newsfirstkannada.com

ಮುದ್ದಾದ ಕಂದಮ್ಮಗಳ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಂದ ಪಾಪಿ ಅಪ್ಪ

Share :

22-06-2023

    ಅಪ್ಪನ ಪೈಶಾಚಿಕ ಕೃತ್ಯಕ್ಕೆ ಬೆಚ್ಚಿಬಿದ್ದ ಮಂಡ್ಯ

    ಇಂದು ಬೆಳಗ್ಗೆ 4 ಗಂಟೆಗೆ ಮಕ್ಕಳ ಬರ್ಬರ ಕೊಲೆ

    ಪತ್ನಿಯೂ ಗಂಭೀರ, ಮೈಸೂರಲ್ಲಿ ಆಸ್ಪತ್ರೆಗೆ ದಾಖಲು

ಮಂಡ್ಯ: ಪಾಪಿ ತಂದೆ ಪುಟ್ಟ-ಪುಟ್ಟ ಕಂದಮ್ಮಗಳಿಗೆ ಸುತ್ತಿಗೆಯಲ್ಲಿ‌ ಹೊಡೆದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲದಲ್ಲಿ ನಡೆದಿದೆ.

ಆದಿತ್ಯ (3) , ಅಂಬಿಕಾ (4) ತಂದೆಯಿಂದ ಕೊಲೆಯಾದ ಮಕ್ಕಳು. ಇವರ ಕುಟುಂಬ ಜೇವರ್ಗಿಯಿಂದ ಬಂದು ಮರಳಗಾಲದ ಆಲೆಮನೆಯಲ್ಲಿ ಕೆಲಸ ಮಾಡುತ್ತಿತ್ತು. ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಕೊಲೆ ತಂದೆ ಎಸ್ಕೇಪ್ ಆಗಿದ್ದಾನೆ.

ಕೊಲೆ ಮಾಡುವ ವೇಲೆ ಪತ್ನಿ ಮಕ್ಕಳನ್ನು ಬಚಾವ್ ಮಾಡಲು ಹೋಗಿದ್ದಾಳೆ. ಆಗ ಪತ್ನಿ ಮೇಲೂ ಹಲ್ಲೆ ಮಾಡಿದ್ದು, ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಸದ್ಯ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಕೊಲೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುದ್ದಾದ ಕಂದಮ್ಮಗಳ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಂದ ಪಾಪಿ ಅಪ್ಪ

https://newsfirstlive.com/wp-content/uploads/2023/06/MND_MURDER-1.jpg

Load More