News First Kannada https://newsfirstlive.com Tue, 24 Nov 2020 07:14:26 +0000 en-US hourly 1 https://wordpress.org/?v=5.2.1 https://newsfirstlive.com/wp-content/uploads/2020/08/newsfirstlogo-new.png News First Kannada https://newsfirstlive.com 32 32 40 ವರ್ಷದ ಹಿಂದೆ ನಟ ಜಗ್ಗೇಶ್​ರನ್ನ ಗುರುತಿಸಿದ್ದು ಯಾರು.? https://newsfirstlive.com/2020/11/24/here-is-the-point-that-brought-actor-jaggesh-to-limelight-40-years-back/ https://newsfirstlive.com/2020/11/24/here-is-the-point-that-brought-actor-jaggesh-to-limelight-40-years-back/#respond Tue, 24 Nov 2020 06:58:57 +0000 https://newsfirstlive.com/?p=357185

ನವೆಂಬರ್​ 17ಕ್ಕೆ ನವರಸ ನಾಯಕ ಜಗ್ಗೇಶ್​ ಚಿತ್ರರಂಗದಲ್ಲಿ 40 ವರ್ಷಗಳನ್ನ ಪೂರೈಸಿದ್ದಾರೆ. ಈ ಸಂದರ್ಭ ಚಿತ್ರರಂಗದ ಎಲ್ಲಾ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು ಜಗ್ಗೇಶ್​ಗೆ ಶುಭಾಶಯ ತಿಳಿಸಿದ್ದರು. ಸದ್ಯ ಜಗ್ಗೇಶ್​ ಈ ಬಗ್ಗೆ ಮಾತನಾಡೋದಕ್ಕೆ ಇಂದು ಮಾಧ್ಯಮಗೋಷ್ಠಿ ಕರೆದಿದ್ದು, ತಮ್ಮ ಜರ್ನಿ ಬಗ್ಗೆ ಎಳೆಎಳೆಯಾಗಿ ಹಂಚಿಕೊಂಡಿದ್ದಾರೆ. ‘ನಾನು ಯಾರೂ ಅಂತಾನೇ ಯಾರಿಗೂ ಗೊತ್ತಿರಲಿಲ್ಲ. ಆಗ ಕ್ಯಾಮೆರಾಮನ್ ನಾಗೇಶ್ ನನಗೆ ಸಹಾಯ ಮಾಡಿದ್ರು. ಆ ಸಂದರ್ಭದಲ್ಲಿ ನನ್ನನ್ನ ಗುರುತಿಸಿದ್ದು ಮಾಧ್ಯಮ. ಅಲ್ಲಿಂದ ನನಗೆ ಅವಕಾಶಗಳು ಸಿಗೋಕೆ ಆರಂಭಔಆಯ್ತು. ನಂತರದಲ್ಲಿ ವೇಣು, […]

The post 40 ವರ್ಷದ ಹಿಂದೆ ನಟ ಜಗ್ಗೇಶ್​ರನ್ನ ಗುರುತಿಸಿದ್ದು ಯಾರು.? appeared first on News First Kannada.

]]>

ನವೆಂಬರ್​ 17ಕ್ಕೆ ನವರಸ ನಾಯಕ ಜಗ್ಗೇಶ್​ ಚಿತ್ರರಂಗದಲ್ಲಿ 40 ವರ್ಷಗಳನ್ನ ಪೂರೈಸಿದ್ದಾರೆ. ಈ ಸಂದರ್ಭ ಚಿತ್ರರಂಗದ ಎಲ್ಲಾ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು ಜಗ್ಗೇಶ್​ಗೆ ಶುಭಾಶಯ ತಿಳಿಸಿದ್ದರು. ಸದ್ಯ ಜಗ್ಗೇಶ್​ ಈ ಬಗ್ಗೆ ಮಾತನಾಡೋದಕ್ಕೆ ಇಂದು ಮಾಧ್ಯಮಗೋಷ್ಠಿ ಕರೆದಿದ್ದು, ತಮ್ಮ ಜರ್ನಿ ಬಗ್ಗೆ ಎಳೆಎಳೆಯಾಗಿ ಹಂಚಿಕೊಂಡಿದ್ದಾರೆ.

‘ನಾನು ಯಾರೂ ಅಂತಾನೇ ಯಾರಿಗೂ ಗೊತ್ತಿರಲಿಲ್ಲ. ಆಗ ಕ್ಯಾಮೆರಾಮನ್ ನಾಗೇಶ್ ನನಗೆ ಸಹಾಯ ಮಾಡಿದ್ರು. ಆ ಸಂದರ್ಭದಲ್ಲಿ ನನ್ನನ್ನ ಗುರುತಿಸಿದ್ದು ಮಾಧ್ಯಮ. ಅಲ್ಲಿಂದ ನನಗೆ ಅವಕಾಶಗಳು ಸಿಗೋಕೆ ಆರಂಭಔಆಯ್ತು. ನಂತರದಲ್ಲಿ ವೇಣು, ರಾಕ್ಲೈನ್ ಎಲ್ಲರ ಪರಿಚಯ ಆಯ್ತು. ಆ ವಯಸ್ಸಿಗೆ ನಾನು ತುಂಬಾ ಕಾನ್ಫಿಡೆಂಟ್ ಆಗಿರುತ್ತಿದ್ದೆ.

ಆಗಲೇ ನನಗೆ ವೀರ ಸ್ವಾಮಿ ಅವರು ಸಿನಿಮಾ ಆಫರ್ ಕೊಟ್ಟಿದ್ರು. ನನ್ನ ಫೋಟೋ ನೋಡಿ ರಜಿನಿಕಾಂತ್ ಥರ ಕಾಣಿಸ್ತೀಯ ಅಂತ ಹೇಳಿದ್ರು. ಅಲ್ಲಿಂದ ರಣಧೀರ ಆಫರ್ ಸಿಕ್ಕಿತ್ತು. ಆಮೇಲೆ ಮದ್ರಾಸ್​ಗೆ ತೆರಳಿದೆ. ಕೈಯಲ್ಲಿ ಆಗ ಏನು ಇರಲಿಲ್ಲ. ಆದರೆ, ಎರಡು ಪಾತ್ರಗಳು ನನಗೆ ದೊಡ್ಡ ತಿರುವು ಕೊಟ್ಟಿತ್ತು. ಅದುವೇ, ರಣರಂಗ ಸಿನಿಮಾ. ಅದರ ಕ್ರೆಡಿಟ್ ನಾನು ಶಿವಣ್ಣನಿಗೆ ಕೊಡಬೇಕು. ಆ ಸಂದರ್ಭದಲ್ಲಿ ಶಿವಣ್ಣನ ಮನೆ ಬಾಗಿಲು ತಟ್ಟಿದ್ದೆ. ನನ್ನ ನೋಡಿ ಏನ್ ಸಮಾಚಾರ ಅಂತಾ ಕೇಳಿದ್ರು. ಆಗ ಬಾಯಿ ಬಿಟ್ಟು ಸಿನಿಮಾ ಆಫರ್ ಕೇಳಿದೆ. ಶಿವಣ್ಣ ಫೋನ್ ಮಾಡಿ ನನಗೆ ಆಫರ್ ಕೊಡಿಸಿದ್ರು.

ವಿಶೇಷ ಅಂದ್ರೆ, ಅದು ಬೇರೆಯವರಿಗೆ ಫೈನಲ್ ಆಗಿದ್ದ ಪಾತ್ರ. ಹೀಗಾಗಿ ಆ ಸೆಟ್​ಗೆ ಹೋದಾಗ ಯಾರೂ ನನ್ನನ್ನು ಮಾತಾಡಿಸಿರಲಿಲ್ಲ. ಆಗ ನಿರ್ದೇಶಕ ಸೋಮಶೇಖರ್ ಮಾತನಾಡಿಸಿ ಒಂದು ಡೈಲಾಗ್ ಕೊಟ್ರು. ಸೋಮಶೇಖರ್ ಅವರು ನನ್ನ ನಟನೆ ನೋಡಿ ಫಿದಾ ಆಗಿದ್ರು. ನನ್ನ ಬಗ್ಗೆ ಕೇಳಿ ತಿಳಿದುಕೊಂಡ್ರು. ಅಣ್ಣಾವ್ರು ನನ್ನ ಪಾತ್ರ ನೋಡಿ ಅದ್ಭುತ ಅಂತ ಬೆನ್ನು ತಟ್ಟಿದ್ರು.’

– ಜಗ್ಗೇಶ್, ನಟ

The post 40 ವರ್ಷದ ಹಿಂದೆ ನಟ ಜಗ್ಗೇಶ್​ರನ್ನ ಗುರುತಿಸಿದ್ದು ಯಾರು.? appeared first on News First Kannada.

]]>
https://newsfirstlive.com/2020/11/24/here-is-the-point-that-brought-actor-jaggesh-to-limelight-40-years-back/feed/ 0
ಶಿರಾದ ಸೀಗಲಹಳ್ಳಿ ಸರ್ಕಾರಿ ಶಾಲೆ ಅಭಿವೃದ್ಧಿಗೆ ₹1 ಲಕ್ಷ ದೇಣಿಗೆ ನೀಡಿದ ಹೆಚ್​ಡಿಡಿ https://newsfirstlive.com/2020/11/24/hdd-donated-1-lakh-rs-to-govt-school/ https://newsfirstlive.com/2020/11/24/hdd-donated-1-lakh-rs-to-govt-school/#respond Tue, 24 Nov 2020 06:43:18 +0000 https://newsfirstlive.com/?p=357145

ತುಮಕೂರು: ಶಿರಾ ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಅವರು ಶಿರಾ ತಾಲೂಕನ್ನು ದತ್ತು ಪಡೆಯುವುದಾಗಿ ಹೇಳಿದ್ದರು. ತಮಗೆ ಬರುವ ಅನುದಾನದಲ್ಲಿ ಅಭಿವೃದ್ಧಿ ಮಾಡಲು ಶಿರಾ ತಾಲ್ಲೂಕನ್ನು ದತ್ತು ಪಡೆಯಲು ನಿರ್ಧಾರ ಮಾಡಿದ್ದೇನೆ ಎಂದು ಸೀಗಲಹಳ್ಳಿ ಗ್ರಾಮದಲ್ಲಿ ಹೇಳಿಕೆ ನೀಡಿದ್ದರು.. ಈ ಹಿನ್ನೆಲೆ ಇಂದು ಸೀಗಲಹಳ್ಳಿಯ ಸರ್ಕಾರಿ ಶಾಲೆ ಅಭಿವೃದ್ಧಿಗೆ ಗ್ರಾಮಸ್ಥರ ಮನವಿ ಮೇರೆಗೆ ಹೆಚ್​ ಡಿ ದೇವೇಗೌಡ 1 ಲಕ್ಷ ರೂಪಾಯಿಗಳನ್ನ ದೇಣಿಗೆ ನೀಡಿದ್ದಾರೆ.. ತಮ್ಮ ಅಪ್ತ ಕಾರ್ಯದರ್ಶಿ, ಎಂಎಲ್‌ಸಿ ತಿಪ್ಪೇಸ್ವಾಮಿ ಮೂಲಕ ಧನ ಸಹಾಯ […]

The post ಶಿರಾದ ಸೀಗಲಹಳ್ಳಿ ಸರ್ಕಾರಿ ಶಾಲೆ ಅಭಿವೃದ್ಧಿಗೆ ₹1 ಲಕ್ಷ ದೇಣಿಗೆ ನೀಡಿದ ಹೆಚ್​ಡಿಡಿ appeared first on News First Kannada.

]]>

ತುಮಕೂರು: ಶಿರಾ ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಅವರು ಶಿರಾ ತಾಲೂಕನ್ನು ದತ್ತು ಪಡೆಯುವುದಾಗಿ ಹೇಳಿದ್ದರು.

ತಮಗೆ ಬರುವ ಅನುದಾನದಲ್ಲಿ ಅಭಿವೃದ್ಧಿ ಮಾಡಲು ಶಿರಾ ತಾಲ್ಲೂಕನ್ನು ದತ್ತು ಪಡೆಯಲು ನಿರ್ಧಾರ ಮಾಡಿದ್ದೇನೆ ಎಂದು ಸೀಗಲಹಳ್ಳಿ ಗ್ರಾಮದಲ್ಲಿ ಹೇಳಿಕೆ ನೀಡಿದ್ದರು.. ಈ ಹಿನ್ನೆಲೆ ಇಂದು ಸೀಗಲಹಳ್ಳಿಯ ಸರ್ಕಾರಿ ಶಾಲೆ ಅಭಿವೃದ್ಧಿಗೆ ಗ್ರಾಮಸ್ಥರ ಮನವಿ ಮೇರೆಗೆ ಹೆಚ್​ ಡಿ ದೇವೇಗೌಡ 1 ಲಕ್ಷ ರೂಪಾಯಿಗಳನ್ನ ದೇಣಿಗೆ ನೀಡಿದ್ದಾರೆ.. ತಮ್ಮ ಅಪ್ತ ಕಾರ್ಯದರ್ಶಿ, ಎಂಎಲ್‌ಸಿ ತಿಪ್ಪೇಸ್ವಾಮಿ ಮೂಲಕ ಧನ ಸಹಾಯ ಮಾಡಿದ್ದಾರೆ. ಶಾಲೆಯ ಎಸ್.ಡಿ.ಎಮ್.ಸಿ ಸದಸ್ಯರು ಮತ್ತು ಸಿಬ್ಬಂದಿಗಳ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಹಣ ಹಸ್ತಾಂತರ ಮಾಡಲಾಗಿದ್ದು ಸೀಗಲಹಳ್ಳಿ ಗ್ರಾಮಸ್ಥರು ದೇವೇಗೌಡರಿಗೆ ಧನ್ಯವಾದ ತಿಳಿಸಿದ್ದಾರೆ.

The post ಶಿರಾದ ಸೀಗಲಹಳ್ಳಿ ಸರ್ಕಾರಿ ಶಾಲೆ ಅಭಿವೃದ್ಧಿಗೆ ₹1 ಲಕ್ಷ ದೇಣಿಗೆ ನೀಡಿದ ಹೆಚ್​ಡಿಡಿ appeared first on News First Kannada.

]]>
https://newsfirstlive.com/2020/11/24/hdd-donated-1-lakh-rs-to-govt-school/feed/ 0
ಗೋಲ್ಡ್​​ ಸ್ಮಗ್ಲಿಂಗ್ ಕೇಸ್; ಕೇರಳ ಸಿಎಂ ಮಾಜಿ ಕಾರ್ಯದರ್ಶಿ ಎಮ್. ಶಿವಶಂಕರ್ ಅರೆಸ್ಟ್ https://newsfirstlive.com/2020/11/24/customs-department-recorded-the-arrest-of-former-principal-secretary-of-the-kerala-cmo-m-sivasankar/ https://newsfirstlive.com/2020/11/24/customs-department-recorded-the-arrest-of-former-principal-secretary-of-the-kerala-cmo-m-sivasankar/#respond Tue, 24 Nov 2020 06:42:58 +0000 https://newsfirstlive.com/?p=357164

ತಿರುವನಂತಪುರಂ: ಕೇರಳ ಚಿನ್ನ ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಾಜಿ ರಾಜಕೀಯ ಕಾರ್ಯದರ್ಶಿ ಎಮ್​. ಶಿವಶಂಕರ್ ಅವರನ್ನ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಎಮ್. ಶಿವಶಂಕರ್ ಅವರು ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ. ಹಾಗೂ ಜಾರಿ ನಿರ್ದೇಶನಾಲಯದ ಪ್ರಕರಣದಡಿ ನವೆಂಬರ್ 26 ರವರೆಗೂ ಜೈಲಿನಲ್ಲಿ ಇರಲಿದ್ದಾರೆ ಎನ್ನಲಾಗಿದೆ. ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಕೆಲವು ತಿಂಗಳ ಹಿಂದೆ 30 ಕೆ.ಜಿ. ಚಿನ್ನದ ಕಳ್ಳಸಾಗಣೆ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಕೇರಳ ಸರ್ಕಾರಕ್ಕೂ ಚಿನ್ನ […]

The post ಗೋಲ್ಡ್​​ ಸ್ಮಗ್ಲಿಂಗ್ ಕೇಸ್; ಕೇರಳ ಸಿಎಂ ಮಾಜಿ ಕಾರ್ಯದರ್ಶಿ ಎಮ್. ಶಿವಶಂಕರ್ ಅರೆಸ್ಟ್ appeared first on News First Kannada.

]]>

ತಿರುವನಂತಪುರಂ: ಕೇರಳ ಚಿನ್ನ ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಾಜಿ ರಾಜಕೀಯ ಕಾರ್ಯದರ್ಶಿ ಎಮ್​. ಶಿವಶಂಕರ್ ಅವರನ್ನ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಎಮ್. ಶಿವಶಂಕರ್ ಅವರು ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ. ಹಾಗೂ ಜಾರಿ ನಿರ್ದೇಶನಾಲಯದ ಪ್ರಕರಣದಡಿ ನವೆಂಬರ್ 26 ರವರೆಗೂ ಜೈಲಿನಲ್ಲಿ ಇರಲಿದ್ದಾರೆ ಎನ್ನಲಾಗಿದೆ.

ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಕೆಲವು ತಿಂಗಳ ಹಿಂದೆ 30 ಕೆ.ಜಿ. ಚಿನ್ನದ ಕಳ್ಳಸಾಗಣೆ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಕೇರಳ ಸರ್ಕಾರಕ್ಕೂ ಚಿನ್ನ ಕಳ್ಳಸಾಗಣೆಗೂ ಸಂಬಂಧವಿದೆ ಎಂದು ಬಿಜೆಪಿ ಸರ್ಕಾರ ಆರೋಪಿಸಿತ್ತು. ಈ ಆರೋಪವನ್ನು ಪಿಣರಾಯಿ ವಿಜಯನ್ ತಳ್ಳಿಹಾಕಿದ್ದರು.

The post ಗೋಲ್ಡ್​​ ಸ್ಮಗ್ಲಿಂಗ್ ಕೇಸ್; ಕೇರಳ ಸಿಎಂ ಮಾಜಿ ಕಾರ್ಯದರ್ಶಿ ಎಮ್. ಶಿವಶಂಕರ್ ಅರೆಸ್ಟ್ appeared first on News First Kannada.

