12 ಗುಂಟೆ ಜಾಗದ ವಿಚಾರಕ್ಕೆ ಮಾರಾಮಾರಿ
ಕಲ್ಲು, ದೊಣ್ಣೆಗಳಿಂದ ಪರಸ್ಪರ ಹೊಡೆದಾಟ
ಎರಡೂ ಕುಟುಂಬಸ್ಥರಿಂದ ಕಲ್ಲು ತೂರಾಟ
ಆಸೆ ಅನ್ನೋದು ಇಲ್ಲದಿದ್ರೆ ಮನುಷ್ಯ, ತಾನು ಮನುಷ್ಯ ಅಂತಲೇ ಅನಿಸಿಕೊಳ್ಳಲ್ಲವೇನೋ. ಈ ಆಸೆಯಿಂದಲೇ ಜಗತ್ತಿನಲ್ಲಿ ಅದೆಷ್ಟೋ ಅದ್ಭುತಗಳು ನಡೆದಿವೆ. ಅದೇ ರೀತಿ ಅದೆಷ್ಟೋ ದುರಂತಗಳೂ ಆಗಿವೆ. ಇದೂ ಅಂಥದ್ದೇ ಒಂದು ಘಟನೆ.
ಅಕ್ರಮವಾಗಿ ಆಸ್ತಿಗಳನ್ನು ಲೂಟಿ ಮಾಡ್ಕೊಂಡು ದೌರ್ಜನ್ಯ ಮಾಡ್ತಾರೆ ಎಂದು ವಿಡಿಯೋ ಮಾಡುತ್ತಿದ್ದ. ಇದಕ್ಕೆಲ್ಲಾ ಕ್ಯಾರೇ ಅನ್ನದೆ ಗೇಟ್ ಆಚೆ ಇದ್ದ ಕೆಲವರು ಕಲ್ಲು ತೂರಿದ್ದಾರೆ. ಹೀಗೆ ಕಲ್ಲು, ದೊಣ್ಣೆಗಳಿಂದ ಪರಸ್ಪರ ಹೊಡೆದಾಡಿಕೊಂಡವರು ಬೇರೆ ಯಾರು ಅಲ್ಲ.. ಇವ್ರು ಒಂದೇ ಊರಿನವರು.. ಸಾಲದಕ್ಕೆ ಅಕ್ಕ ಪಕ್ಕದ ಮನೆಯವರು.
23 ವರ್ಷಗಳ ಹಿಂದೆ ಖರೀದಿಸಿದ್ದ 12 ಗುಂಟೆ ಜಾಗದ ವಿಚಾರಕ್ಕೆ ಎರಡು ಕುಟುಂಬಗಳ ಮಧ್ಯೆ ಗಲಾಟೆ ಶುರುವಾಗಿದೆ. ಕಲ್ಲು, ದೊಣ್ಣೆಗಳಿಂದ ಪರಸ್ಪರ ಹೊಡೆದಾಡಿಕೊಂಡ ಘಟನೆ ಚಿತ್ರದುರ್ಗ ತಾಲೂಕಿನ ಕೊಳಹಾಳ್ ಗ್ರಾಮದಲ್ಲಿ ನಡೆದಿದೆ.
ಏನಿದು ಗಲಾಟೆ..?
ಸಣ್ಣ ತಿಪ್ಪೇಸ್ವಾಮಿ ಹಾಗೂ ಸಣ್ಣ ಮಾರಪ್ಪ ಖರೀದಿಸಿದ್ದ ಜಾಗವನ್ನ ಪಕ್ಕದ ಜಾಗೆಯ ಮುರಗೇಂದ್ರಪ್ಪ ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ ಅಂತ ಆರೋಪಿಸಲಾಗಿದೆ. ಅಷ್ಟೆ ಅಲ್ಲದೆ ನಮ್ಮ ಜಮೀನು ನಮಗೆ ಬಿಟ್ಟುಕೊಡಿ ಎಂದಿದ್ದಕ್ಕೆ ಸಣ್ಣ ತಿಪ್ಪೇಸ್ವಾಮಿ ಕುಟುಂಬಸ್ಥರ ಮೇಲೆ ಮುರಗೇಂದ್ರಪ್ಪ ಕುಟುಂಬ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.
ಇದೇ ವೇಳೆ ಕಲ್ಲು, ದೊಣ್ಣೆಗಳಿಂದ ಮಾರಾಮಾರಿ ನಡೆದಿದೆ ಎನ್ನಲಾಗಿದ್ದು, ಘಟನೆಯಲ್ಲಿ ಐವರಿಗೆ ಗಾಯಗಳಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