ಕೈ ಪಾಳಯದಲ್ಲಿ ಜೋರಾದ ಯುವ ಕಾಂಗ್ರೆಸ್ ಅಧ್ಯಕ್ಷಗಿರಿಯ ಜಿದ್ದಾಜಿದ್ದಿ
ಅಖಾಡದಲ್ಲಿ ತೋಳು ತಟ್ಟುತ್ತಿರುವ ಮಂಜುನಾಥ್ ಮತ್ತು ದೀಪಿಕಾ ರೆಡ್ಡಿ
ಯಾರ ಬಲ ಹೇಗಿದೆ? ಯಾರಿಗೆ ಒಲಿಯಲಿದೆ ಯುವ ಕಾಂಗ್ರೆಸ್ ಅಧ್ಯಕ್ಷಗಿರಿ
ಬೆಂಗಳೂರು: ರಾಜ್ಯದಲ್ಲಿ ಹಲವು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಿದೆ. ಅದಕ್ಕೆ ಇನ್ನೂ ಕೂಡ ಮುಹೂರ್ತ ಫಿಕ್ಸ್ ಆಗಿಲ್ಲ. ಹರಿಯಾಣ ಹಾಗೂ ಜಮ್ಮು ಕಾಶ್ಮೀರದ ವಿಧಾನಸಭಾ ಚುನಾವಣೆ ನಡೆದ ಬಳಿಕವೇ ಕರ್ನಾಟಕದಲ್ಲಿ ತೆರವುಗೊಂಡಿರುವ ಕ್ಷೇತ್ರಗಳಿಗೆ ಚುನಾವಣೆ ಘೋಷಿಸುವ ಸಾಧ್ಯತೆ ಇದೆ. ಆದ್ರೆ ಈಗ ಕಾಂಗ್ರೆಸ್ ಪಾಳಯದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಂಜುನಾಥ್ ಹಾಗೂ ದೀಪಿಕಾ ರೆಡ್ಡಿ ನಡುವೆ ಭಾರೀ ಜಿದ್ದಾಜಿದ್ದಿ ನಡೆದಿದೆ.
ಹೆಚ್ ಎಸ್ ಮಂಜುನಾಥ್ ಬಲಾಬಲವೇನು..?
ರಾಜ್ಯ ಯುವ ಕಾಂಗ್ರೆಸ್ ಚುನಾವಣೆಯ ಸದಸ್ಯತ್ವ ನೊಂದಣಿ ಹಾಗೂ ನೂತನ ಅಧ್ಯಕ್ಷರ ಆಯ್ಕೆ ವಿಚಾರದ ಪ್ರಕ್ರಿಯೆಗಳು ತಾಲೂಕು, ಜಿಲ್ಲಾ ಹಾಗೂ ರಾಜ್ಯಾದಂತ ಭರ್ಜರಿಯಾಗಿ ನಡೀತಿದೆ. ಆಗಸ್ಟ್ 20 ರಿಂದ ಆರಂಭವಾಗಿರುವ ಸದಸ್ಯತ್ವ ನೋಂದಣಿ ಹಾಗೂ ಚುನಾವಣೆ ಪ್ರಕ್ರಿಯೆಗಳು ಸೆಪ್ಟೆಂಬರ್ 20 ಕ್ಕೆ ಅಂತ್ಯವಾಗಲಿದೆ.
ಈ ಬಾರಿ ಚುನಾವಣೆಯಲ್ಲಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಹೆಚ್ಎಸ್ ಮಂಜುನಾಥ್ ಎನ್ಎಸ್ಯುಐ ವಿದ್ಯಾರ್ಥಿ ಸಂಘಟನೆಯಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದವರು. ಸಕ್ರಿಯವಾಗಿ ಕಾಂಗ್ರೆಸ್ ಪಕ್ಷದ ಎಲ್ಲಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಎರಡು ಬಾರಿ ಎನ್ಎಸ್ಯುವೈ ರಾಜ್ಯಾಧ್ಯಕ್ಷರಾಗಿ, ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ಕಾರ್ಯಧ್ಯಕ್ಷರಾಗಿ ಕೆಲಸ ಮಾಡಿರುವ ಅನುಭವವಿದೆ. ಪ್ರಬಲ ಒಕ್ಕಲಿಗ ಸಮುದಾಯದವರಾಗಿದ್ದು, ಡಿಸಿಎಂ ಡಿಕೆಶಿ ಬೆಂಬಲ ಕೂಡ ಇದ್ದು ಪ್ರಬಲ ಪೈಪೋಟಿ ನೀಡಲಿದ್ದಾರೆ.
