ಮನೆಯೊಂದು ಮೂರು ಬಾಗಿಲಂತಾದ ಕಾಂಗ್ರೆಸ್
ಕುಂದಾನಗರಿಯ ಕಾಂಗ್ರೆಸ್ ಪಾಳಯದಲ್ಲಿ ಅಪಸ್ವರ
ಡಿಕೆಶಿ ವಿರುದ್ಧ ಸಿಡಿದೆದ್ದ ಬೆಳಗಾವಿ ಸಾಹುಕಾರ್..!
ಬೆಳಗಾವಿ: ಕರ್ನಾಟಕದ 2ನೇ ರಾಜಧಾನಿ ಬೆಳಗಾವಿ ರಾಜ್ಯ ರಾಜಕಾರಣದ ಪವರ್‌ಹೌಸ್. ಆದ್ರೀಗ ರಾಜ್ಯ ರಾಜಕೀಯದ ಪವರ್ ಸೆಂಟರ್. ಕುಂದಾನಗರಿಯ ಕೈ ಪಾಳಯದಲ್ಲಿ ಅಸಮಾಧಾನದ ಬೇಗುದಿ ಭುಗಿಲೆದ್ದಿದೆ. ಕಾಂಗ್ರೆಸ್‌ನ ಮೂವರು ನಾಯಕರ ಮಧ್ಯೆ ಟ್ರೈಯಾಂಗಲ್ ಕದನ ಜೋರಾಗಿದೆ. ಡಿಕೆಶಿ ವಿರುದ್ಧ ಸಿಡಿದೆದ್ದ ಸಾಹುಕಾರ್ ಸೋದರನ ವಿರುದ್ಧ ಲಕ್ಷ್ಮೀ ಮೌನ ಮುರಿದಿದ್ದಾರೆ. ಸತೀಶ್-ಹೆಬ್ಬಾಳ್ಕರ್ ಮಧ್ಯೆ ವೀಕ್ನೆಸ್ ವಾರ್ ನಡೆದಿದೆ.
ಹಸ್ತಕ್ಷೇಪ.. ಇದೊಂದು ಪದ ಕಾಂಗ್ರೆಸ್ ಪಾಳಯದಲ್ಲಿ ಬೇಗುದಿಯ ಬಿರುಗಾಳಿ ಎಬ್ಬಿಸಿದೆ. ಬೆಳಗಾವಿ ರಾಜಕಾರಣದಲ್ಲಿ ಕೈ ಕ್ಯಾಪ್ಟನ್ ಇಂಟರ್‌ಫಿಯರ್ ಆಗ್ತಿದ್ದಾರೆ ಅಂತ ಸತೀಶ್ ಜಾರಕಿಹೊಳಿ ವೈಲೆಂಟ್ ಆಗಿದ್ದಾರೆ. ಇದೇ ವಿಚಾರಕ್ಕೆ ಲಕ್ಷ್ಮೀ-ಸತೀಶ್ ಮಧ್ಯೆ ಮಾತಿನ ಯುದ್ಧ ಮುಂದುವರಿದಿದೆ.
ಮೌನ ವೀಕ್ನೆಸ್ ಅಲ್ಲ ಎಂದ ಲಕ್ಷ್ಮೀಗೆ ಸತೀಶ್ ‘ಸ್ಟ್ರಾಂಗ್’ ಟಾಂಗ್
ಇನ್ನು, ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಹಸ್ತಕ್ಷೇಪ ಮಾಡ್ತಿರೋ ಆರೋಪ ಕೈ ಮನೆಯಲ್ಲಿ ಕಿಚ್ಚು ಹಚ್ಚಿದೆ. ಮನೆಯೊಂದು ಮೂರು ಬಾಗಿಲು ಎಂಬ ಪರಿಸ್ಥಿತಿ ತಂದಿಟ್ಟಿದೆ. ಇದೇ ವಿಚಾರಕ್ಕೆ ಈಗ ಲಕ್ಷ್ಮೀ ಹೆಬ್ಬಾಳ್ಕರ್ ಮೌನ ಮುರಿದಿದ್ದಾರೆ. ನನ್ನ ಮೌನ ವೀಕ್ನೆಸ್ ಅಲ್ಲ ಅಂತ ಸತೀಶ್‌ಗೆ ಸವಾಲಿನ ಉತ್ತರ ಕೊಟ್ಟಿದ್ದಾರೆ. ಸಚಿವೆಯ ಈ ಮಾತಿಗೆ ಸ್ಟ್ರಾಂಗು.. ವೀಕ್ ಅಂತೆಲ್ಲ ಇರಲ್ಲ ಅಂತ ಸಾಹುಕಾರ್ ಬ್ರದರ್ ತಿರುಗೇಟು ಕೊಟ್ಟಿದ್ದಾರೆ.
