newsfirstkannada.com

ಕೆಎಸ್​ಆರ್​ಟಿಸಿ​, ಬೈಕ್​ ನಡುವೆ ಭೀಕರ ಅಪಘಾತ​​: ಸ್ಥಳದಲ್ಲೇ ತಂದೆ, ಮಗ ಸಾವು

Share :

02-11-2023

    ಜವರಾಯನಾಗಿ ಬಂದ ಕೆಎಸ್​ಆರ್​ಟಿಸಿ ಬಸ್​, ಬೈಕ್‌ಗೆ ಡಿಕ್ಕಿ

    ಗಂಭೀರವಾಗಿ ಗಾಯಗೊಂಡ ಇಬ್ಬರು ಆಸ್ಪತ್ರೆಗೆ ದಾಖಲು

    ವಡಿಗೇರಾ ತಾಲೂಕಿನ ಶಿವಪುರ ಗ್ರಾಮದ ಬಳಿ ಘಟನೆ

ಯಾದಗಿರಿ: ಕೆಎಸ್​​ಆರ್​ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ತಂದೆ, ಮಗ ಸಾವನ್ನಪ್ಪಿರೋ ಘಟನೆ ವಡಿಗೇರಾ ತಾಲೂಕಿನ ಶಿವಪುರ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ಸಾಬಣ್ಣ ಶಿವಪುರ (38), ಮನೋಜ್ (07) ಮೃತ ದುರ್ದೈವಿಗಳು.

ಜಮೀನು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಏಕಾಏಕಿ ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ತಂದೆ ಮಗ ಮೃತಪಟ್ಟಿದ್ದಾರೆ. ರಂಜಿತಾ, ಚೈತ್ರಾ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ವಡಿಗೇರಾ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆಎಸ್​ಆರ್​ಟಿಸಿ​, ಬೈಕ್​ ನಡುವೆ ಭೀಕರ ಅಪಘಾತ​​: ಸ್ಥಳದಲ್ಲೇ ತಂದೆ, ಮಗ ಸಾವು

https://newsfirstlive.com/wp-content/uploads/2023/11/accident-59.jpg

Load More