newsfirstkannada.com

×

ಬಿಗ್​ ಬಾಸ್ ಮಾಜಿ ಸ್ಪರ್ಧಿ ಸಮೀರ್ ಆಚಾರ್ಯ ಕೇಸ್‌ಗೆ ಹೊಸ ಟ್ವಿಸ್ಟ್.. ಪತ್ನಿ ಮೇಲೆ ಕೈ ಎತ್ತಿದ್ದು ನಿಜಾನಾ?

Share :

Published September 30, 2024 at 8:03pm

Update September 30, 2024 at 8:06pm

    ಪತ್ನಿಯ ಮೇಲೆ ಕೈ ಮಾಡಿದ ಮಾಜಿ ಬಿಗ್​ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ

    ಕ್ಷುಲ್ಲಕ ಕಾರಣಕ್ಕಾಗಿ ಕಿತ್ತಾಡಿಕೊಂಡ ಕುಟುಂಬ, ಸಮೀರ್​ರಿಂದ ಪತ್ನಿ ಮೇಲೆ ಹಲ್ಲೆ

    ಇನ್​ಸ್ಟಾಗ್ರಾಮ್​ನಲ್ಲಿ ಲೈವ್​ ಇರುವಾಗಲೇ ನಡೆದು ಹೋಯ್ತು ಒಂದು ಮಹಾಯುದ್ಧ

ಬಿಗ್​ಬಾಸ್, ಇದೊಂದು ಶೋಗಾಗಿ ಜನ ಕಾದು ಕಾದು ಸುಸ್ತಾಗಿದ್ರು. ಆಗ ಶುರುವಾಗುತ್ತೆ, ಈಗ ಶುರುವಾಗುತ್ತೆ ಅಂತ ಕೊನೆಗೆ ಬಿಗ್​ಬಾಸ್​ 11ನೇ ಸೀಸನ್​ ಕಿಕ್ ಸ್ಟಾರ್ಟ್​ ಪಡೆದುಕೊಂಡಿದೆ. ನರಕ ಸ್ವರ್ಗದ ಹೊಸ ಮನೆಗೆ 17 ಜನ ಸ್ಫರ್ಧಿಗಳು ಎಂಟ್ರಿ ಕೊಟ್ಟಾಗಿದೆ. ಭಾನುವಾರ ಒಂದ್ಕಡೆ ಬಿಗ್​ಬಾಸ್​ 11ನೇ ಸೀಸನ್​ ಶುಭಾರಂಭವಾಗ್ತಿದ್ದಂತೆ. ಇನ್ನೊಂದೆಡೆ ಇದೇ ಬಿಗ್​ಬಾಸ್​ನ ಮಾಜಿ ಸ್ಪರ್ಧಿ ತಮ್ಮ ಪತ್ನಿ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಕ್ಷುಲ್ಲಕ ಕಾರಣಕ್ಕೆ ಅತ್ತೆ ಮಾವ ಗಂಡ ಸೇರಿ ಸೊಸೆಯನ್ನು ಥಳಿಸಿದ್ದಾರೆ ಅನ್ನೋ ಸುದ್ದಿ ಸಂಚಲನ ಸೃಷ್ಟಿಸಿದೆ.

ಇದನ್ನೂ ಓದಿ: BBK11: ಬಿಗ್‌ ಬಾಸ್ ಮನೆಯಲ್ಲಿ ಬೆಂಕಿ.. ನರಕ ಬಿಟ್ಟು ಸ್ವರ್ಗಕ್ಕೆ ಬಂದ ಚೈತ್ರಾ ಆರ್ಭಟ; ಏನಾಯ್ತು?

ಬಿಗ್​ಬಾಸ್ ಸಮೀರ್ ಆಚಾರ್ಯ ಸಂಸಾರದಲ್ಲಿ ಕೋಲಾಹಲ!
ನಿನ್ನೆ ಸಂಜೆ ಆರು ಗಂಟೆಗೆ ಬಿಗ್​ಬಾಸ್​ ಶುರುವಾಗಿತ್ತು. 11 ನೇ ಸೀಸನ್​ ಶುರುವಾದ ಎರಡು ಗಂಟೆಯೊಳಗೆ ಮಾಜಿ ಸ್ಪರ್ಧಿ ಸಮೀರ್​ ಆಚಾರ್ಯ ಸಂಸಾರದಲ್ಲಿ ಕೋಲಾಹಲ ಎದ್ದಿರುವ ಸುದ್ಧಿ ಸಂಚಲನ ಸೃಷ್ಟಿಸಿತ್ತು. ಸಮೀರ್​ ಆಚಾರ್ಯ ಪತ್ನಿ ಶ್ರಾವಣಿ ಮೇಲೆ ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿತ್ತು. ಸಮೀರ್ ಮಾತ್ರವಲ್ಲ ಸಮೀರ್ ತಂದೆ ತಾಯಿ ಕೂಡ ಶ್ರಾವಣಿಯನ್ನ ಥಳಿಸಿದ್ದು. ಶ್ರಾವಣಿ ಮುಖ ಮತ್ತು ಕೈಗೆ ಗಾಯಗಳಾಗಿವೆ ಅನ್ನೋ ಆರೋಪ ಕೇಳಿ ಬಂದಿತ್ತು.

