newsfirstkannada.com

ಒಕ್ಕಲಿಗರ ಸಂಘದಲ್ಲಿ ಇನ್ನೂ ಶಾಂತವಾಗಿಲ್ಲ ಬಂಡಾಯ.. ಮತ್ತೆ ಭುಗಿಲೆದ್ದ ಬಣಗಳ ಕಿತ್ತಾಟ..!

Share :

10-06-2023

    ಅಧ್ಯಕ್ಷ C.N.ಬಾಲಕೃಷ್ಣರನ್ನ ಕೆಳಗಿಳಿಸಲು 19 ನಿರ್ದೇಶಕರ ತಂಡ ಪ್ಲಾನ್

    35ರ ಪೈಕಿ 19 ನಿರ್ದೇಶಕರಿಂದ ಅವಿಶ್ವಾಸ ನಿರ್ಣಯ ಮಂಡನೆ

    ತಮ್ಮ ಮೇಲಿನ ಆರೋಪಕ್ಕೆ ಅಧ್ಯಕ್ಷರು ಹೇಳಿದ್ದೇನು..?

ರಾಜ್ಯದಲ್ಲಿ ನಡೆಯೋ ಬಹುತೇಕ ಎಲ್ಲ ಚುನಾವಣೆಗಳ ಬಿಸಿ ಫಲಿತಾಂಶ ಬಂದ ಮೇಲಾದ್ರೂ ಸೈಲೆಂಟಾಗುತ್ತೆ. ಆದ್ರೆ ರಾಜ್ಯ ಒಕ್ಕಲಿಗರ ಸಂಘದ ಎಲೆಕ್ಷನ್‌ ವಿಚಾರ ಮಾತ್ರ ಯಾವತ್ತೂ ತಣ್ಣಗಾಗೋದಿಲ್ಲ ಅಂತ ಮತ್ತೊಮ್ಮೆ ಸಾಬೀತಾಗಿದೆ. ಇರೋ 35 ನಿರ್ದೇಶಕರು ಈಗ 2 ಬಣಗಳಾಗಿದ್ದು, ಇದರಿಂದ ಅಧ್ಯಕ್ಷರ ಖುರ್ಚಿ ಅಲ್ಲಾಡೋದಕ್ಕೆ ಆರಂಭವಾಗಿದೆ.

ರಾಜ್ಯ ಒಕ್ಕಲಿಗರ ಸಂಘದಲ್ಲಿ ಬಣಗಳ ನಡುವಿನ ಫೈಟ್ ಆರಂಭ

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ರಿಸಲ್ಟ್ ಘೋಷಣೆಯಾಗಿ ಅಧ್ಯಕ್ಷರ ಆಯ್ಕೆಯಾದ್ರೂ ಅದು ತುಂಬಾ ಸಮಯ ಶಾಂತವಾಗಿರಲ್ಲ. ಕಳೆದ ಅನೇಕ ಚುನಾವಣೆಗಳಲ್ಲಿ ಇದು ಸಾಬೀತಾಗುತ್ತಲೇ ಬಂದಿದೆ. ಈಗ ಮತ್ತೆ ರಾಜ್ಯ ಒಕ್ಕಲಿಗರ ಸಂಘದಲ್ಲಿ 2 ಬಣಗಳ ನಡುವೆ ಜೋರು ಗಲಾಟೆ ಏರ್ಪಟ್ಟಿದೆ. ಹಾಲಿ ಅಧ್ಯಕ್ಷ ಸಿ.ಎನ್ ಬಾಲಕೃಷ್ಣ ಯಾವ ಕೆಲಸವನ್ನೂ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಇದನ್ನು ಅವರ ಗಮನಕ್ಕೆ ಅನೇಕ ಬಾರಿ ತಂದ್ರೂ ಸಮಸ್ಯೆಗಳನ್ನು ಬಗೆಹರಿಸಲಿಲ್ಲ. ಅವರ ವಿರುದ್ಧ ಮೇ ತಿಂಗಳಲ್ಲೇ ಅವಿಶ್ವಾಸ ಮಂಡಿಸಿ ಪತ್ರ ಬರೆದರೂ ಅವರು ಪ್ರತಿಕ್ರಿಯೆ ನೀಡಿಲ್ಲ. ಈ ಹಿನ್ನೆಲೆ ಸಂಘದ ಆವರಣದಲ್ಲಿ 19 ನಿರ್ದೇಶಕರ ಸಮ್ಮುಖದಲ್ಲಿ ಅವಿಶ್ವಾಸ ಮಂಡಿಸಿದ್ದು, ಇದೇ ತಿಂಗಳ 17ರಂದು ಚುನಾವಣೆ ಮಾಡೋದಾಗಿ ಒಂದು ಬಣ ತಿಳಿಸಿದೆ.

ಈ ಕುರಿತು ಸುಪ್ರೀಂ ಕೋರ್ಟ್​ನಲ್ಲಿ ಅದನ್ನು ನಿರ್ಧಾರ ಮಾಡಲಿ. ಸಿಂಪಲ್​​ ಮೆಜಾರಿಟಿ ಅಂತೆಯೇ ಇದೆ. ಮತದಾನ ಮಾಡಿದ ಅದರ ಬಗ್ಗೆ ತಿಳಿಯಲಿದೆ. ಅದರಲ್ಲಿ ಅವರಿಗೆ ಬಹುಮತ ಬಂದರೆ ಅವರೇ ಅಧಿಕಾರ ಸ್ವೀಕಾರ ಮಾಡಲಿ. ಅವರೇ ಕಾರ್ಯದರ್ಶಿಯಾಗಿ ಮುಂದುವರೆಯಲಿ ಎಂದು ಒಕ್ಕಲಿಗ ಸಂಘದ ಮಾಜಿ ಅಧ್ಯಕ್ಷ ಕೆಂಚಪ್ಪಗೌಡ ತಿಳಿಸಿದ್ದಾರೆ.

