/newsfirstlive-kannada/media/post_attachments/wp-content/uploads/2023/11/death-2023-11-26T224103.379.jpg)
ಚಿಕ್ಕೋಡಿ: ಜಮೀನಿನಲ್ಲಿ ಪಂಪ್ಸೆಟ್ ಬಂದ್​ ಮಾಡಲು ತೆರಳಿದಾಗ ವಿದ್ಯುತ್ ಸ್ಪರ್ಶಿಸಿ ತಂದೆ ಹಾಗೂ ಮಗ ಸಾವನ್ನಪ್ಪಿರುವ ಘಟನೆ ಅಥಣಿ ತಾಲೂಕಿನ ಚಿಕ್ಕಟಿ ಗ್ರಾಮದಲ್ಲಿ ನಡೆದಿದೆ. ತಂದೆ ಮಲ್ಲಿಕಾರ್ಜುನ ಸದಾಶಿವ ಪೂಜಾರಿ (32), ಮಗ ಪ್ರೀತಮ್​ ಮಲ್ಲಿಕಾರ್ಜುನ ಪೂಜಾರಿ (6) ಮೃತ ದುರ್ದೈವಿಗಳು.
ಕೃಷಿ ಕುಟುಂಬದವರಾದ ಮಲ್ಲಿಕಾರ್ಜುನ ಜಮೀನಿನಲ್ಲಿದ್ದ ಪಂಪ್ ಸೆಟ್ ಬಂದ್ ಮಾಡಲು ಹೋಗಿದ್ದರು. ಇದೇ ವೇಳೆ ಜಮೀನಿನ ರಸ್ತೆ ಮಧ್ಯೆ ಕೇಬಲ್ ಕಟ್ಟಾದ ಸ್ಥಳದಲ್ಲಿ ತೇವಾಂಶವಿದ್ದ ಕಾರಣ ವಿದ್ಯುತ್ ತಗುಲಿದೆ. ಪರಿಣಾಮ ವಿದ್ಯುತ್ ಸ್ಪರ್ಶದಿಂದ ತಂದೆ ಹಾಗೂ ಆರು ವರ್ಷದ ಪುಟ್ಟ ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆರು ವರ್ಷದ ಬಾಲಕ ಪ್ರೀತಮ ಅಥಣಿಯ ಶಾರದಾ ಮಾತಾ ಶಾಲೆಯಲ್ಲಿ ಒಂದನೇ ತರಗತಿಯಲ್ಲಿಯಲ್ಲಿ ಓದುತ್ತಿದ್ದನು.
ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಅಥಣಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಂದೆ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us