ್ತಿ ಅಂದ್ರೆ 130 ರೂಪಾಯಿಗೆ ಏರಿಕೆಯಾಗಿದೆ. ಹೀಗಾಗಿ ಹಸಿಮೆಣಸಿನಕಾಯಿಯನ್ನೂ ರೈತರು ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ.

ಒಟ್ಟಾರೆ ರಾಜ್ಯದಲ್ಲಿ ಮಾತ್ರವಲ್ಲ ದೇಶಾದ್ಯಂತ ಟೊಮ್ಯಾಟೋ ರೇಟು ಹೆಚ್ಚಾಗಿದೆ. ಇದರ ಜೊತೆಗೆ ನಾವೇನು ಕಮ್ಮಿ ಎನ್ನುವಂತೆ ಹಸಿಮೆಣಸಿನಕಾಯಿಯ ರೇಟು ಹೆಚ್ಚಾಗಿದೆ. ಈ ದರ ಹೆಚ್ಚಳ ನೋಡಿದ್ರೆ ಜನರು ಸಾಂಬಾರ್ ಮಾಡಬೇಕೋ ಬೇಡ್ವೋ ಅನ್ನೋ ಕನ್ಫೂಶನ್ ಶುರುವಾದ್ರೂ ಅಚ್ಚರಿಯಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೊಮ್ಯಾಟೋ ರೇಟ್​​ ಕೇಳಿ ದಂಗಾದ ಗ್ರಾಹಕರು; ಕಳ್ಳರ ಹಾವಳಿ; ಜಮೀನಿನಲ್ಲೇ ರೈತರ ಠಿಕಾಣಿ!

https://newsfirstlive.com/wp-content/uploads/2023/07/Tomato.jpg

Load More