]]>
https://newsfirstlive.com/2020/11/24/customs-department-recorded-the-arrest-of-former-principal-secretary-of-the-kerala-cmo-m-sivasankar/feed/ 0
ರಾಜಕಾರಣದಲ್ಲಿ ದ್ವೇಷ ಉಕ್ಕಿ ಹರಿಯುತ್ತಿದೆ ಅದಕ್ಕೆ ತಕ್ಕ ಉತ್ತರ ಕೊಡ್ತೇನೆ -ಡಿ.ಕೆ ಶಿವಕುಮಾರ್​ https://newsfirstlive.com/2020/11/24/dk-sivakumar-speech/ https://newsfirstlive.com/2020/11/24/dk-sivakumar-speech/#respond Tue, 24 Nov 2020 06:33:01 +0000 https://newsfirstlive.com/?p=357108

ಕಲಬುರಗಿ: ರಾಜಕಾರಣದಲ್ಲಿ ದ್ವೇಷ ಉಕ್ಕಿ ಹರಿಯುತ್ತಿದೆ,ನಾನು ಅದಕ್ಕೆ ತಕ್ಕ ಉತ್ತರ ಕೊಡ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ತಿಳಿಸಿದ್ದಾರೆ. ಕಲಬುರ್ಗಿನಗರದಲ್ಲಿ ಮಾತನಾಡಿದ ಅವರು ವಿಜಯನಗರದಿಂದ ವಿಜಯ ಸ್ಥಾಪನೆ ಮಾಡಬೇಕು ಅಂತಾ ಪ್ರವಾಸ ಆರಂಭ ಮಾಡಿದ್ದೇವೆ. ಅದಕ್ಕೆ ಯುವಕರು ಮಹಿಳೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬರಮಾಡಿಕೊಂಡು ಬೆಂಬಲ ನೀಡ್ತಿದ್ದಾರೆ. ಮಸ್ಕಿಯಲ್ಲಿ 35 ಸಾವಿರಕ್ಕೂ ಹೆಚ್ಚು ಜನ ಬಿಜೆಪಿಯಿಂದ ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ. ನಾನು ನೀರಿಕ್ಷೆ ಮಾಡಿರಲಿಲ್ಲ ಅಷ್ಟು ದೊಡ್ಡ ಮಟ್ಟದಲ್ಲಿ ಜನರು ಕಾಂಗ್ರೆಸ್​ ಸೇರ್ತಾರೆ ಅಂತಾ. ನನ್ನ ರಾಜಕೀಯ ಅನುಭವದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಇದೆ […]

The post ರಾಜಕಾರಣದಲ್ಲಿ ದ್ವೇಷ ಉಕ್ಕಿ ಹರಿಯುತ್ತಿದೆ ಅದಕ್ಕೆ ತಕ್ಕ ಉತ್ತರ ಕೊಡ್ತೇನೆ -ಡಿ.ಕೆ ಶಿವಕುಮಾರ್​ appeared first on News First Kannada.

]]>

ಕಲಬುರಗಿ: ರಾಜಕಾರಣದಲ್ಲಿ ದ್ವೇಷ ಉಕ್ಕಿ ಹರಿಯುತ್ತಿದೆ,ನಾನು ಅದಕ್ಕೆ ತಕ್ಕ ಉತ್ತರ ಕೊಡ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ತಿಳಿಸಿದ್ದಾರೆ.

ಕಲಬುರ್ಗಿನಗರದಲ್ಲಿ ಮಾತನಾಡಿದ ಅವರು ವಿಜಯನಗರದಿಂದ ವಿಜಯ ಸ್ಥಾಪನೆ ಮಾಡಬೇಕು ಅಂತಾ ಪ್ರವಾಸ ಆರಂಭ ಮಾಡಿದ್ದೇವೆ. ಅದಕ್ಕೆ ಯುವಕರು ಮಹಿಳೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬರಮಾಡಿಕೊಂಡು ಬೆಂಬಲ ನೀಡ್ತಿದ್ದಾರೆ. ಮಸ್ಕಿಯಲ್ಲಿ 35 ಸಾವಿರಕ್ಕೂ ಹೆಚ್ಚು ಜನ ಬಿಜೆಪಿಯಿಂದ ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ. ನಾನು ನೀರಿಕ್ಷೆ ಮಾಡಿರಲಿಲ್ಲ ಅಷ್ಟು ದೊಡ್ಡ ಮಟ್ಟದಲ್ಲಿ ಜನರು ಕಾಂಗ್ರೆಸ್​ ಸೇರ್ತಾರೆ ಅಂತಾ. ನನ್ನ ರಾಜಕೀಯ ಅನುಭವದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಇದೆ ದೊಡ್ಡ ಸೇರ್ಪಡೆ ಸಭೆಯಾಗಿದೆ ಎಂದಿದ್ದಾರೆ.

ಇದೇ ವೇಳೆ ಸಿಬಿಐ ನೋಟಿಸ್​ ವಿಚಾರವಾಗಿ ಪ್ರತಿಕ್ರಿಯಿಸಿ ನಮ್ಮ ಮನೆಯಲ್ಲಿ ನನ್ನ ಮಗಳ ಎಂಗೆಜ್ಮೆಂಟ್​ ಕಾರ್ಯಕ್ರಮ ಇದ್ದಾಗ ಮನೆ ಬಾಗಿಲಿಗೆ ಬಂದು ಸಿಬಿಐ ನೋಟಿಸ್​ ನೀಡಿದೆ. ಆ ಸಂಬಂಧ ನಾಳೆ ನಾನು ಸಿಬಿಐ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗೋದಕ್ಕೆ ಹೋಗ್ತಿದ್ದೇನೆ, ಆ ವೇಳೆ ನಮ್ಮ ಅಭಿಮಾನಿಗಳು, ಕಾರ್ಯಕರ್ತರು ಯಾರು ಅಲ್ಲಿಗೆ ಬರಬಾರದು. ಯಾರು ಕೂಡ  ಯಾವುದೇ ಹೇಳಿಕೆ ಕೊಡಬಾರದು ಎಂದು ಮನವಿ ಮಾಡಿದ್ದಾರೆ.

ನಿಮಗೆ ಅವಮಾನ ಆಗುವ ಹಾಗೆ ನಾನು ನಡೆದುಕೊಂಡಿಲ್ಲ. ರಾಜಕಾರಣದಲ್ಲಿ ದ್ವೇಷ ಉಕ್ಕಿ ಹರಿಯುತ್ತಿದೆ, ಅದಕ್ಕೆ ನಾನು ಸಾಮಾನ್ಯ ನಾಗರಿಕನಾಗಿ ಕಾನೂನಿನ ಚೌಕಟ್ಟಿನಲ್ಲೆ ತಕ್ಕ ಉತ್ತರ ಕೊಡ್ತೇನೆ. ಯಾವ ಶಾಸಕರ ಮೇಲೂ ಸಿಬಿಐ ತನಿಖೆಗೆ ಕೊಟ್ಟಿಲ್ಲ, ನನ್ನ ಮೇಲೆ  ಬಿಜೆಪಿಯವರು (ಕೇಂದ್ರ ಮತ್ತು ರಾಜ್ಯ ಸರ್ಕಾರ) ದ್ವೇಷ ರಾಜಕಾರಣ ಮಾಡ್ತಿದ್ದಾರೆ‌. ಎಲ್ಲಾ ಶಾಸಕರುಗಳ ಅಫಿಡಿವೆಟ್​ ತೆಗೆದುಕೊಳ್ಳಿ ಯಾರ ಆಸ್ತಿಯು ಹೆಚ್ಚಾಗಿಲ್ಲವಾ? ಎಂದು ಪ್ರಶ್ನಿಸಿದ್ದಾರೆ. ಅವರು ಯಾರನ್ನು ಕೂಡ ಸಿಬಿಐ ತನಿಖೆ ಮಾಡೋದಕ್ಕೆ ಮುಂದಾಗಿಲ್ಲ, ಆದರೆ ಮಗಳ ನಿಶ್ಚಿತಾರ್ಥದ ದಿನ ನಮ್ಮ ಮನೆಬಾಗಿಲಿಗೆ ಬಂದಿದ್ದಾರೆ. ಒಂದು ವರ್ಷದಿಂದ ಸುಮ್ಮನೆ ಇದ್ದವರು ನನ್ನ ಮನೆಯಲ್ಲಿ ಕಾರ್ಯಕ್ರಮ ಇದ್ದಾಗಲೆ ಬರಬೇಕಾ, ನನಗೆ ಚಳಿ ಯಾವುದು ಮಳೆ ಯಾವುದು ಎಲ್ಲಾ ಒಂದೆ ರೀತಿಯಾಗಿ ಅನುಭವಿಸಿದ್ದೆನೆ. ನನ್ನ ಮೇಲೆ ಎಫ್​ ಐ ಆರ್​ ಹಾಕಿದ್ದೆ ರಾಜಕೀಯ ಪ್ರೇರಿತ ಎಂದಿದ್ದಾರೆ.

ಕಾಂಗ್ರೆಸ್​ನಲ್ಲಿ ವಿಐಪಿ ಸಂಸ್ಕ್ರತಿ ಹೆಚ್ಚಾಗ್ತಿರುವ ಗುಲಾಂ ನಬೀ ಹೇಳಿಕೆ ವಿಚಾರವಾಗಿ ಮಾತನಾಡಿ ಅವರು ಯಾವ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ ಅಂತಾ ನನಗೆ ಗೊತ್ತಿಲ್ಲ. ಯಡಿಯೂರಪ್ಪ ಈ ಹಂತಕ್ಕೆ ಇಳಿಯುತ್ತಾರೆ ಅಂತಾ ಅಂದುಕೊಂಡಿರಲಿಲ್ಲ, ರಾಜಕಾರಣ ನೊಂದವರಿಗೆ ಸಹಾಯ ಮಾಡಬೇಕು. ಆದ್ರೆ ಚುನಾವಣೆ ಬಂದಾಗ ಎಲ್ಲಾ ಜಾತಿಯವರಿಗೆ ಒಂದೊಂದು ಪ್ರಾಧಿಕಾರ ಯಾಕೆ ಮಾಡಿಕೊಡಬೇಕು. ಅವರು ಸಮಾಜ ಒಡೆಯುವ ಕೆಲಸ ಮಾಡ್ತಿದ್ದಾರೆ, ಇಂಥಹವರಿಗೆ ಬಜೆಟ್​ ಯಾಕೆ ಬೇಕು ಎಂದು ಪ್ರಶ್ನಿಸಿದ್ದಾರೆ.