ಇದನ್ನೂ ಓದಿ:ಕುಟುಂಬ ಸಮೇತ ಅಮೆರಿಕಗೆ ಹೋದ ಡಿಕೆ ಶಿವಕುಮಾರ್; ಕಮಲಾ ಹ್ಯಾರಿಸ್ ಆಹ್ವಾನದ ಬಗ್ಗೆ ಸ್ಪಷ್ಟನೆ
ನಗರ ಪ್ರದೇಶಕ್ಕೆ ಸೀಮಿತವಾದ ಸಂಘಟನೆ ಎಂಬ ಅಪವಾದವಿದೆ. ಜೊತೆಗೆ ರಾಜ್ಯ ಯುವ ಕಾಂಗ್ರೆಸ್ ಗೆ ಹೊಸ ಮುಖದ ನಿರೀಕ್ಷೆ ಇದೆ ಎಂಬ ಮಾತಿದೆ. ಕಾಂಗ್ರೆಸ್ ಪಕ್ಷದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಯುವ ಕಾಂಗ್ರೆಸ್ ಘಟಕದ ಉಸಾಬರಿ ಏಕೆ ಎಂಬ ಪ್ರಶ್ನೆ ಕೂಡ ಇದೆ.
ಇದನ್ನೂ ಓದಿ: ಸಿಎಂ ಆಗಲು ಸಾಹುಕಾರ್ಗಿದೆ ಸುವರ್ಣಾವಕಾಶ; ಸತೀಶ್ ಜಾರಕಿಹೊಳಿಗಿರೋ ಆ ಶಕ್ತಿಗಳೇನು?
ಇನ್ನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ದೀಪಿಕಾ ರೆಡ್ಡಿ ಕೂಡ ಭರ್ಜರಿ ಪ್ರಚಾರ ಮಾಡ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಂದೆಗೆ ಟಿಕೆಟ್ ನೀಡಲಿಲ್ಲ ಎಂದು ಬೇಸರಗೊಂಡು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದ ದೀಪಿಕಾ ರೆಡ್ಡಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಮುಖ್ಯಮಂತ್ರಿ, ಸಿದ್ದರಾಮಯ್ಯ ಹಾಗೂ ರಾಜ್ಯ ಮತ್ತು ಕೇಂದ್ರ ನಾಯಕರ ವಿರುದ್ಧ ಮಾತನಾಡಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ರು. ಪುನಃ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಆಗಿ, ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ.
ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದ ದೀಪಿಕಾಗೆ ಒಲಿಯುತ್ತಾ ಅಧ್ಯಕ್ಷಗಿರಿ?
ದೀಪಿಕಾ ಸ್ಪರ್ದೆಯಿಂದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮೊದಲ ಬಾರಿಗೆ ಮಹಿಳೆಯೊಬ್ಬರು ಪೈಪೋಟಿ ನೀಡ್ತಿದ್ದಾರೆ. ಯುವ ಮಹಿಳಾ ಮತದಾರರ ಬೆಂಬಲ ಇವರಿಗೆ ಸಿಗುವ ಸಾಧ್ಯತೆ ಇದೆ. ಪ್ರಭಾವಿ ಸಚಿವರ ಪುತ್ರರೊಬ್ಬರ ಬೆಂಬಲ ಕೂಡ ದೀಪಿಕಾಗಿದೆ ಎಂಬ ಮಾತಿದೆ
ಒಟ್ಟಾರೆ ಯುವ ಕಾಂಗ್ರೆಸ್ ಘಟಕದ ಮೇಲೆ ಡಿಸಿಎಂ ಶಿವಕುಮಾರ್ಗೆ ಬಿಗಿ ಹಿಡಿತ ಇದೆ. ಹಾಗಾಗಿ ಡಿಕೆಶಿ ಆಪ್ತನಿಗೆ ಅಧ್ಯಕ್ಷ ಪಟ್ಟ ಸಿಗುತ್ತಾ? ಅಥವಾ ದೀಪಿಕಾ ರೆಡ್ಡಿಯವರಿಗೆ ಯುವ ಮತದಾರರು ಜೈ ಅಂತಾರಾ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