newsfirstkannada.com

ವರಮಹಾಲಕ್ಷ್ಮೀ ಹಬ್ಬಕ್ಕೆ ತಾವರೆ ಹೂ ಕೀಳಲು ಕೆರೆಗೆ ಇಳಿದ ತಂದೆ, ಮಗ; ನೀರಿನಲ್ಲಿ ಮುಳುಗಿ ಸಾವು

Share :

24-08-2023

    ತಾವರೆ ಹೂ ಕೀಳಲು ಕೆರೆಗೆ ಇಳಿದವರು ಕಾಣೆ

    ನೀರಿನಲ್ಲಿ ಮಳುಗಿ ಸಾವನ್ನಪ್ಪಿದ ತಂದೆ ಮತ್ತು ಮಗ

    ಹೂ ಕಿತ್ತು ಮಾರಾಟ ಮಾಡಬೇಕೆಂಬ ಆಲೋಚನೆಯಲ್ಲಿದ್ದ ತಂದೆ, ಮಗ

ದೊಡ್ಡಬಳ್ಳಾಪುರ: ತಾವರೆ ಹೂ ಕೀಳಲು ಹೋಗಿ ಕೆರೆಯಲ್ಲಿ ಮುಳುಗಿ ತಂದೆ, ಮಗ ದಾರುಣ ಸಾವನ್ನಪ್ಪಿದ ಘಟನೆ ಭೂಚನಹಳ್ಳಿ ಗ್ರಾಮದ ಕೆರೆಯಲ್ಲಿ ನಡೆದಿದೆ. ಮೃತಪಟ್ಟವರನ್ನು ತಂದೆ ಪುಟ್ಟರಾಜು (42), ಮಗ ಕೇಶವ (14) ಎಂದು ಗುರುತಿಸಲಾಗಿದೆ.

ಮೃತ ಪುಟ್ಟರಾಜು ಮತ್ತು ಕೇಶವ ದೊಡ್ಡಬಳ್ಳಾಪುರ ನಗರ ಶಾಂತಿನಗರದ ನಿವಾಸಿಗಳಾಗಿದ್ದು, ನಿನ್ನೆ ಸಂಜೆ ವರಮಹಾಲಕ್ಷ್ಮೀ ಹಬ್ಬಕ್ಕೆ ತಾವರೆ ಹೂ ಕೀಳಲು ಕೆರೆಯ ಬಳಿ ಹೋಗಿದ್ದರು. ತಾವರೆ ಹೂ ಕಿತ್ತು ಬಳಿಕ ಮಾರಾಟ ಮಾಡಬೇಕೆಂಬ ಆಲೋಚನೆಯಿಂದ ಕೆರೆ ಬಳಿ ಬಂದಿದ್ದರು. ಆದರೆ ಕೆರೆಯ ದಡದಲ್ಲಿ ಮೊಬೈಲ್, ಚಪ್ಪಲಿ ಬಿಟ್ಟು ತಾವರೆ ಹೂ ಕೀಳಲು ಮುಂದಾದಾಗ ಅವಘಡ ಸಂಭವಿಸಿದೆ.

ಇಂದು ಬೆಳಗ್ಗೆಯಿಂದ ಅಗ್ನಿಶಾಮಕದಳದ ಸಿಬ್ಬಂದಿಗಳ ಸಹಾಯದಿಂದ ಕೆರೆಯಿಂದ ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವರಮಹಾಲಕ್ಷ್ಮೀ ಹಬ್ಬಕ್ಕೆ ತಾವರೆ ಹೂ ಕೀಳಲು ಕೆರೆಗೆ ಇಳಿದ ತಂದೆ, ಮಗ; ನೀರಿನಲ್ಲಿ ಮುಳುಗಿ ಸಾವು

https://newsfirstlive.com/wp-content/uploads/2023/08/Son-and-father.jpg

Load More