The post ರಾಜಕಾರಣದಲ್ಲಿ ದ್ವೇಷ ಉಕ್ಕಿ ಹರಿಯುತ್ತಿದೆ ಅದಕ್ಕೆ ತಕ್ಕ ಉತ್ತರ ಕೊಡ್ತೇನೆ -ಡಿ.ಕೆ ಶಿವಕುಮಾರ್​ appeared first on News First Kannada.

]]>
https://newsfirstlive.com/2020/11/24/dk-sivakumar-speech/feed/ 0
ಏಕಾಏಕಿ ತೆರವು ಕಾರ್ಯಾಚರಣೆ ಆರೋಪ.. ಶಾಸಕ ಸಿದ್ದು ಸವದಿ ವಿರುದ್ಧ ಜನರ ಆಕ್ರೋಶ https://newsfirstlive.com/2020/11/24/clearance-operation-at-dhavaleshwara-village/ https://newsfirstlive.com/2020/11/24/clearance-operation-at-dhavaleshwara-village/#respond Tue, 24 Nov 2020 06:28:46 +0000 https://newsfirstlive.com/?p=357137

ಬಾಗಲಕೋಟೆ: ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಢವಳೇಶ್ವರ ಗ್ರಾಮದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗಿದೆ. ತೇರದಾಳ ಮತಕ್ಷೇತ್ರದ ಢವಳೇಶ್ವರ ಗ್ರಾಮದಲ್ಲಿ ರಸ್ತೆ ಒತ್ತುವರಿ ಮಾಡಿ ನಿರ್ಮಿಸಿದ್ದ ಎಲ್ಲ ಗೂಡಂಗಡಿಗಳನ್ನು ಅಧಿಕಾರಿಗಳು ಜೆಸಿಬಿ ಸಹಾಯದಿಂದ ಕಿತ್ತೆಸೆದಿದ್ದಾರೆ. ಆದರೆ ಯಾವುದೇ ನೋಟೀಸ್ ನೀಡದೆ ಏಕಾಏಕಿಯಾಗಿ ಹೀಗೆ ಎಲ್ಲ ಅಂಗಡಿಗಳನ್ನು ಕಿತ್ತೆಸೆಯುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳ ವಿರುದ್ದ ಹಾಗೂ ಕ್ಷೇತ್ರದ ಶಾಸಕ ಸಿದ್ದು ಸವದಿ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಒತ್ತುವರಿ ಮಾಡಿ ನಿರ್ಮಿಸಿದ್ದ ಗೂಡಂಗಡಿಗಳ ತೆರವು […]

The post ಏಕಾಏಕಿ ತೆರವು ಕಾರ್ಯಾಚರಣೆ ಆರೋಪ.. ಶಾಸಕ ಸಿದ್ದು ಸವದಿ ವಿರುದ್ಧ ಜನರ ಆಕ್ರೋಶ appeared first on News First Kannada.

]]>

ಬಾಗಲಕೋಟೆ: ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಢವಳೇಶ್ವರ ಗ್ರಾಮದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗಿದೆ. ತೇರದಾಳ ಮತಕ್ಷೇತ್ರದ ಢವಳೇಶ್ವರ ಗ್ರಾಮದಲ್ಲಿ ರಸ್ತೆ ಒತ್ತುವರಿ ಮಾಡಿ ನಿರ್ಮಿಸಿದ್ದ ಎಲ್ಲ ಗೂಡಂಗಡಿಗಳನ್ನು ಅಧಿಕಾರಿಗಳು ಜೆಸಿಬಿ ಸಹಾಯದಿಂದ ಕಿತ್ತೆಸೆದಿದ್ದಾರೆ. ಆದರೆ ಯಾವುದೇ ನೋಟೀಸ್ ನೀಡದೆ ಏಕಾಏಕಿಯಾಗಿ ಹೀಗೆ ಎಲ್ಲ ಅಂಗಡಿಗಳನ್ನು ಕಿತ್ತೆಸೆಯುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಧಿಕಾರಿಗಳ ವಿರುದ್ದ ಹಾಗೂ ಕ್ಷೇತ್ರದ ಶಾಸಕ ಸಿದ್ದು ಸವದಿ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಒತ್ತುವರಿ ಮಾಡಿ ನಿರ್ಮಿಸಿದ್ದ ಗೂಡಂಗಡಿಗಳ ತೆರವು ಕಾರ್ಯಾಚರಣೆ ವೇಳೆ ಪೊಲೀಸರು ಹಾಜರಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.

The post ಏಕಾಏಕಿ ತೆರವು ಕಾರ್ಯಾಚರಣೆ ಆರೋಪ.. ಶಾಸಕ ಸಿದ್ದು ಸವದಿ ವಿರುದ್ಧ ಜನರ ಆಕ್ರೋಶ appeared first on News First Kannada.

]]>
https://newsfirstlive.com/2020/11/24/clearance-operation-at-dhavaleshwara-village/feed/ 0
ತೆಂಗಿನ ಕಾಯಿ ಒಡೆದು ಪೂಜೆ; ಭಾರತದ ಏರ್​ಫೋರ್ಸ್​​ ಒನ್ ಬೋಯಿಂಗ್-777 ಏರಿದ ಪ್ರಥಮ ಪ್ರಜೆ https://newsfirstlive.com/2020/11/24/president-kovind-boards-the-air-india-one-b777-aircraft-for-inaugural-flight-to-chennai/ https://newsfirstlive.com/2020/11/24/president-kovind-boards-the-air-india-one-b777-aircraft-for-inaugural-flight-to-chennai/#respond Tue, 24 Nov 2020 06:23:55 +0000 https://newsfirstlive.com/?p=357128

ನವದೆಹಲಿ: ಭಾರತದ ಏರ್​ಫೋರ್ಸ್​ ಒನ್ ಎಂದೇ ಖ್ಯಾತಿ ಪಡೆದಿರುವ ಬೋಯಿಂಗ್​-777 ಅತ್ಯಾಧುನಿಕ ವಿಮಾನವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಹಾಗೂ ಅವರ ಪತ್ನಿ ಉದ್ಘಾಟಿಸಿದ್ದಾರೆ. ಕಾರ್ತಿಕ ಮಾಸದ ಶುಭ ಮಂಗಳವಾರದ ಈ ದಿನದಂದು ಬೋಯಿಂಗ್-777 ಗೆ ತೆಂಗಿನ ಕಾಯಿ ಒಡೆದು ಪೂಜೆ ಸಲ್ಲಿಸಿದ ಕೋವಿಂದ್ ದಂಪತಿ, ಬಳಿಕ ಪ್ಲೇನ್ ಏರಿದ್ದಾರೆ. ಉದ್ಘಾಟನಾ ಪ್ರಯಾಣ ಇದಾಗಿದ್ದು ನವದೆಹಲಿಯಿಂದ ತಮಿಳುನಾಡಿನ ಚೆನ್ನೈಗೆ ರಾಷ್ಟ್ರಪತಿ ಕೋವಿಂದ್ ಹಾಗೂ ಅವರ ಪತ್ನಿ ಮೊದಲ ಪ್ರಯಾಣ ನಡೆಸಿದ್ದಾರೆ. ಈ ವೇಳೆ ಕೋವಿಂದ್ ಅವರು ಆಂಧ್ರಪ್ರದೇಶಕ್ಕೆ ತೆರಳಿ ಶ್ರೀ […]

The post ತೆಂಗಿನ ಕಾಯಿ ಒಡೆದು ಪೂಜೆ; ಭಾರತದ ಏರ್​ಫೋರ್ಸ್​​ ಒನ್ ಬೋಯಿಂಗ್-777 ಏರಿದ ಪ್ರಥಮ ಪ್ರಜೆ appeared first on News First Kannada.

]]>

ನವದೆಹಲಿ: ಭಾರತದ ಏರ್​ಫೋರ್ಸ್​ ಒನ್ ಎಂದೇ ಖ್ಯಾತಿ ಪಡೆದಿರುವ ಬೋಯಿಂಗ್​-777 ಅತ್ಯಾಧುನಿಕ ವಿಮಾನವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಹಾಗೂ ಅವರ ಪತ್ನಿ ಉದ್ಘಾಟಿಸಿದ್ದಾರೆ.

ಕಾರ್ತಿಕ ಮಾಸದ ಶುಭ ಮಂಗಳವಾರದ ಈ ದಿನದಂದು ಬೋಯಿಂಗ್-777 ಗೆ ತೆಂಗಿನ ಕಾಯಿ ಒಡೆದು ಪೂಜೆ ಸಲ್ಲಿಸಿದ ಕೋವಿಂದ್ ದಂಪತಿ, ಬಳಿಕ ಪ್ಲೇನ್ ಏರಿದ್ದಾರೆ. ಉದ್ಘಾಟನಾ ಪ್ರಯಾಣ ಇದಾಗಿದ್ದು ನವದೆಹಲಿಯಿಂದ ತಮಿಳುನಾಡಿನ ಚೆನ್ನೈಗೆ ರಾಷ್ಟ್ರಪತಿ ಕೋವಿಂದ್ ಹಾಗೂ ಅವರ ಪತ್ನಿ ಮೊದಲ ಪ್ರಯಾಣ ನಡೆಸಿದ್ದಾರೆ. ಈ ವೇಳೆ ಕೋವಿಂದ್ ಅವರು ಆಂಧ್ರಪ್ರದೇಶಕ್ಕೆ ತೆರಳಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.

ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿ ಪ್ರಯಾಣಕ್ಕಾಗಿ ಸಿದ್ಧವಾಗಿರುವ ಏರ್​ ಇಂಡಿಯಾ ಒನ್ ಬೋಯಿಂಗ್ 777 ವಿಶೇಷ ವಿಮಾನದಲ್ಲಿ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಯಾಣ ಬೆಳೆಸಿದ್ದಾರೆ.  ಪ್ರಯಾಣ ಬೆಳೆಸುವ ಮುನ್ನ ಏರ್​ ಇಂಡಿಯಾ ಒನ್ ಬೋಯಿಂಗ್ ವಿಮಾನಕ್ಕೆ ರಾಮನಾಥ್ ಕೋವಿಂದ್ ಹಾಗೂ ಪತ್ನಿ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ವಿಮಾನದ ಪೈಲಟ್​ಗಳು ಸಿಬ್ಬಂದಿ, ಏರ್​ ಇಂಡಿಯಾದ ಟೀಮ್ ಹಾಗೂ ಭಾರತೀಯ ವಿಮಾನಯಾನವನ್ನು ಪ್ರಶಂಶಿಸಿದ್ದಾರೆ. ಎಲ್ಲರೊಂದಿಗೆ ಫೋಟೊ ಕೂಡ ತೆಗೆಸಿಕೊಂಡಿದ್ದಾರೆ.

ಬೋಯಿಂಗ್​​​ 777 ವಿಶೇಷತೆಯೇನು?

ಅಮೆರಿಕಾ ಅಧ್ಯಕ್ಷರು ಪ್ರಯಾಣಿಸು ಏರ್​ಫೋರ್ಸ್​ ಒನ್ ಮಾದರಿಯ ಅತ್ಯಾಧುನಿಕ ವಿಮಾನ ಇದಾಗಿದೆ. ಬೋಯಿಂಗ್​​​ 777 ವಿಮಾನದಲ್ಲಿ ಕಚೇರಿ ಸ್ಥಳ, ಸಭೆ ನಡೆಸಲು ಪ್ರತ್ಯೇಕ ಕೊಠಡಿ ಹಾಗೂ ಸಂವಹನ ಪ್ರಕ್ರಿಯೆಗಾಗಿ ಅತ್ಯಾಧುನಿಕ ವ್ಯವಸ್ಥೆ ಇದೆ. ಜೊತೆಗೆ ಪ್ರತಿದಾಳಿ ಉಪಕರಣಗಳು, ಸಮಗ್ರ ಎಲೆಕ್ಟ್ರಾನಿಕ್‌ ರಕ್ಷಣಾ ಯುದ್ಧೋಪಕರಣಗಳನ್ನ ಹೊಂದಿದೆ. ಅಲ್ಲದೇ ವಿಮಾನದ ಮೇಲೆ ನಡೆಯುವ ಕ್ಷಿಪಣಿ ದಾಳಿಯನ್ನ ತಡೆಗಟ್ಟುವ ಸಾಮರ್ಥ್ಯ ಹೊಂದಿದೆ. ಅಗತ್ಯಬಿದ್ದರೆ ವಿಮಾನದೊಳಗೆ ಸಿಬ್ಬಂದಿ ಸೂಚನೆ ಹೊರತಾಗಿಯೂ ಕ್ಷಿಪಣಿ ಹೊಡೆದುರುಳಿಸಬಲ್ಲದು. ಇನ್ನು ಭದ್ರತೆ ವಿಷಯದಲ್ಲಿ ಅಮೆರಿಕಾ ಅಧ್ಯಕ್ಷರು ಬಳಸುವ ಏರ್​ಫೋರ್ಸ್​ ಒನ್ ವಿಮಾನಕ್ಕೆ ಇದು ಸಮನಾಗಿರಲಿದೆಯಂತೆ. ಅಲ್ಲದೆ ಅಮೆರಿಕಾ ಅಧ್ಯಕ್ಷರು ಬಳಸುವ ಸುರಕ್ಷಾ ಸೂಟ್​​​ಗಳನ್ನು ಸಹ ಇದು ಹೊಂದಿದ್ದು, ಶತ್ರು ರಡಾರ್​ಗಳಿಗೆ ಸಿಲುಕದೆ ಅವುಗಳ ಸಿಗ್ನಲ್​ ಜಾಮ್​ ಮಾಡುವಂತಹ ವ್ಯವಸ್ಥೆಯೂ ಇದೆ ಎನ್ನಲಾಗಿದೆ. ಹಾಗೇ ಭಾರತ ಮತ್ತು ಅಮೆರಿಕಾ ನಡುವೆ, ಇಂಧನ ತುಂಬಿಸಲು ನಿಲ್ಲಿಸದೇ ನಾನ್ ಸ್ಟಾಪ್​​ ಹಾರುವ ಸಾಮರ್ಥ್ಯ ಹೊಂದಿದೆ.

ವಿಶ್ವದಲ್ಲಿ ಭಾರತದ ವರ್ಚಸ್ಸು ಹಾಗೂ ಶಕ್ತಿ ಗಣನೀಯವಾಗಿ ಹೆಚ್ಚಿದ್ದು, ಭಾರತದ ಅತ್ಯುನ್ನತ ನಾಯಕರ ರಕ್ಷಣೆಗಾಗಿ ಇಂಥ ವಿಮಾನದ ಅವಶ್ಯಕತೆ ಇತ್ತು ಅಂತಾ ರಕ್ಷಣಾ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

The post ತೆಂಗಿನ ಕಾಯಿ ಒಡೆದು ಪೂಜೆ; ಭಾರತದ ಏರ್​ಫೋರ್ಸ್​​ ಒನ್ ಬೋಯಿಂಗ್-777 ಏರಿದ ಪ್ರಥಮ ಪ್ರಜೆ appeared first on News First Kannada.

]]>
https://newsfirstlive.com/2020/11/24/president-kovind-boards-the-air-india-one-b777-aircraft-for-inaugural-flight-to-chennai/feed/ 0
ಜನ ಅಂಬಿಯನ್ನ ಹೃದಯದಲ್ಲಿ ಇಟ್ಕೊಂಡು ಪೂಜಿಸ್ತಿದ್ದಾರೆ: ಸುಮಲತಾ ಅಂಬರೀಶ್​ https://newsfirstlive.com/2020/11/24/people-still-have-safely-kept-ambareesh-in-their-heart-and-worship-him-says-sumalatha-ambareesh/ https://newsfirstlive.com/2020/11/24/people-still-have-safely-kept-ambareesh-in-their-heart-and-worship-him-says-sumalatha-ambareesh/#respond Tue, 24 Nov 2020 06:15:07 +0000 https://newsfirstlive.com/?p=357152

ಅಂಬಿ ಎರಡನೇ ವರ್ಷದ ಪುಣ್ಯತಿಥಿಯಲ್ಲಿ, ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿ ಸುಮಲತಾ ಅಂಬರೀಶ್​ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಅಂಬರೀಶ್​ ತಮ್ಮ ಅಭಿಮಾನಿಗಳ ಜೊತೆ ಇದ್ದ ರೀತಿ, ಅವರಿಗೆ ಅಭಿಮಾನಿಗಳು ಕೊಟ್ಟಿರುವ ಸ್ಥಾನದ ಬಗ್ಗೆ ಹೇಳಿಕೊಂಡಿದ್ದಾರೆ. ಇದಲ್ಲದೇ, ಮಂಡ್ಯದಲ್ಲಿ ನಟ ಅಂಬರೀಶ್​ಗಾಗಿ ಕಟ್ಟಿರುವ ದೇವಸ್ಥಾನದ ಬಗ್ಗೆಯೂ ಖುಷಿ ಹಾಗೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ‘ಅಂಬರೀಶ್ ಅವರು ಎಲ್ರನ್ನೂ ಕುಟುಂಬದ ಸದಸ್ಯರಂತೆ ನೋಡ್ಕೋತಿದ್ರು. ಎಲ್ಲರ ಪ್ರೀತಿ ಗಳಿಸಿ, ಆ ಪ್ರೀತಿಯನ್ನ ಶಾಶ್ವತವಾಗಿ ಉಳಿಸಿಕೊಂಡಿದ್ದಾರೆ. ಇದಕ್ಕಿಂತ ಹೆಮ್ಮೆ ಇನ್ಯಾವುದು ಇಲ್ಲ. ಇನ್ನು, ಮಂಡ್ಯದಲ್ಲಿ […]

The post ಜನ ಅಂಬಿಯನ್ನ ಹೃದಯದಲ್ಲಿ ಇಟ್ಕೊಂಡು ಪೂಜಿಸ್ತಿದ್ದಾರೆ: ಸುಮಲತಾ ಅಂಬರೀಶ್​ appeared first on News First Kannada.

]]>

ಅಂಬಿ ಎರಡನೇ ವರ್ಷದ ಪುಣ್ಯತಿಥಿಯಲ್ಲಿ, ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿ ಸುಮಲತಾ ಅಂಬರೀಶ್​ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಅಂಬರೀಶ್​ ತಮ್ಮ ಅಭಿಮಾನಿಗಳ ಜೊತೆ ಇದ್ದ ರೀತಿ, ಅವರಿಗೆ ಅಭಿಮಾನಿಗಳು ಕೊಟ್ಟಿರುವ ಸ್ಥಾನದ ಬಗ್ಗೆ ಹೇಳಿಕೊಂಡಿದ್ದಾರೆ. ಇದಲ್ಲದೇ, ಮಂಡ್ಯದಲ್ಲಿ ನಟ ಅಂಬರೀಶ್​ಗಾಗಿ ಕಟ್ಟಿರುವ ದೇವಸ್ಥಾನದ ಬಗ್ಗೆಯೂ ಖುಷಿ ಹಾಗೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

‘ಅಂಬರೀಶ್ ಅವರು ಎಲ್ರನ್ನೂ ಕುಟುಂಬದ ಸದಸ್ಯರಂತೆ ನೋಡ್ಕೋತಿದ್ರು. ಎಲ್ಲರ ಪ್ರೀತಿ ಗಳಿಸಿ, ಆ ಪ್ರೀತಿಯನ್ನ ಶಾಶ್ವತವಾಗಿ ಉಳಿಸಿಕೊಂಡಿದ್ದಾರೆ. ಇದಕ್ಕಿಂತ ಹೆಮ್ಮೆ ಇನ್ಯಾವುದು ಇಲ್ಲ. ಇನ್ನು, ಮಂಡ್ಯದಲ್ಲಿ ನಿಜಕ್ಕೂ ಅಂಬಿ ಗುಡಿ ಕಟ್ಟಿರೋದು ಅದ್ಭುತ. ಆ ಊರಿನವರು ನನ್ನಿಂದ ಯಾವುದೇ ಸಹಾಯ ತಗೊಂಡಿಲ್ಲ. ಹಾಗಾಗಿ ನನಗೆ ಇದು ಸರ್ಪ್ರೈಸ್. ಜೊತೆಗೆ ಅವರ ಅಂಬಿ ಪ್ರೀತಿಗೆ ಕಂಚಿನ ಪುತ್ಥಳಿಯೇ ಸಂಕೇತ. ಅವ್ರು ಬದುಕ್ಕಿದ್ದಾಗ ಪ್ರತಿದಿನ ಜನರ ಮಧ್ಯೆ ಇರ್ತಾ ಇದ್ರು. ವಿಶೇಷವಾಗಿ ಮಂಡ್ಯ ಜನ ಅವರನ್ನ ದೇವರಂತೆ ಪೂಜಿಸ್ತಾ ಇದ್ರು.

