ಫುಟ್ಪಾತ್ ವ್ಯಾಪಾರಿಗಳಿಂದ ವರ್ತಕರಿಗೆ ತೊಂದರೆ ಆರೋಪ
ಎಸ್ಪಿ ರೋಡ್ನಲ್ಲಿ ಎರಡು ಗುಂಪುಗಳ ಮಧ್ಯೆ ಭಾರೀ ಗಲಾಟೆ
ಎಷ್ಟೇ ಯತ್ನಿಸಿದ್ರೂ ನಿಯಂತ್ರಣಕ್ಕೆ ಬಾರದ 2 ಗುಂಪುಗಳ ಘರ್ಷಣೆ
ಬೆಂಗಳೂರು: ನಗರದ ಎಸ್ಪಿ ರೋಡ್ನಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ಆಗಿದೆ. ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಜೋರು ಜಗಳ ಆಗಿದ್ದು, ಇದರ ಪರಿಣಾಮ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಸದ್ಯ ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಸಂಧಾನ ಕಾರ್ಯಕ್ಕೆ ಯತ್ನಿಸಿದ್ದಾರೆ. ಎಷ್ಟೇ ಸಂಧಾನಕ್ಕೆ ಯತ್ನಿಸಿದರೂ ಎರಡು ಗುಂಪುಗಳ ಮಧ್ಯದ ಗಲಾಟೆ ನಿಯಂತ್ರಣಕ್ಕೆ ಬಂದಿಲ್ಲ.
ಈ ಸಂಬಂಧ ನ್ಯೂಸ್ಫಸ್ಟ್ ಜತೆಗೆ ಮಾತಾಡಿದ ಒಂದು ವರ್ತಕರ ಗುಂಪಿನ ಸದಸ್ಯ, ಫುಟ್ಪಾತ್ ವ್ಯಾಪರಿಗಳಿಂದ ಸಾಕಷ್ಟು ತೊಂದರೆ ಆಗಿದೆ. ಅಂಗಡಿ ಖಾಲಿ ಮಾಡಿಸಿ ಎಂದು ಹಲವು ಬಾರಿ ಮನವಿ ಮಾಡಿದ್ದೇವೆ. ಬಿಬಿಎಂಪಿ, ಪೊಲೀಸರಿಗೆ ಎಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನೆ ಆಗಿಲ್ಲ. ನಮಗೆ ನ್ಯಾಯ ಬೇಕು, ಹಲ್ಲೆ ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