newsfirstkannada.com

ಲೈಂಗಿಕ ದೌರ್ಜನ್ಯ ಕೇಸ್​ಗೆ ಬಿಗ್​ ಟ್ವಿಸ್ಟ್​​.. ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್​ಗೆ ಮಧ್ಯಂತರ ಜಾಮೀನು

Share :

18-07-2023

    ಲೈಂಗಿಕ ದೌರ್ಜನ್ಯ ಕೇಸ್ ಆರೋಪಿ ಬ್ರಿಜ್ ಭೂಷಣ್ ಸಿಂಗ್​

    ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷನಿಗೆ ರಿಲೀಫ್​​!

    BJP MP ಬ್ರಿಜ್ ಭೂಷಣ್ ಸಿಂಗ್​ಗೆ ಮಧ್ಯಂತರ ಜಾಮೀನು

ನವದೆಹಲಿ: ಲೈಂಗಿಕ ದೌರ್ಜನ್ಯ ಕೇಸ್​​ವೊಂದರಲ್ಲಿ ಪ್ರಮುಖ ಆರೋಪಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್​ಗೆ ಜಾಮೀನು ಸಿಕ್ಕಿದೆ. ಡೆಲ್ಲಿ ರೌಸ್​ ಅವೆನ್ಯೂ ಕೋರ್ಟ್​​​​ ಬ್ರಿಜ್ ಭೂಷಣ್ ಶರಣ್ ಸಿಂಗ್​ಗೆ ಮಧ್ಯಂತರ ಜಾಮೀನು ನೀಡಿ ಆದೇಶಿಸಿದೆ. ಹಾಗೆಯೇ ಅರ್ಜಿ ವಿಚಾರಣೆಯನ್ನು ಜುಲೈ 20ನೇ ತಾರೀಕಿಗೆ ಮುಂದೂಡಿದೆ.

ಕುಸ್ತಿ ಫೆಡರೇಷನ್​ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಆರು ಪ್ರಮುಖ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. 506 (ಕ್ರಿಮಿನಲ್ ಬೆದರಿಕೆ), 354, 354 ಎ (ಲೈಂಗಿಕ ಕಿರುಕುಳ) ಸೇರಿದಂತೆ ವಿವಿಧ ಸೆಕ್ಷನ್​​ಗಳ ಅಡಿಯಲ್ಲಿ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಒಂದು ಕೇಸ್​ನಲ್ಲಂತೂ ಸಿಂಗ್​​, ಸತತ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವರದಿಯಾಗಿದೆ.

ಎರಡು ಕೇಸ್​​ಗಳಲ್ಲಿ ಬ್ರಿಜ್ ಭೂಷಣ್ ವಿರುದ್ಧ ಸೆಕ್ಷನ್ 354, 354A ಮತ್ತು 354D ಅಡಿಯಲ್ಲಿ ಎಫ್​ಐಆರ್​ ಮಾಡಲಾಗಿದೆ. ನಾಲ್ಕು ಪ್ರಕರಣಗಳಲ್ಲಿ ಸೆಕ್ಷನ್ 354 ಮತ್ತು 354A ಅಡಿಯಲ್ಲಿ ಕೇಸ್​​ ದಾಖಲಿಸಲಾಗಿದೆ. ಕನಿಷ್ಠ ಐದು ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೈಂಗಿಕ ದೌರ್ಜನ್ಯ ಕೇಸ್​ಗೆ ಬಿಗ್​ ಟ್ವಿಸ್ಟ್​​.. ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್​ಗೆ ಮಧ್ಯಂತರ ಜಾಮೀನು

https://newsfirstlive.com/wp-content/uploads/2023/07/Brij-Bhushan-Singh.jpg

Load More