ತಂದೆ, ಮಗಳು ವಿದ್ಯುತ್ ಸ್ಪರ್ಶದಿಂದ ಸಾವು
ಹೊಲಕ್ಕೆ ನೀರು ಬಿಡಲು ಹೋದಾಗ ದುರ್ಘಟನೆ
ರಾಮಕೃಷ್ಣಾ ರೆಡ್ಡಿ (65), ನಿರ್ಮಲಾ (45) ಮೃತರು
ತುಮಕೂರು: ವಿದ್ಯುತ್ ಸ್ಪರ್ಶದಿಂದ ತಂದೆ, ಮಗಳು ಸಾವನ್ನಪ್ಪಿರೋ ದುರ್ಘಟನೆ ತುಮಕೂರಿನಲ್ಲಿ ನಡೆದಿದೆ. ಪಾವಗಡ ತಾಲೂಕಿನ ಬಸವನಹಳ್ಳಿ ಗ್ರಾಮದ ರೈತ ರಾಮಕೃಷ್ಣಾ ರೆಡ್ಡಿ (65), ಮಗಳು ನಿರ್ಮಲಾ (45) ಎಂಬುವರು ಮೃತ ದುರ್ದೈವಿಗಳು.
ರಾಮಕೃಷ್ಣಾ ರೆಡ್ಡಿ ತನ್ನ ಹೊಲಕ್ಕೆ ನೀರು ಬಿಡಲು ಹೋಗಿದ್ದ. ಈ ವೇಳೆ ವಿದ್ಯುತ್ ಸ್ಪರ್ಶದಿಂದ ರಾಮಕೃಷ್ಣಾ ರೆಡ್ಡಿ ಮೃತರಾಗಿದ್ದಾರೆ. ಎಷ್ಟೊತ್ತಾದರೂ ವಾಪಸ್ ಬಂದಿಲ್ಲ ಎಂದು ಮಗಳು ತಂದೆಯನ್ನು ಹುಡುಕಿಕೊಂಡು ಹೊಲಕ್ಕೆ ಹೋಗಿದ್ದಾರೆ.
ಇನ್ನು, ತಂದೆಯನ್ನು ಹುಡುಕಿಕೊಂಡು ಹೋದ ಮಗಳು ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿದ್ದಾರೆ. ಸದ್ಯ ಗ್ರಾಮಸ್ಥರು ತಂದೆ, ಮಗಳ ಮೃತ ದೇಹವನ್ನು ಮನೆಗೆ ಸಾಗಿಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