ಸಣ್ಣ ವಿಚಾರಕ್ಕೆ ಶುರುವಾದ ಗಲಾಟೆ ವಿಕೋಪಕ್ಕೆ ಹೋಗಿದ್ದೇಕೆ?
ಸಮೀರ್ ಆಚಾರ್ಯ ಮತ್ತು ಶ್ರಾವಣಿ ಇವರಿಬ್ಬರು ಇನ್​ಸ್ಟಾ ವಿಡಿಯೋಗಳನ್ನ ಜನ ಸಿಕ್ಕಾಪಟ್ಟೆ ಇಷ್ಟ ಪಡ್ತಾರೆ. ಗಂಡ ಹೆಂಡತಿ ಸದಾ ಪೂಜೆ ಪುನಸ್ಕಾರ ಆಧ್ಯಾತ್ಮ ವಿಚಾರಗಳನ್ನ ಹಂಚಿಕೊಳ್ತಾ ಇದ್ದರು. ಇವರ ಆಚಾರ ವಿಚಾರಗಳು ಕೆಲವರಿಗೆ ಸ್ಫೂರ್ತಿಯಾಗಿತ್ತು ಅಂದ್ರು ತಪ್ಪಾಗಲ್ಲ. ಇವರಿಬ್ಬರಿಗೂ ಪುಟ್ಟ ಕಂದಮ್ಮ ಕೂಡ ಇದೆ. ಭಾನುವಾರ ಇದೇ ಮಗುವಿನ ವಿಚಾರಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದೆ. ಮಗು ಹಠ ಮಾಡ್ತಿತ್ತು ಅನ್ನೋ ಕಾರಣಕ್ಕೆ ಶ್ರಾವಣಿ ಮಗಳನ್ನ ಚೂರು ಬೆದರಿಸಿದ್ದಂತೆ. ಮೊಮ್ಮಗಳನ್ನ ಯಾಕೆ ಬೈತಿಯಾ ಅಂತ ಸಮೀರ್ ತಂದೆ ಶ್ರಾವಣಿಯನ್ನ ಬೈದಿದ್ದರಂತೆ. ಇದೇ ವಿಚಾರ ಮಾತಿಗೆ ಮಾತು ಬೆಳೆದು ಶ್ರಾವಣಿ ಮೇಲೆ ಹಲ್ಲೆ ನಡೆದಿದೆ ಅಂತ ತಿಳಿದು ಬಂದಿದೆ.

ಮೊಮ್ಮಗಳನ್ನ ಗದರಿಸಿದ್ದ ಸಮೀರ್ ತಂದೆ ಪ್ರಶ್ನೆ ಮಾಡಿದ್ದರು. ಇದೇ ವಿಚಾರ ವಿಕೋಪಕ್ಕೆ ಹೋಗಿ ಸಮೀತ್ ಪತ್ನಿ ಶ್ರಾವಣಿ ಮತ್ತು ಸಮೀರ್ ಮಧ್ಯೆ ಗಲಾಟೆ ನಡೆದಿದೆ. ಕೊನೆಗೆ ಸಮೀರ್ ಮತ್ತು ಆತನ ತಂದೆ ತಾಯಿ ಮೂವರು ಸೇರಿ ಶ್ರಾವಣಿ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಯವ ವೇಳೆ ಶ್ರಾವಣಿ ಇನ್​ಸ್ಟಾದಲ್ಲಿ ಲೈವ್ ಬಂದಿದ್ರಂತೆ. ಆಗ ಶ್ರಾವಣಿ ಕೈಯಲ್ಲಿದ್ದ ಫೋನ್​ ಒಡೆದು ಹಾಕಿ ಆಕೆ ಕೈಗೆ ಹಾಗೂ ಮುಖಕ್ಕೆ ಹೊಡೆದ ಪರಿಣಾಮ ಗಾಯಗಳಾಗಿವೆ ಅಂತ ಹೇಳಲಾಗ್ತಿದೆ. ಗಲಾಟೆಯಲ್ಲಿ ಸಮೀರ್ ಆಚಾರ್ಯ ತಂದೆ ತಲೆಗೂ ಗಾಯ ಆಗಿದೆ ಅಂತ ತಿಳಿದು ಬಂದಿದೆ.

