newsfirstkannada.com

ಆನ್​ಲೈನ್​ನಲ್ಲಿ ಮೂಡಿತು ಪ್ರೀತಿ: ಯುವತಿಯನ್ನ ಮದುವೆಯಾಗಲು ಫಿಜಿ ದೇಶದಿಂದ ಭಾರತಕ್ಕೆ ಬಂದ 3 ಮಕ್ಕಳ ತಂದೆ..!

Share :

11-08-2023

    ಸೀಮಾ ಹೈದರ್​​, ಅಂಜುಂ ಸ್ಟೋರಿ ಬೆನ್ನಲ್ಲೇ ಮತ್ತೊಂದು ಕೇಸ್​​ ಬಯಲು

    ಯುವತಿಗಾಗಿ ಫಿಜಿ ದೇಶದಿಂದ ಬಂದ ಕಂಪ್ಯೂಟರ್ ಇಂಜಿನಿಯರ್

    ಪೊಲೀಸ್​ ತನಿಖೆ ವೇಳೆ ತಿಳಿದು ಬಂತು ವ್ಯಕ್ತಿಯ ಅಸಲಿ ಸತ್ಯಾಂಶ

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಯುವಕ, ಯುವತಿಯರು ಕೆಲವೇ ಕ್ಷಣಗಳಲ್ಲಿ ಸ್ನೇಹ ಬೆಳಸಿಕೊಳ್ಳುತ್ತಾರೆ. ದಿನ ಕಳೆದಂತೆ ಆ ಸ್ನೇಹವು ಪ್ರೀತಿಗೆ ತಿರುಗುತ್ತದೆ. ನಂತರ ಪ್ರೀತಿಸುತ್ತಿದ್ದ ವ್ಯಕ್ತಿಯನ್ನು ಹುಡುಕಿಕೊಂಡು ಬೇರೆ ಬೇರೆ ದೇಶಕ್ಕೆ ಪ್ರಯಾಣ ಬೆಳೆಸುವುದು ಸರ್ವೇ ಸಾಮಾನ್ಯವಾಗಿದೆ. ಕೆಲವು ದಿನಗಳ ಹಿಂದೆ ಪಬ್​ಜಿ ಪ್ರಿಯಕರನ ಭೇಟಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್​​, ಪ್ರಿಯತಮನ ನೋಡಲು ಪಾಕಿಸ್ತಾನಕ್ಕೆ ಗುಟ್ಟಾಗಿ ಹೋದ ಭಾರತದ 2 ಮಕ್ಕಳ ತಾಯಿ ಅಂಜು ಸಖತ್​​ ಸುದ್ದಿಯಾಗಿದ್ದರು. ಈಗ ಇಂಥದ್ದೇ ಪ್ರಕರಣವೊಂದು ಮತ್ತೆ ಬೆಳಕಿಗೆ ಬಂದಿದೆ.

ಫಿಜಿ ದೇಶದಿಂದ ಕಂಪ್ಯೂಟರ್ ಇಂಜಿನಿಯರ್ ಸೈಯದ್ ಫಜಲ್ ಎಂಬ ವ್ಯಕ್ತಿಯು ಸೋಷಿಯಲ್​ ಮೀಡಿಯಾದಲ್ಲಿ ಓರ್ವ ಯುವತಿ ಜೊತೆ ಗೆಳತನ ಮಾಡಿಕೊಂಡಿದ್ದ. ಕೆಲ ದಿನಗಳ ಬಳಿಕ ಅವರಿಬ್ಬರಲ್ಲಿ ಪ್ರೀತಿ ಶುರುವಾಗಿದೆ. ಬಳಿಕ ಗೆಳತಿಯನ್ನು ಮದುವೆಯಾಗಬೇಕೆಂದು ಪಣತೊಟ್ಟು ಫಿಜಿ ದೇಶದಿಂದ,  ಉತ್ತರಪ್ರದೇಶದ ಮೀರತ್‌ಗೆ ಆಗಮಿಸಿದ್ದಾನೆ. ನಂತರ ಹಾಗೋ ಹೀಗೋ ಮಾಡಿ ಹುಡುಗಿಯ ವಿಳಾಸವನ್ನು ಕಂಡು ಹಿಡಿದಿದ್ದಾನೆ. ಬಳಿಕ ಯುವತಿ ಮನೆಯವರ ಜೊತೆ ಪ್ರೀತಿಯ ಬಗ್ಗೆ ಮಾತಾಡಿದ್ದಾನೆ. ಆದರೆ ಈ ವೇಳೆ ಯುವತಿಯರ ಕುಟುