newsfirstkannada.com

ಮಗಳನ್ನು ಪ್ರೀತಿ ಮಾಡಿದ್ದಕ್ಕೆ ಚೂರಿ ಇರಿದ ತಂದೆ; ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಯುವಕ

Share :

17-07-2023

    ಪ್ರೀತಿ ತಂದ ಆಪತ್ತು.. ಯುವಕರ ಜೀವಕ್ಕೆ ಕುತ್ತು..!

    1 ವರ್ಷದಿಂದ ಯುವತಿಯನ್ನ ಪ್ರೀತಿ ಮಾಡ್ತಿದ್ದ ಶಶಾಂಕ್

    ಪ್ರೀತಿಯ ಎಂಬ ಅಮಲಲ್ಲಿ ಸುತ್ತಾಡ್ತಿದ್ದ ಪ್ರಣಯ ಪಕ್ಷಿಗಳು

ಮೊನ್ನೆ ನಡೆದ ಘೋರ ಘಟನೆ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ಮಗಳನ್ನ ಪ್ರೀತಿಸಿದ್ದಕ್ಕೆ ತಂದೆಯೊಬ್ಬ ಯುವಕನಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದನ್ನ ನೋಡಿ ಬೆಂಗಳೂರಿಗರು ದಂಗಾಗಿದ್ರು. ಅಗ್ನಿಯಲ್ಲಿ ಬೆಂದ ಶಶಾಂಕ್, ಇನ್ನೂ ಕೂಡ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸ್ತಿದ್ದಾನೆ. ಆದ್ರೆ, ಆ ದುರಂತ ಮಾಸುವ ಮುನ್ನವೇ ಮತ್ತೊಂದು ಅಂತಹದ್ದೇ ಪ್ರಕರಣ ತಡರಾತ್ರಿ ಧಾರವಾಡದಲ್ಲಿ ನಡೆದು ಬಿಟ್ಟಿದೆ.

ಗುಜರಿ ಅಂಗಡಿಯಲ್ಲಿ ಕೆಲಸ

ಈತನ ಹೆಸರು ಕೂಡ ಶಶಾಂಕ್ . ಜಸ್ಟ್ 20 ವರ್ಷ. ಸೈಧಾಪುರ ಗೌಡ ಓಣಿಯಲ್ಲಿ ವಾಸವಿದ್ದ. ಹೊಟ್ಟೆಗಾಗಿ ಗುಜರಿ ಅಂಗಡಿಯಲ್ಲಿ ಕೆಲಸ ಮಾಡ್ಕೊಂಡಿದ್ದ. ಆದ್ರೆ, ಇದೀಗ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡ್ತಿದ್ದಾನೆ. ಅವನ ಈ ಸ್ಥಿತಿಗೆ ಕಾರಣವಾಗಿದ್ದು ಬೇರೆನೂ ಅಲ್ಲ ಮತ್ತದೇ ಪ್ರೀತಿ. ಮಗಳನ್ನ ಪ್ರೀತಿ ಮಾಡ್ತಿದ್ದಕ್ಕೆ ಯುವತಿಯ ತಂದೆ ಶಶಾಂಕನಿಗೆ ಚಾಕು ಇರಿದುಬಿಟ್ಟಿದ್ದಾನೆ.
ತ್ತು!