ಇದನ್ನೂ ಓದಿ: ಬಿಗ್​​ಬಾಸ್​ ವೇದಿಕೆ ಮೇಲೆ ದರ್ಶನ್​​ ಹೆಸರು ಹೇಳಿದ ಸ್ಪರ್ಧಿ; ಸುದೀಪ್​​ ರಿಯಾಕ್ಷನ್​ ಹೇಗಿತ್ತು?

ಅದೇನೋ ಗಾದೆ ಅಂತಾರಲ್ಲ ಮಾಡೋದೆಲ್ಲ ಅನಾಚಾರ ಮನೆ ಮುಂದೆ ಬೃಂದಾವನ ಅಂತ. ಹಂಗೆ ಊರೋರಿಗೆಲ್ಲ ಬುದ್ಧಿ ಹೇಳ್ತಿದ್ದ ಸಮೀರ್ ಆಚಾರ್ಯ. ಮನೆಯಲ್ಲಿ ನಡೆದ ಗಲಾಟೆಯನ್ನ ತಣ್ಣಾಗಾಗಿಸೋದನ್ನ ಬಿಟ್ಟು ಪತ್ನಿ ಮೇಲೆ ಹಲ್ಲೆ ಮಾಡಿಬಿಟ್ಟಿದ್ದಾರೆ. ಘಟನೆ ನಡೆದ ಬಳಿಕ ಶ್ರಾವಣಿ ನ್ಯಾಯಕ್ಕಾಗಿ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲ್ಲೇರಿದ್ರು. ಮಾವನ ಮನೆ ವಿರುದ್ಧ ದೂರು ಕೊಡೋದಕ್ಕೆ ಮುಂದಾಗಿದ್ರು. ಆದ್ರೆ ಪೊಲೀಸರು ಗಂಡ ಹೆಂಡತಿಯ ಕೌನ್ಸ್​ಲಿಂಗ್ ಮಾಡಿ ಇಬ್ಬರನ್ನ ಮತ್ತೆ ಒಂದು ಮಾಡಿ ಕಳಿಸಿದ್ದಾರೆ. ಇಬ್ಬರಿಂದಲೂ ಮುಂದೆ ಹೀಗೆ ಆಗುವುದಿಲ್ಲ. ಮುಚ್ಚಳಿಕೆ ಪತ್ರ ಬರೆಸಿಕೊಂಡ ಸಮೀರ್ ಮತ್ತು ಶ್ರಾವಣಿಯನ್ನ ವಾಪಸ್ ಮನೆಗೆ ಕಳಿಸಿದ್ದಾರೆ.

ಬಿಗ್​ ಬಾಸ್ ಸೀಸನ್​ ಐದರಲ್ಲಿ ಸಮೀರ್ ಆಚಾರ್ಯ ಸ್ಫರ್ಧಿಯಾಗಿ ಬಂದಿದ್ರು. ಇದಷ್ಟೇ ಅಲ್ಲ ಕನ್ನಡದ ಕೋಟ್ಯಧಿಪತಿ ಟೈಮ್​ನಲ್ಲೂ ಓವರ್ ಕಾನ್ಪಿಡೆನ್ಸ್​ನಿಂದ ಉತ್ತರ ನೀಡಿ ಸಮೀರ್ ಟ್ರೋಲ್ ಕೂಡ ಆಗಿದ್ರು. ಈಗ ಹೆಂಡತಿ ಮೇಲೆ ಹಲ್ಲೆ ಮಾಡಿ ಮತ್ತೆ ಸುದ್ಧಿಯಾಗಿದ್ದಾರೆ. ಒಟ್ನಲ್ಲಿ ಸಮಾಜಕ್ಕೆ ಮಾದರಿಯಾಗಬೇಕಿದ್ದವರೇ ಈಗ ಹಾದಿ ಬೀದಿ ರಂಪಾಟ ಮಾಡ್ಕೊಂಡಿದ್ರು ನಿಜಕ್ಕೂ ದುರಂತವೇ ಸರಿ. ಸದ್ಯ ಗಂಡ ಹೆಂಡತಿ ನಡೆದ ಕಹಿ ಘಟನೆ ಮರೆತು ಒಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​ ಬಾಸ್ ಮಾಜಿ ಸ್ಪರ್ಧಿ ಸಮೀರ್ ಆಚಾರ್ಯ ಕೇಸ್‌ಗೆ ಹೊಸ ಟ್ವಿಸ್ಟ್.. ಪತ್ನಿ ಮೇಲೆ ಕೈ ಎತ್ತಿದ್ದು ನಿಜಾನಾ?

https://newsfirstlive.com/wp-content/uploads/2024/09/Bigg-Boss-Sameer-Acharya-Wife.jpg

Load More