newsfirstkannada.com

WATCH: ಫಿಲಿಪೈನ್ಸ್‌ ಸಮುದ್ರದಲ್ಲಿ ಹಡಗಿಗೆ ಆಕಸ್ಮಿಕ ಬೆಂಕಿ; 120 ಪ್ರಯಾಣಿಕರ ಕಥೆ ಏನಾಯ್ತು?

Share :

19-06-2023

    ಟೈಟಾನಿಕ್ ಬೋಟ್ ದುರಂತ ನೆನಪಿಸಿದ ಫಿಲಿಪೈನ್ಸ್ ಅನಾಹುತ

    ಸಂಡೇ ಸಖತ್ ಎಂಜಾಯ್ ಮಾಡಲು ತೆರಳಿದ್ತ್ತಿದ 120 ಪ್ರಯಾಣಿಕರು

    ಬೆಂಕಿ ಧಗಧಗನೇ ಹೊತ್ತಿ ಉರಿಯುವಾಗ ಕಿರುಚಾಟ, ಗೋಳಾಟ

ಇಡೀ ವಿಶ್ವದಲ್ಲೇ ಬಹುದೊಡ್ಡ ದೋಣಿ ದುರಂತ ಅಂದ್ರೆ ಥಟ್ ಅಂತಾ ನೆನಪಾಗೋದು ಟೈಟಾನಿಕ್ ಬೋಟ್. 1500ಕ್ಕೂ ಹೆಚ್ಚು ಜನರನ್ನ ಬಲಿ ಪಡೆದ ಟೈಟಾನಿಕ್ ದುರಂತವನ್ನ ಯಾರು ಮರೆಯೋದಕ್ಕೆ ಸಾಧ್ಯವಿಲ್ಲ. ಫಿಲಿಪೈನ್ಸ್ ಸಮುದ್ರದಲ್ಲಿ ಟೈಟಾನಿಕ್ ಬೋಟ್‌ ಅನ್ನೇ ನೆನಪಿಸುವಂತಹ ಘಟನೆಯೊಂದು ನಡೆದಿದೆ. 120 ಪ್ರಯಾಣಿಕರು ಸಾವು, ಬದುಕಿನ ಮಧ್ಯೆ ಸಿಲುಕಿ ಒದ್ದಾಡಿದ್ದಾರೆ.

ಹೌದು.. ಇದು ನಿಜಕ್ಕೂ ಆಘಾತಕಾರಿಯಾದ ಘಟನೆ. 120 ಮಂದಿ ಪ್ರಯಾಣಿಕರು, ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿದ್ದ ಹಡಗು ಫಿಲಿಪೈನ್ಸ್‌ ಸಮುದ್ರದಲ್ಲಿ ಬೆಂಕಿ ಅನಾಹುತಕ್ಕೆ ಸಿಲುಕಿದೆ. ಬೆಂಕಿ ಧಗಧಗನೇ ಹೊತ್ತಿ ಉರಿಯುವಾಗ ಹಡಗಿನಲ್ಲಿದ್ದವರೆಲ್ಲಾ ಕಿರುಚಾಡಿ, ಪರದಾಡಿದ್ದಾರೆ.

ಸಮುದ್ರದಲ್ಲಿ ಹಡಗಿಗೆ ಬೆಂಕಿ ತಗಲುತ್ತಿದ್ದಂತೆ ಕರಾವಳಿ ರಕ್ಷಣಾ ಪಡೆಗೆ ಮಾಹಿತಿ ತಲುಪಿಸಲಾಗಿದೆ. ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ ಕರಾವಳಿ ರಕ್ಷಣಾ ಪಡೆಯ ಬೋಟ್ ಬೆಂಕಿ ಆರಿಸೋ ಕಾರ್ಯ ಆರಂಭಿಸಿದೆ. ರಕ್ಷಣಾ ಸಿಬ್ಬಂದಿ 120 ಪ್ರಯಾಣಿಕರನ್ನ ಕಾಪಾಡಿದ್ದು, ಪ್ರಯಾಣಿಕರು ಹಾಗೂ ಹಡಗಿನಲ್ಲಿದ್ದ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಫಿಲಿಫೈನ್ಸ್‌ನ 120 ಪ್ರಯಾಣಿಕರು ಸಂಡೇ ಟ್ರಿಪ್‌ ಅನ್ನು ಎಂಜಾಯ್ ಮಾಡಲು ಈ ಬೋಟ್‌ನಲ್ಲಿ ಹೋಗಿದ್ರು. ಈ ವೇಳೆ ಹಡಗಿಗೆ ಬೆಂಕಿ ತಗುಲಿದ್ದು ಎಲ್ಲರೂ ಅದೃಷ್ಟವಶಾತ್ ಪಾರಾಗಿದ್ದಾರೆ. ಬೆಂಕಿ ಹೊತ್ತಿ ಉರಿಯುತ್ತಿರುವಾಗ ರಕ್ಷಣೆಗೆ ಧಾವಿಸಿದ ಸೇನಾ ಸಿಬ್ಬಂದಿಯ ಸಾಹಸ ನಿಜಕ್ಕೂ ಗ್ರೇಟ್‌.

ಫಿಲಿಫೈನ್ಸ್‌ನ ಐಸ್‌ಲ್ಯಾಂಡ್‌ನಲ್ಲಿ ನಡೆದಿರೋ ಭಯಾನಕ ಹಡಗು ದುರಂತ ಇದೇ ಮೊದಲಲ್ಲ. ಕಳೆದ ಮಾರ್ಚ್‌ ತಿಂಗಳಲ್ಲೇ 250 ಜನರನ್ನು ಹೊತ್ತೊಯ್ಯುತ್ತಿದ್ದ ಹಡಗು ದುರಂತಕ್ಕೆ ಒಳಗಾಗಿದ್ದು ಕನಿಷ್ಟ 31 ಮಂದಿ ಸಾವನ್ನಪ್ಪಿದ್ರು. 1987ರಲ್ಲಿ ಹಡಗಿನ ಇಂಧನ ಟ್ಯಾಂಕರ್‌ಗೆ ಬೆಂಕಿ ತಗುಲಿ 4,300 ಮಂದಿ ಸಾವನ್ನಪ್ಪಿದ್ದು ಪ್ರಪಂಚದಲ್ಲಿ ಅತಿ ದೊಡ್ಡ ದುರಂತ ಅನ್ನೋ ಕರಾಳ ಇತಿಹಾಸ ಹೊಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: ಫಿಲಿಪೈನ್ಸ್‌ ಸಮುದ್ರದಲ್ಲಿ ಹಡಗಿಗೆ ಆಕಸ್ಮಿಕ ಬೆಂಕಿ; 120 ಪ್ರಯಾಣಿಕರ ಕಥೆ ಏನಾಯ್ತು?

https://newsfirstlive.com/wp-content/uploads/2023/06/Phillipines-1.jpg

Load More