newsfirstkannada.com

Video: ಲವ್ವರ್​ ಜೊತೆ ಓಡಿಹೋಗಿದ್ದ 17 ವರ್ಷದ ಬಾಲಕಿ.. ವಾಪಸ್​ ಬಂದ ಮಗಳನ್ನ ಬೈಕ್​ಗೆ ಕಟ್ಟಿ ಎಳೆದೊಯ್ದು ಕೊಂದ ಪಾಪಿ ತಂದೆ

Share :

11-08-2023

    ಮರ್ಯಾದಾ ಹತ್ಯೆ, ಮಗಳನ್ನ ಕೊಂದ ತಂದೆ!

    ಧರಧರನೇ ರಸ್ತೆ ಮೇಲೆ ಪಾಪಿ ತಂದೆಯ ಪಾಪಕೃತ್ಯ

    ಆರಂಭವಾಯ್ತು ಪ್ರೀತಿ.. ಅಂತ್ಯ ತಂದ ವಿಕೃತಿ!

ಮರ್ಯಾದಾ ಹತ್ಯೆ. ಇದು ಮತ್ತೆ ಮತ್ತೆ ಕಂಡು ಬರ್ತಿದೆ. ಕಾಣ ಸಿಗ್ತಿದೆ. ಮಕ್ಕಳ ಹೊಸ ಪ್ರೀತಿ, ತಂದೆ-ತಾಯಿಯ ವಾತ್ಸಲ್ಯ ಇವರೆಡರ ನಡುವಿನ ಹಗ್ಗ-ಜಗ್ಗಾಟದಿಂದ ಉದ್ಭವಿಸೋ ಮರ್ಯಾದೆಯ ಪ್ರಶ್ನೆ ಕರುಳಿನ ಕುಡಿಗಳನ್ನೇ ಕತ್ತರಿಸುವಂತೆ ಮಾಡ್ತಿದೆ. ತಾವೇ ಹೆತ್ತ ಮಕ್ಕಳನ್ನ ತಂದೆ-ತಾಯಿಯರೇ ಕೊಲ್ಲೋ ಭೀಕರತೆಯ ಪ್ರಕರಣಗಳು ದೇಶವನ್ನೇ ಬೆಚ್ಚಿಬೀಳಿಸ್ತಿವೆ. ಇದೀಗ ಪಂಜಾಬ್​ನಲ್ಲೊಂದು ಇಂಥದ್ದೇ ಪ್ರಕರಣ ಬೆಳಕಿಗೆ ಬಂದಿದೆ.

ಒಂದು ಖಾಲಿ ರೋಡ್​. ಹಳ್ಳಿ ಬೇರೆ ಈ ರಸ್ತೆಯಲ್ಲಿ ಓರ್ವ ತನ್ನ ಪಾಡಿಗೆ ತಾನು ಬಂದು, ಪಕ್ಕವೇ ನಿಲ್ಲಿಸಿದ್ದ ತನ್ನ ಬೈಕ್ ಮೇಲೆ ಕೂರ್ತಾನೆ ಅಷ್ಟೆ. ಹಿಂದಿನಿಂದ ಒಂದು ಬೈಕ್​ ವೇಗವಾಗಿ ಹೋಗುತ್ತೆ. ಆಗ ಆತನಿಗೆ ಕಂಡಿದ್ದು ಅಕ್ಷರಶಃ ಬೀಭತ್ಸ ದೃಶ್ಯ

ಬೈಕ್​ನಲ್ಲಿದ್ದ ಆತ, ಯುವತಿಯೊಬ್ಬಳನ್ನ ಹಿಂದಕ್ಕೆ ಕಟ್ಕೊಂಡು ಕ್ರೂರಿಯಂತೆ ಎಳೆದೊಯ್ದಿದ್ದಾನೆ. ಕಣ್ಮುಚ್ಚಿ ಬಿಡುವಷ್ಟರಲ್ಲಿ ಬೈಕ್ ಪಾಸಾಗಿದ್ದು, ಇದ್ದನ್ನೆಲ್ಲಾ ಕಂಡು ಎಂಥವರಿಗೂ ಮೈ ನಡುಗದೇ ಇರಲಾರದು. ಇಲ್ಲಿ ಹೀಗೆ ಎಳೆದೊಯ್ತಿರೋದು ಬೇಱರು ಅಲ್ಲ. ಖುದ್ದು ತಂದೆಯೇ ಮಗಳೊಂದಿಗೆ ವರ್ತಿಸಿದ ಪರಿ ಇದು.

ಮಗಳನ್ನ ಬೈಕ್​ನ ಹಿಂದಕ್ಕೆ ಕಟ್ಟಿ ಎಳೆದೊಯ್ದ ತಂದೆ

ಇದು ಪಂಜಾಬ್​ನ ಅಮೃತಸರ್​ನಲ್ಲಿ ನಡೆದಿರೋ ಘಟನೆ. ಇಲ್ಲಿನ ಮುಚ್ಚಾಲ್ ಗ್ರಾಮದಲ್ಲಿ ತಂದೆಯೇ ತನ್ನ ಮಗಳ ಪಾಲಿಗೆ ಯಮನಾಗಿದ್ದಾನೆ.