ಪ್ರೀತಿ ಒಂದೇ ಅವರು ಸಂಪಾದಿಸಿರೋ ಆಸ್ತಿ. ಜನ ಅವರನ್ನ ಹೃದಯದಲ್ಲಿ ಇಟ್ಕೊಂಡು ಪೂಜಿಸ್ತಾ ಇದ್ದಾರೆ. ಅಂಬರೀಶ್ ಅವರಿಗೆ ಮನಸ್ಸಿನಲ್ಲೇ ಗುಡಿ ಕಟ್ಕೊಂಡಿದ್ದಾರೆ. ಅಂಬಿ ಸ್ಮಾರಕಕ್ಕೆ ಈಗಷ್ಟೇ ಟ್ರಸ್ಟ್ ರಿಜಿಸ್ಟರ್ ಆಗಿದೆ. ಇನ್ನಷ್ಟು ಮೀಟಿಂಗ್ ಮಾಡಿ, ಯಾವ ರೀತಿ ಡಿಸೈನ್ ಮಾಡ್ಬೇಕು ಅನ್ನೋದನ್ನ ಚರ್ಚೆ ಮಾಡ್ತೀವಿ.’

-ಸುಮಲತಾ ಅಂಬರೀಶ್​, ನಟಿ/ಸಂಸದೆ

ಇನ್ನು, ಅಂಬಿ ಸಮಾಧಿಗೆ ಪೂಜೆ ಸಲ್ಲಿಸೋ ಸಂದರ್ಭ, ನಟ ದರ್ಶನ್​, ಅಭಿಷೇಕ್​ ಅಂಬರೀಶ್​, ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​, ನಟ ಜೈ ಜಗದೀಶ್​, ವಿಜಯಲಕ್ಷ್ಮೀ ಸಿಂಗ್​ ಉಪಸ್ಥಿತರಿದ್ದರು. ಅಂಬಿ ಸಮಾಧಿಯಿಂದಲೇ ಸುಮಲತಾ, ಅಭಿಷೇಕ್​ ಅಂಬರೀಶ್​, ನಟ ದರ್ಶನ್​ ಹಾಗೂ ಹಲವರು ಮಂಡ್ಯಕ್ಕೆ ತೆರಳಲಿದ್ದಾರೆ. ಅಂಬಿಗಾಗಿ ಕಟ್ಟಿರುವ ದೇವಸ್ಥಾನದ ಪುತ್ಥಳಿ ಅನಾವರಣ ಮಾಡಲಿದ್ದಾರೆ.

The post ಜನ ಅಂಬಿಯನ್ನ ಹೃದಯದಲ್ಲಿ ಇಟ್ಕೊಂಡು ಪೂಜಿಸ್ತಿದ್ದಾರೆ: ಸುಮಲತಾ ಅಂಬರೀಶ್​ appeared first on News First Kannada.

]]>
https://newsfirstlive.com/2020/11/24/people-still-have-safely-kept-ambareesh-in-their-heart-and-worship-him-says-sumalatha-ambareesh/feed/ 0
ಅಂತರಾಷ್ಟ್ರೀಯ ಎಮ್ಮಿ ಅವಾರ್ಡ್ ಗಿಟ್ಟಿಸಿಕೊಂಡ ನಿರ್ಭಯಾ ಕೇಸ್ ಆಧಾರಿತ ಶೋ ‘ಡೆಲ್ಲಿ ಕ್ರೈಂ’ https://newsfirstlive.com/2020/11/24/delhi-crime-bags-best-drama-series-at-the-international-emmy-awards-2020/ https://newsfirstlive.com/2020/11/24/delhi-crime-bags-best-drama-series-at-the-international-emmy-awards-2020/#respond Tue, 24 Nov 2020 06:09:26 +0000 https://newsfirstlive.com/?p=357133

ನವದೆಹಲಿ: ಇಂಟರ್​​ನ್ಯಾಷನಲ್ ಎಮ್ಮಿ ಅವಾರ್ಡ್​-2020ರಲ್ಲಿ ಭಾರತದ ನೆಟ್​​ಫ್ಲಿಕ್ಸ್​ ಶೋ​ ಡೆಲ್ಲಿ ಕ್ರೈಂ ಪ್ರಶಸ್ತಿ ಗಿಟ್ಟಿಸಿಕೊಂಡಿದೆ. ಟಿವಿ ಶೋಗಳಿಗೆ ನೀಡಲಾಗುವ ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿ ಇದಾಗಿದ್ದು, ಈ ಬಾರಿ 48ನೇ ವರ್ಷದ ಪ್ರಶಸ್ತಿಗಳ ಪಟ್ಟಿ ಪ್ರಕಟವಾಗಿದೆ. ಡೆಲ್ಲಿ ಕ್ರೈಂ ವೆಬ್​ ಸೀರೀಸ್​, ಬೆಸ್ಟ್​ ಡ್ರಾಮಾ ಸೀರೀಸ್​ ವಿಭಾಗದಲ್ಲಿ ಜರ್ಮನಿಯ ಚಾರಿಟೇ-2, ಇಂಗ್ಲೆಂಡ್​ನ ಕ್ರಿಮಿನಲ್ ಯುಕೆ ಹಾಗೂ ಅರ್ಜೆಂಟಿನಾದ ಎಲ್​​​ ಜಾರ್ಡೇನ್ ಡಿ ಬ್ರಾನ್ಸ್​​ ಸೀಸನ್​-2 ಶೋಗಳನ್ನ ಹಿಂದಿಕ್ಕಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಇನ್ನು ಕಾಮಿಡಿ ಸೀರೀಸ್​ ವಿಭಾಗದಲ್ಲಿ ಅಮೇಜಾನ್​ ಪ್ರೈಂನ […]

The post ಅಂತರಾಷ್ಟ್ರೀಯ ಎಮ್ಮಿ ಅವಾರ್ಡ್ ಗಿಟ್ಟಿಸಿಕೊಂಡ ನಿರ್ಭಯಾ ಕೇಸ್ ಆಧಾರಿತ ಶೋ ‘ಡೆಲ್ಲಿ ಕ್ರೈಂ’ appeared first on News First Kannada.

]]>

ನವದೆಹಲಿ: ಇಂಟರ್​​ನ್ಯಾಷನಲ್ ಎಮ್ಮಿ ಅವಾರ್ಡ್​-2020ರಲ್ಲಿ ಭಾರತದ ನೆಟ್​​ಫ್ಲಿಕ್ಸ್​ ಶೋ​ ಡೆಲ್ಲಿ ಕ್ರೈಂ ಪ್ರಶಸ್ತಿ ಗಿಟ್ಟಿಸಿಕೊಂಡಿದೆ. ಟಿವಿ ಶೋಗಳಿಗೆ ನೀಡಲಾಗುವ ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿ ಇದಾಗಿದ್ದು, ಈ ಬಾರಿ 48ನೇ ವರ್ಷದ ಪ್ರಶಸ್ತಿಗಳ ಪಟ್ಟಿ ಪ್ರಕಟವಾಗಿದೆ.