ಮೈಸೂರು ಹೋಗೋಕೆ ನನ್ನನ್ನೂ ಕರೆದಿದ್ರು ಎಂದ ಲಕ್ಷ್ಮೀ
ಮೈಸೂರು ಟೂರ್‌ನಿಂದ ಶುರುವಾದ ಕಾಂಗ್ರೆಸ್ ಒಳಬೇಗುದಿ ಇದೀಗ ಜಗಜ್ಜಾಹೀರಾಗಿದೆ. ಅರಮನೆ ನಗರಿಯ ಪ್ರವಾಸ ಪ್ರಸಂಗದ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಓಪನ್ ಆಗಿ ಮಾತನಾಡಿದ್ದಾರೆ. ಆದ್ರೆ, ಸಚಿವ ಸತೀಶ್ ಜಾರಕಿಹೊಳಿ ಮಾತ್ರ ಮೈಸೂರು ಟೂರ್ ಬಗ್ಗೆ ಬೇರೆ ಅರ್ಥ ಕಲ್ಪಿಸಬೇಡಿ ಅಂತ ಕಿಡಿಕಾರಿದ್ದಾರೆ.
ಲಕ್ಷ್ಮೀ ಪಕ್ಷ ಸಂಘಟನೆ ಮಾತಿಗೂ ಜಾರಕಿಹೊಳಿ ಕೌಂಟರ್
ಇನ್ನೂ ನಾನು ಕಾಂಗ್ರೆಸ್ ಪಕ್ಷದ ಸಂಘಟನೆಯಿಂದ ಬಂದವಳು ಅಂತ ಬೆಳಗಾವಿ ಏರ್‌ಪೋರ್ಟ್‌ನಲ್ಲಿ ನಿಂತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಗುಡುಗಿದ್ರು.. ಇದಕ್ಕೆ ವರ್ಗಾವಣೆ ಪ್ರಹಸನದ ಮೂಲಕ ಜಾರಕಿಹೊಳಿ ತಿರುಗೇಟು ಕೊಟ್ಟಿದ್ದಾರೆ.
ಸತೀಶ್-ಡಿಕೆಶಿ ಮಧ್ಯೆ ಗೆಲುವಿನ ಕ್ರೆಡಿಟ್ ಏಟು-ಎದಿರೇಟು!
ನ್ಯೂಸ್ ಫಸ್ಟ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಗೆಲುವಿನ ಕ್ರೆಡಿಟ್ ಡಿಕೆಶಿಗೆ ಮಾತ್ರ ಸೀಮಿತ ಅಲ್ಲ ಎಂದಿದ್ರು. ಸಚಿವರ ಏಟಿಗೆ ಇವತ್ತು ಎದಿರೇಟು ಕೊಟ್ಟಿರೋ ಡಿಕೆಶಿ, ನನ್ನೊಬ್ಬನಿಂದಲೇ ಪಕ್ಷ ಅಧಿಕಾರಕ್ಕೆ ಬಂತು ಅಂತ ಹಿಂದೆ ಹೇಳಿಲ್ಲ, ಮುಂದೆಯೂ ಹೇಳಲ್ಲ ಅಂತ ಗುಟುರು ಹಾಕಿದ್ದಾರೆ.
ಒಟ್ಟಾರೆ, ಕಾಂಗ್ರೆಸ್ ಮನೆಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಈ ಟ್ರೈಯಾಂಗಲ್ ಕದನದಿಂದ ಗೊತ್ತಾಗುತ್ತಿದೆ. ಹೀಗಾಗಿ ಹಸ್ತದ ಮನೆಯೊಳಗಿನ ಬೆಂಕಿ ಹಸ್ತವನ್ನೇ ಸುಡುತ್ತಾ? ಈ ಅಸಮಾಧಾನದ ಬೇಗುದಿ ಲೋಕ ಕದನದ ಹೊತ್ತಲ್ಲಿ ಕೈಗೆ ಕಂಟಕವಾಗುತ್ತಾ? ಎಂದು ಎದುರು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