ದೃಶ್ಯದಲ್ಲಿ ಕಂಡಂತೆ ಬೈಕ್​ನಲ್ಲಿ ಕುಳಿತಿರೋದು ತಂದೆ. ಧರಧರನೆ ಎಳೆದೊಯ್ತಿರೋದು ಖುದ್ದು ತನ್ನ ಮಗಳನ್ನೇ. ಮುಂಭಾಗದ ಸೀಟ್​ನಲ್ಲಿ ಕುಳಿತಿದ್ದ ತಂದೆ ಬೈಕ್​ನ ಹಿಂಬದಿಗೆ ಹಗ್ಗವೊಂದನ್ನ ಕಟ್ಟಿದ್ದ. ಆ ಹಗ್ಗದ ಇನ್ನೊಂದು ತುದಿಗೆ ಮಗಳ ಕಾಲನ್ನ ಕಟ್ಟಿ, ಲಾಕ್ ಮಾಡಿದ್ದ. ಬೈಕ್​ಗೆ ಮಗಳನ್ನ ಕಟ್ಟಿ ಇಡೀ ಗ್ರಾಮದ ರಸ್ತೆ ರಸ್ತೆಗಳಲ್ಲಿ ಧರಧರನೇ ಎಳೆದೊಯ್ದಿದ್ದಾನೆ. ಈ ಕ್ರೂರತ್ವಕ್ಕೆ ಕಾರಣವಾಗಿದ್ದು, ಪ್ರೀತಿ.

17 ವರ್ಷದ ಬಾಲಕಿಯೊಬ್ಬಳು ತನ್ನ ಪೋಷಕರಿಗೆ ತಿಳಿಸದೆ ಮನೆಬಿಟ್ಟು ಹೋಗಿದ್ದಳು. ಇದ್ರಿಂದ ಆತಂಕಗೊಂಡ ಪೋಷಕರು ಆಕೆಗಾಗಿ ಇಡೀ ಊರೆಲ್ಲಾ ಹುಡುಕಾಡಿದ್ದಾರೆ. ಆದ್ರೆ ಎಲ್ಲೂ ಪತ್ತೆಯಾಗಿರಲಿಲ್ಲ. ಹೀಗೆ ನಾಪತ್ತೆಯಾದ  ಮಗಳು ಎರಡು ದಿನದ ಬಳಿಕ ವಾಪಸ್​ ಬಂದಿದ್ದಾಳೆ. ಆದ್ರೆ ಒಬ್ಬಳೇ ಹಿಂದಿರುಗಲಿಲ್ಲ. ಬದಲಾಗಿ ಓರ್ವ ಯುವಕನ ಜೊತೆಗೆ ವಾಪಸ್ ಬಂದಿದ್ದಾಳೆ. ಇದನ್ನ ಕಂಡ ಆಕೆಯ ತಂದೆ ಅಕ್ಷರಶಃ ಕೋಪಗೊಂಡಿದ್ದಾರೆ. ಆಕೆಯ ಜುಟ್ಟನ್ನ ಹಿಡಿದು ಎಳೆದಾಡಿ, ಹೊಡೆದಿದ್ದಾನೆ. ಬಳಿಕ ಬೈಕ್​ಗೆ ಆಕೆಯನ್ನ ಕಟ್ಕೊಂಡ ತಂದೆ ಗ್ರಾಮದ ಸುತ್ತೆಲ್ಲಾ ಎಳೆದೊಯ್ದಿದ್ದಾನೆ.

ರೈಲ್ವೇ ಟ್ರ್ಯಾಕ್​​ ಪಕ್ಕ ಸಿಕ್ತು ಮೃತದೇಹ

ಹೀಗೆ ಮಗಳನ್ನ ರೈಲ್ವೇ ಮಾರ್ಗದತ್ತ ಎಳೆದೊಯ್ದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಪೊಲೀಸರು ಬರುವಷ್ಟರಲ್ಲಿ ರೈಲ್ವೇ ಟ್ರ್ಯಾಕ್​​ನ ಪಕ್ಕ, ಆಕೆಯ ಮೃತದೇಹ ಪತ್ತೆಯಾಗಿದೆ.

ಈ ಭೀಕರ ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿರೋ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಅತ್ತ ಮಗಳನ್ನ ಬೈಕ್​ಗೆ ಕಟ್ಟಿ ಎಳೆದೊಯ್ದಿದ್ದ ತಂದೆ ನಾಪತ್ತೆಯಾಗಿದ್ದಾನೆ. ಮನೆಗೆ ಹೋಗಿ ಪೊಲೀಸರು ವಿಚಾರಣೆ ನಡೆಸಿದ್ರೂ ಆತನ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ. ಸದ್ಯ ತಲೆಮರೆಸಿಕೊಂಡ ತಂದೆಗಾಗಿ ಪೊಲೀಸರು ಎಲ್ಲಾ ಕಡೆ ಹುಡುಕಾಟ ನಡೆಸ್ತಿದ್ದಾರೆ. ಆದರೆ ಕ್ರೂರಿ ಅಪ್ಪ ಕಾಣದಂತೆ ಮಾಯವಾಗಿದ್ದಾನೆ.. ಅತ್ತ ಈ ಭೂಮಿಯಿಂದ ಮಗಳು ಕಾಣೆಯಾಗಿದ್ದಾಳೆ. ಈ ನಡುವೆ ತಂದೆ ಪ್ರೀತಿಯೂ, ಮಗಳ ಪ್ರೀತಿಯೂ ನಾಪತ್ತೆ. ಇದು ಮರ್ಯಾದಾ ಹತ್ಯೆಯ ಅಸಲಿ ಸತ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಲವ್ವರ್​ ಜೊತೆ ಓಡಿಹೋಗಿದ್ದ 17 ವರ್ಷದ ಬಾಲಕಿ.. ವಾಪಸ್​ ಬಂದ ಮಗಳನ್ನ ಬೈಕ್​ಗೆ ಕಟ್ಟಿ ಎಳೆದೊಯ್ದು ಕೊಂದ ಪಾಪಿ ತಂದೆ

https://newsfirstlive.com/wp-content/uploads/2023/08/Amrithsar.jpg

Load More