ಡೆಲ್ಲಿ ಕ್ರೈಂ ವೆಬ್​ ಸೀರೀಸ್​, ಬೆಸ್ಟ್​ ಡ್ರಾಮಾ ಸೀರೀಸ್​ ವಿಭಾಗದಲ್ಲಿ ಜರ್ಮನಿಯ ಚಾರಿಟೇ-2, ಇಂಗ್ಲೆಂಡ್​ನ ಕ್ರಿಮಿನಲ್ ಯುಕೆ ಹಾಗೂ ಅರ್ಜೆಂಟಿನಾದ ಎಲ್​​​ ಜಾರ್ಡೇನ್ ಡಿ ಬ್ರಾನ್ಸ್​​ ಸೀಸನ್​-2 ಶೋಗಳನ್ನ ಹಿಂದಿಕ್ಕಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಇನ್ನು ಕಾಮಿಡಿ ಸೀರೀಸ್​ ವಿಭಾಗದಲ್ಲಿ ಅಮೇಜಾನ್​ ಪ್ರೈಂನ ಫೋರ್​ ಮೋರ್ ಶಾಟ್ಸ್​ ಪ್ಲೀಸ್​ ಶೋ ಹಾಗೂ ಮೇಡ್ ಇನ್ ಹೆವೆನ್ ಸೀರೀಸ್​ಗಾಗಿ ನಟ ಅರ್ಜುನ್ ಮಾಥುರ್ ಹೆಸರು ಅತ್ಯುತ್ತಮ ನಟ ವಿಭಾಗದಲ್ಲಿ ನಾಮನಿರ್ದೇಶನವಾಗಿತ್ತು. ಆದ್ರೆ ಈ ಎರಡೂ ವಿಭಾಗಗಳಲ್ಲಿ ಪ್ರಶಸ್ತಿ ಕೈತಪ್ಪಿದೆ. ಡೆಲ್ಲಿ ಕ್ರೈಂಗೆ ಎಮ್ಮಿ ಪ್ರಶಸ್ತಿ ಒಲಿದುಬಂದಿರುವುದಕ್ಕೆ ಬಾಲಿವುಡ್​ನ ಅನೇಕ ತಾರೆಯರು ಹರ್ಷ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಅಂದ್ಹಾಗೆ ಡೆಲ್ಲಿ ಕ್ರೈಂ, ಭಾರತದಲ್ಲಿ ಸಂಚಲನ ಮೂಡಿಸಿದ್ದ 2012ರ ನಿರ್ಭಯಾ ಗ್ಯಾಂಗ್​ರೇಪ್​ ಪ್ರಕರಣವನ್ನ ಆಧರಿಸಿದ ಕಥೆ ಹೊಂದಿದೆ. ಶೆಫಾಲಿ ಶಾ, ದೆಹಲಿ ಪೊಲೀಸ್​ ಆಯುಕ್ತರ ಪಾತ್ರದಲ್ಲಿ ನಟಿಸಿದ್ದು, ಪ್ರಕರಣದ ಆರೋಪಿಗಳನ್ನ ಪತ್ತೆಹಚ್ಚುವ ರೋಚಕ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಿಚೀ ಮೆಹ್ತಾ ಈ ವೆಬ್​ ಸೀರೀಸ್​ ನಿರ್ದೇಶಿಸಿದ್ದಾರೆ. ಇದು ನೋಡಲು ತುಂಬಾ ಕಷ್ಟವಾದ ಶೋ ಎಂದು ಪ್ರೇಕ್ಷಕರಿಂದ ಹಾಗೂ ವಿಶ್ಲೇಷಕರಿಂದ ಮಿಶ್ರ ರೆಸ್ಪಾನ್ಸ್​ ಪಡೆದಿತ್ತು. ಸದ್ಯ ಡೆಲ್ಲಿ ಕ್ರೈಂ ಸೀರೀಸ್​ನ 7 ಸೀಸನ್​​ಗಳು​ IMDbನಲ್ಲಿ 8.5 ರೇಟಿಂಗ್ ಹೊಂದಿದೆ.

 

The post ಅಂತರಾಷ್ಟ್ರೀಯ ಎಮ್ಮಿ ಅವಾರ್ಡ್ ಗಿಟ್ಟಿಸಿಕೊಂಡ ನಿರ್ಭಯಾ ಕೇಸ್ ಆಧಾರಿತ ಶೋ ‘ಡೆಲ್ಲಿ ಕ್ರೈಂ’ appeared first on News First Kannada.

]]>
https://newsfirstlive.com/2020/11/24/delhi-crime-bags-best-drama-series-at-the-international-emmy-awards-2020/feed/ 0
ಮಂತ್ರಿ ಸ್ಥಾನಕ್ಕೆ ಬೆಲ್ಲದ್ ಹೆಸರು; ಹಿರಿಯರ ಲಾಬಿ ಮಧ್ಯೆ ಯುವ ನಾಯಕನ ಕೈ ಹಿಡಿಯುತ್ತಾ ಲಕ್..? https://newsfirstlive.com/2020/11/24/will-bellad-get-minister-post/ https://newsfirstlive.com/2020/11/24/will-bellad-get-minister-post/#respond Tue, 24 Nov 2020 05:46:21 +0000 https://newsfirstlive.com/?p=356962

ಬೆಂಗಳೂರು: ಮಂತ್ರಿ ಸ್ಥಾನದ ಮೇಲೆ ಆಸೆ ಪಟ್ಟ ಶಾಸಕರು, ಬಿಎಸ್​ವೈ ಅವರ ಕ್ಯಾಬಿನೆಟ್ ಸೇರಿಕೊಳ್ಳಲು ಸಖತ್ ಸರ್ಕಸ್ ಮಾಡ್ತಿದ್ದಾರೆ. ಸಂಪುಟ ಪುನಾರಚನೆ ಸಂಬಂಧ ನಾಯಕರು ಒಂದು ಕಡೆ ಮೀಟಿಂಗ್ ಮೇಲೆ ಮೀಟಿಂಗ್ ನಡೆಸುತ್ತಿದ್ದರೆ, ಇನ್ನೊಂದೆಡೆ ಮಂತ್ರಿ ಪಟ್ಟದ ಮೇಲೆ ಕಣ್ಣಿಟ್ಟ ಹಿರಿಯ ಶಾಸಕರು ಸಚಿವ ಸ್ಥಾನಕ್ಕಾಗಿ ಭಾರೀ‌ ಲಾಬಿ ನಡೆಸುತ್ತಿದ್ದಾರೆ. ಇವೆಲ್ಲದರ ನಡುವೆ ಮಂತ್ರಿ ಸ್ಥಾನಕ್ಕೆ ಅಚ್ಚರಿಯ ಹೆಸರು ಕೇಳಿ ಬಂದಿದೆ. ಯಾರು ಆ ಡಾರ್ಕ್ ಹಾರ್ಸ್..? ಮಂತ್ರಿ ಪಟ್ಟಕ್ಕಾಗಿ ಲಾಬಿ ನಡೆಸುತ್ತಿರುವ ಹತ್ತಾರು ಬಿಜೆಪಿ ಮುಖಂಡರ […]

The post ಮಂತ್ರಿ ಸ್ಥಾನಕ್ಕೆ ಬೆಲ್ಲದ್ ಹೆಸರು; ಹಿರಿಯರ ಲಾಬಿ ಮಧ್ಯೆ ಯುವ ನಾಯಕನ ಕೈ ಹಿಡಿಯುತ್ತಾ ಲಕ್..? appeared first on News First Kannada.

]]>

ಬೆಂಗಳೂರು: ಮಂತ್ರಿ ಸ್ಥಾನದ ಮೇಲೆ ಆಸೆ ಪಟ್ಟ ಶಾಸಕರು, ಬಿಎಸ್​ವೈ ಅವರ ಕ್ಯಾಬಿನೆಟ್ ಸೇರಿಕೊಳ್ಳಲು ಸಖತ್ ಸರ್ಕಸ್ ಮಾಡ್ತಿದ್ದಾರೆ. ಸಂಪುಟ ಪುನಾರಚನೆ ಸಂಬಂಧ ನಾಯಕರು ಒಂದು ಕಡೆ ಮೀಟಿಂಗ್ ಮೇಲೆ ಮೀಟಿಂಗ್ ನಡೆಸುತ್ತಿದ್ದರೆ, ಇನ್ನೊಂದೆಡೆ ಮಂತ್ರಿ ಪಟ್ಟದ ಮೇಲೆ ಕಣ್ಣಿಟ್ಟ ಹಿರಿಯ ಶಾಸಕರು ಸಚಿವ ಸ್ಥಾನಕ್ಕಾಗಿ ಭಾರೀ‌ ಲಾಬಿ ನಡೆಸುತ್ತಿದ್ದಾರೆ. ಇವೆಲ್ಲದರ ನಡುವೆ ಮಂತ್ರಿ ಸ್ಥಾನಕ್ಕೆ ಅಚ್ಚರಿಯ ಹೆಸರು ಕೇಳಿ ಬಂದಿದೆ.

ಯಾರು ಆ ಡಾರ್ಕ್ ಹಾರ್ಸ್..?
ಮಂತ್ರಿ ಪಟ್ಟಕ್ಕಾಗಿ ಲಾಬಿ ನಡೆಸುತ್ತಿರುವ ಹತ್ತಾರು ಬಿಜೆಪಿ ಮುಖಂಡರ ಮಧ್ಯೆ ಯಾರೂ ಊಹಿಸದ ಅಚ್ಚರಿಯ ಹೆಸರೊಂದು ಕೇಳಿ ಬಂದಿದೆ. ಹಲವು ಹಿರಿಯರು ಬಯಸಿಯೂ ಸಿಗದ ಮಂತ್ರಿ ಪಟ್ಟದ ಭಾಗ್ಯ ಈ ಯುವ ನಾಯಕನಿಗೆ ಬಯಸದೇ ಒಲಿಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಅವರು ಬೇರೆ ಯಾರೂ ಅಲ್ಲ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಅರವಿಂದ್ ಬೆಲ್ಲದ್. ಬೆಲ್ಲದ್​ ಅವರಿಗೆ ಸಚಿವ ಸ್ಥಾನ ನೀಡಲು ಬಿಜೆಪಿ ರಾಷ್ಟ್ರೀಯ ಸಂಘನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಒಲವು ತೋರಿಸಿದ್ದಾರಂತೆ.