ಸುಖಾಸುಮ್ಮನೆ ಖ್ಯಾತೆ ತೆಗೆದಿದ್ದ ಹುಲಗಪ್ಪ 

ಶಶಾಂಕ್ ಕಳೆದ ಒಂದು ವರ್ಷದಿಂದ ಯುವತಿಯನ್ನ ಪ್ರೀತಿ ಮಾಡ್ತಿದ್ದ. ಆ ಯುವತಿ ಧಾರವಾಡದ ಕಾಲೇಜುವೊಂದರಲ್ಲಿ ಓದ್ತಾಯಿದ್ದಳು. ಪ್ರೀತಿ ಗುಂಗಿನಲ್ಲಿ ತೇಲಾಡ್ತಿದ್ದ ಪ್ರಯಣ ಪಕ್ಷಿಗಳು ಜಗತ್ತನ್ನೇ ಮರೆತು ತಮ್ಮ ಪ್ರಪಂಚದಲ್ಲಿ ಹಾರಾಡ್ತಿದ್ದರಂತೆ. ಇದನ್ನ ನೋಡಿದ ಯುವತಿ ತಂದೆ ಹುಲಗಪ್ಪ, ಶಶಾಂಕ್​ನನ್ನ ಕರೆದು ಎರಡ್ಮೂರು ಬಾರಿ ವಾರ್ನಿಂಗ್ ಕೊಟ್ಟಿದ್ದಾರೆ. ಇಷ್ಟಾದ್ರೂ, ಅವರ ಮಧ್ಯೆಯಿದ್ದ ಪ್ರೀತಿ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ. ಇದನ್ನ ಕಂಡ ಹುಲಗಪ್ಪ ಮಾತ್ರ ಕಾದು ಕೆಂಡವಾಗಿ ಹೋಗಿದ್ದ. ಪರಿಣಾಮ, ಶಶಾಂಕ್​ಗೆ ಹೇಗಾದ್ರೂ ಮಾಡಿ ಬುದ್ಧಿ ಕಲಿಸಲೇ ಬೇಕು ಅಂತಾ ಅಂದುಕೊಂಡ ಹುಲಗಪ್ಪ, ನಿನ್ನೆ ಸಂಜೆ ಸ್ನೇಹಿತರ ಜೊತೆ ಕುಳಿತಿದ್ದ ಶಶಾಂಕನ ಬಳಿ ಹೋಗಿ ಸುಖಾಸುಮ್ಮನೆ ಖ್ಯಾತೆ ತೆಗೆದಿದ್ದಾನಂತೆ. ಕೋಪದಲ್ಲಿದ್ದ ಹುಲಗಪ್ಪ ಏಕಾಏಕಿ ಶಶಾಂಕನ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

ರಾಕ್ಷಸಿ ಕೃತ್ಯವೆಸಗಿದ ಯುವತಿಯ ತಂದೆ

ಯುವತಿ ತಂದೆ ಹುಲಗಪ್ಪ, ಶಶಾಂಕ್​ನ ಮೇಲೆ ತೋರಿದ್ದ ರಾಕ್ಷಸಿ ಕೃತ್ಯ ಎಷ್ಟರ ಮಟ್ಟಿಗೆ ಇತ್ತು ಅಂದ್ರೆ, ಊಹೆಗೂ ಮೀರಿದ್ದ ಕ್ರೌರ್ಯವಾಗಿತ್ತು. ಶಶಾಂಕನ ಹೊಟ್ಟೆಗೆ ತ್ರೀವವಾಗಿ ಇರಿದ ಪರಿಣಾಮ, ಆತನ ಕರಳು ಆಚೆ ಬಂದು, ನೋವಿನಿಂದ ನರಳಾಡಿದ್ದಾನೆ. ತಕ್ಷಣ ಆತನನ್ನ ಜಿಲ್ಲಾಸ್ಪತ್ರೆಗೆ ದಾಖಸಿಲಾಯ್ತು, ಸದ್ಯ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾಸಿಸಲಾಗಿದೆ.

ಶಶಾಂಕ್​​ನ ಸ್ಥಿತಿ ನೋಡಿ ಕುಟುಂಬಸ್ಥರು ಶಾಕ್!

ಇನ್ನು, ಶಶಾಂಕ್​​ನ ಸ್ಥಿತಿ ಕಂಡು ಕುಟುಂಬಸ್ಥರು ಶಾಕ್ ಆಗಿದ್ದಾರೆ. ಶಶಾಂಕ್ ಪ್ರೀತಿ ಮಾಡ್ತಿದ್ದ ವಿಷಯವೂ ಅವರಿಗೆ ಗೊತ್ತಿರ್ಲಿವಂತೆ. ನಮ್ಮ ಮಗ ಸಂಜೆವರೆಗೂ ಮನೆಯಲ್ಲಿದ್ದ, ಆಗ ತಾನೇ ಫ್ರೆಂಡ್ಸ್ ಜೊತೆ ಹೋಗಿದ್ದ, ಅಂತಾ ಆತನ ಸ್ಥಿತಿ ಕಂಡು ಕಣ್ಣೀರಾಕಿದ್ದಾರೆ.

ಧಾರವಾಡ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ಅದೇನೆ ಇರ್ಲಿ, ಪ್ರೀತಿ ಮಾಡಿದ ತಪ್ಪಿಗೆ ಶಶಾಂಕ್ ಘನಘೋರ ಶಿಕ್ಷೆ ಅನುಭವಿಸುವಂತಾಗಿರೋದು ಮಾತ್ರ ನಿಜಕ್ಕೂ ವಿಪರ್ಯಾಸ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಗಳನ್ನು ಪ್ರೀತಿ ಮಾಡಿದ್ದಕ್ಕೆ ಚೂರಿ ಇರಿದ ತಂದೆ; ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಯುವಕ

https://newsfirstlive.com/wp-content/uploads/2023/07/Dharwad-Shashank-1.jpg

Load More