ಮೆಜಾರಿಟಿ ಇಲ್ಲದ ನಿರ್ದೇಶಕರ ತಂಡದಿಂದ ಏನೂ ಮಾಡಲಾಗಲ್ಲ

ರಾಜ್ಯ ಒಕ್ಕಲಿಗರ ಸಂಘದಲ್ಲಿ ಸದ್ಯ 35 ನಿರ್ದೇಶಕರಿದ್ದು, ಅವರ ಪೈಕಿ ಕೇವಲ 19 ನಿರ್ದೇಶಕರು ಮಾತ್ರ ಹಾಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಿದ್ದಾರೆ. ಅವಿಶ್ವಾಸ ಮಂಡಿಸಿದ 19 ನಿರ್ದೇಶಕರ ಪೈಕಿಯೂ ಇಬ್ಬರು ನಿರ್ದೇಶಕರು ಎರಡೂ ಬಣಗಳ ಪರವಾಗಿ ಸಹಿ ಮಾಡಿದ್ದಾರೆ. ಇದರಿಂದಾಗಿ ಮೆಜಾರಿಟಿ ಕೇವಲ 17 ಸ್ಥಾನಕ್ಕೆ ಇಳಿದಿದೆ ಎನ್ನಲಾಗಿದೆ. ರಾಜ್ಯ ಒಕ್ಕಲಿಗರ ಸಂಘದ ಬೈಲಾ ಪ್ರಕಾರ 3ರಲ್ಲಿ 2 ಭಾಗದಷ್ಟು ನಿರ್ದೇಶಕರು ಅವಿಶ್ವಾಸ ಮಂಡಿಸಿದ್ರೆ ಮಾತ್ರ ಮೆಜಾರಿಟಿ ಎಂದು ಪರಿಗಣಿಸಬೇಕು ಅಂತ ಹೇಳಲಾಗಿದೆ.  35 ನಿರ್ದೇಶಕರ ಪೈಕಿ ಕನಿಷ್ಟ 24 ನಿರ್ದೇಶಕರಾದ್ರೂ ಅವಿಶ್ವಾಸ ಮಂಡಿಸಿದ್ರೆ ಮಾತ್ರ ಸ್ಥಾನ ತೆರವಾಗಬೇಕಿದೆ. 24 ನಿರ್ದೇಶಕರು ಅವಿಶ್ವಾಸ ಮಂಡಿಸಿದ್ರೆ ಖಂಡಿತವಾಗಿಯೂ ಅವರ ನಿರ್ಧಾರವನ್ನು ಗೌರವಿಸುತ್ತೇನೆ ಎಂದು ಹಾಲಿ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಹೇಳ್ತಿದ್ದಾರೆ.

ಅವಿಶ್ವಾಸ ಮಂಡನೆ ವಿಚಾರವಾಗಿ ಸಭೆ ನಡೆಸಲಾಗಿದೆ. ಸಭೆ ಆರಂಭಕ್ಕೂ ಮೊದಲು ಆವರಣದ ಕೀಲೀ ಕೈ ಕೋಡೋದಕ್ಕೂ ಹೈಡ್ರಾಮಾ ನಡೆದಿತ್ತು. ಕೊನೆಗೂ ಆರಂಭವಾದ ಸಭೆಯಲ್ಲಿ ಸಿ.ಎನ್ ಬಾಲಕೃಷ್ಣ ವಿರುದ್ಧ ಅವಿಶ್ವಾಸ ಮಂಡಿಸಿದ್ದು, ಇದೇ ತಿಂಗಳ 17ರಂದು ಚುನಾವಣೆ ನಡೆಸೋದಾಗಿ ಕೆಂಚಪ್ಪಗೌಡರ ಬಣ ಹೇಳಿದ್ರೆ, ಸಹಕಾರ ಸಂಘದ ನಿಯಮಗಳಂತೆ ವರ್ತಿಸಿ ಎಂದು ಹಾಲಿ ಅಧ್ಯಕ್ಷ ಮನವಿ ಮಾಡಿದ್ರು. ಅಧ್ಯಕ್ಷಗಿರಿಗಾಗಿ ಒಕ್ಕಲಿಗರ ಸಂಘದಲ್ಲಿ ನಡೆಯುತ್ತಿರೋ ಮೊದಲನೇ ಗಲಾಟೆ ಕಳೆದ ಹಲವು ವರ್ಷಗಳಿಂದ ನೋಡಿಕೊಂಡು ಬಂದಿರೋ ಜನರಿಗೆ ಇದು ಹೊಸತಲ್ಲ. ಆದ್ರೆ ಈ ಎರಡು ಬಣಗಳ ಗಲಾಟೆ ಈಗ ಯಾವ ಹಂತಕ್ಕೆ ಹೋಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಕ್ಕಲಿಗರ ಸಂಘದಲ್ಲಿ ಇನ್ನೂ ಶಾಂತವಾಗಿಲ್ಲ ಬಂಡಾಯ.. ಮತ್ತೆ ಭುಗಿಲೆದ್ದ ಬಣಗಳ ಕಿತ್ತಾಟ..!

https://newsfirstlive.com/wp-content/uploads/2023/06/vakkalihga-2.jpg

Load More