ಅರವಿಂದ್ ಬೆಲ್ಲದ್​ಗೇಕೆ ಮಂತ್ರಿಸ್ಥಾನ..?
ಸಂಘ ಪರಿವಾರದ ನಾಯಕರ ಜೊತೆ ಗೌರವಯುತ ಸಂಬಂಧ ಹಾಗೂ ಸಂಪರ್ಕವನ್ನ ಅರವಿಂದ್ ಬೆಲ್ಲದ್ ಹೊಂದಿದ್ದಾರೆ. ಸಂಘ ಪರಿವಾರದ ಹಿನ್ನೆಲೆಯಿಂದಲೇ ಬೆಲ್ಲದ್ ಸಕ್ರಿಯ ರಾಜಕಾರಣಕ್ಕೆ ಬಂದಿದ್ದಾರೆ. ಇನ್ನು ಬೆಲ್ಲದ್ ಲಿಂಗಾಯತ ಒಳಪಂಗಡಗಳ ಪೈಕಿ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ. ಲಿಂಗಾಯತ ಒಳಪಂಗಡಗಳ ಪೈಕಿ ಅತೀ ಹೆಚ್ಚು ಸಂಖ್ಯೆಯಲ್ಲಿ ಪಂಚಮಸಾಲಿ ಸಮುದಾಯ ಇದೆ. ಭವಿಷ್ಯದ ನಾಯಕತ್ವ ರೂಪಿಸುವ ದೂರದೃಷ್ಠಿಯೊಂದಿಗೆ ಅರವಿಂದ್ ಬೆಲ್ಲದ್ ಅವರಿಗೆ ಸಚಿವ ಸ್ಥಾನ ನೀಡಲು ಚಿಂತನೆ ನಡೆಸಲಾಗಿದೆ ಅನ್ನೋ ಮಾತುಗಳು ಕೇಳಿಬಂದಿವೆ.

ವಿಶೇಷ ವರದಿ: ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ

The post ಮಂತ್ರಿ ಸ್ಥಾನಕ್ಕೆ ಬೆಲ್ಲದ್ ಹೆಸರು; ಹಿರಿಯರ ಲಾಬಿ ಮಧ್ಯೆ ಯುವ ನಾಯಕನ ಕೈ ಹಿಡಿಯುತ್ತಾ ಲಕ್..? appeared first on News First Kannada.

]]>
https://newsfirstlive.com/2020/11/24/will-bellad-get-minister-post/feed/ 0
‘ಅವರ ಮಗನಾಗಿ ಹುಟ್ಟೋದಕ್ಕೆ ನಾನು ಪುಣ್ಯ ಮಾಡಿದ್ದೀನಿ’ https://newsfirstlive.com/2020/11/24/i-am-really-lucky-to-be-born-as-ambareeshs-son-says-young-rebel-star-abhishek-ambareesh/ https://newsfirstlive.com/2020/11/24/i-am-really-lucky-to-be-born-as-ambareeshs-son-says-young-rebel-star-abhishek-ambareesh/#respond Tue, 24 Nov 2020 05:40:33 +0000 https://newsfirstlive.com/?p=357122

ನಟ ರೆಬೆಲ್​ ಸ್ಟಾರ್​​ ಅಂಬರೀಶ್​ ಅವರ ಎರಡನೇ ಪುಣ್ಯತಿಥಿಗೆ ಪುತ್ರ ಅಭಿಷೇಕ್​ ಅಂಬರೀಶ್​ ಕೂಡ ಸಮಾಧಿಗೆ ಬಂದು ಪೂಜೆ ಸಲ್ಲಿಸಿದ್ದಾರೆ. ಇದೇ ಸಂದರ್ಭ ತಂದೆಯನ್ನ ತುಂಬಾ ನೆನಪಿಸಿಕೊಂಡಿದ್ದಾರೆ. ತಮ್ಮ ತಂದೆ ಹಾಗೂ ಅಭಿಮಾನಿಗಳ ಅವಿನಾಭಾವ ಸಂಬಂಧದ ಬಗ್ಗೆ ತಾವು ಕಂಡಂತೆ ತಿಳಿಸಿದ್ದಾರೆ. ಜೊತೆಗೆ ಅಂಬರೀಶ್​ ಅವರ ಮಗನಾಗಿ ಹುಟ್ಟೋದಕ್ಕೆ ತಾವು ಪುಣ್ಯ ಮಾಡಿರೋದಾಗಿ ಹೇಳಿಕೊಂಡಿದ್ದಾರೆ. ‘ಇವತ್ತು ಹಲವಾರು ಕಾರ್ಯಕ್ರಮ ನಡೀತಾ ಇವೆ. ಅಪ್ಪ ಪ್ರತಿದಿನ ನೆನಪಾಗ್ತಾರೆ. ಅದ್ರಲ್ಲೂ ಪುಣ್ಯತಿಥಿ ಹತ್ತಿರ ಆಗ್ತಿದ್ದೆ, ಅವ್ರ ಬಗ್ಗೆಯೇ ಚರ್ಚೆ. ನಿನ್ನೆ […]

The post ‘ಅವರ ಮಗನಾಗಿ ಹುಟ್ಟೋದಕ್ಕೆ ನಾನು ಪುಣ್ಯ ಮಾಡಿದ್ದೀನಿ’ appeared first on News First Kannada.

]]>

ನಟ ರೆಬೆಲ್​ ಸ್ಟಾರ್​​ ಅಂಬರೀಶ್​ ಅವರ ಎರಡನೇ ಪುಣ್ಯತಿಥಿಗೆ ಪುತ್ರ ಅಭಿಷೇಕ್​ ಅಂಬರೀಶ್​ ಕೂಡ ಸಮಾಧಿಗೆ ಬಂದು ಪೂಜೆ ಸಲ್ಲಿಸಿದ್ದಾರೆ. ಇದೇ ಸಂದರ್ಭ ತಂದೆಯನ್ನ ತುಂಬಾ ನೆನಪಿಸಿಕೊಂಡಿದ್ದಾರೆ. ತಮ್ಮ ತಂದೆ ಹಾಗೂ ಅಭಿಮಾನಿಗಳ ಅವಿನಾಭಾವ ಸಂಬಂಧದ ಬಗ್ಗೆ ತಾವು ಕಂಡಂತೆ ತಿಳಿಸಿದ್ದಾರೆ. ಜೊತೆಗೆ ಅಂಬರೀಶ್​ ಅವರ ಮಗನಾಗಿ ಹುಟ್ಟೋದಕ್ಕೆ ತಾವು ಪುಣ್ಯ ಮಾಡಿರೋದಾಗಿ ಹೇಳಿಕೊಂಡಿದ್ದಾರೆ.

‘ಇವತ್ತು ಹಲವಾರು ಕಾರ್ಯಕ್ರಮ ನಡೀತಾ ಇವೆ. ಅಪ್ಪ ಪ್ರತಿದಿನ ನೆನಪಾಗ್ತಾರೆ. ಅದ್ರಲ್ಲೂ ಪುಣ್ಯತಿಥಿ ಹತ್ತಿರ ಆಗ್ತಿದ್ದೆ, ಅವ್ರ ಬಗ್ಗೆಯೇ ಚರ್ಚೆ. ನಿನ್ನೆ ನಾನು ದರ್ಶನ್​ ಅಣ್ಣ ಇಬ್ಬರೇ ಊಟಕ್ಕೆ ಕೂತಿದ್ವಿ. ಆಗಲೂ ಅಪ್ಪನ ಬಗ್ಗೆ ಚರ್ಚೆ ಮಾಡ್ತಿದ್ವಿ. ನಾವಿಬ್ಬರೂ ಅಪ್ಪನ ಜೊತೆ ಕಳೆದಂತ ನೆನಪುಗಳನ್ನ ಹಂಚಿಕೊಂಡ್ವಿ. ತುಂಬಾನೇ ನೆನಪಾಗ್ತಾರೆ. ಅದ್ರಲ್ಲೂ ಈ ದಿನ ಬಹಳ ನೆನಪಾಗ್ತಾರೆ. ಒಂದು ಖುಷಿ ಏನಪ್ಪ ಅಂದ್ರೆ, ಇವತ್ತು ಅವರ ಹೆಸರಲ್ಲಿ ಒಳ್ಳೊಳ್ಳೆ ಕಾರ್ಯಗಳು ನಡೆಯುತ್ತಿವೆ. ಅದ್ರಲ್ಲೇ ಒಂದಷ್ಟು ಸುಖ, ಸಂತೋಷ ನೋಡ್ತಾ ಇದ್ದೀವಿ.

ನನ್ನ ತಂದೆಯವರ ಸಾಧನೆಗಳ ಬಗ್ಗೆ ಮಾತನಾಡೋದಕ್ಕೆ ನಾನು ತುಂಬಾ ಚಿಕ್ಕವನು. ಅವರು ಹಾಗೂ ಅವರ ಅಭಿಮಾನಿಗಳ ಮಧ್ಯೆ ಇರುವಂತ ಪ್ರೀತಿ ಬಗ್ಗೆ ಮಾತಾಡೋಕೆ ನನಗೆ ಅಧಿಕಾರ ಇಲ್ಲ. ಅವರ ಮತ್ತು ಅಭಿಮಾನಿಗಳ ಸಂಬಂಧ ಹಂಗಿತ್ತು, ಇವತ್ತಿಗೂ ಹಾಗೇ ಇದೆ. ಆ ಸಂಬಂಧವೇ ಇವತ್ತು ನನಗೆ ಅಷ್ಟು ಪ್ರೀತಿ ಕೊಡ್ತಿರೋದು. ಅವರ ಮಗನಾಗಿ ಹುಟ್ಟೋದಕ್ಕೆ ನಾನು ಪುಣ್ಯ ಮಾಡಿದ್ದೀನಿ ಅಂತಾನೇ ಹೇಳ್ತೀನಿ.’

– ಅಭಿಷೇಕ್​ ಅಂಬರೀಶ್​, ನಟ/ಅಂಬರೀಶ್​ ಪುತ್ರ

The post ‘ಅವರ ಮಗನಾಗಿ ಹುಟ್ಟೋದಕ್ಕೆ ನಾನು ಪುಣ್ಯ ಮಾಡಿದ್ದೀನಿ’ appeared first on News First Kannada.

]]>
https://newsfirstlive.com/2020/11/24/i-am-really-lucky-to-be-born-as-ambareeshs-son-says-young-rebel-star-abhishek-ambareesh/feed/ 0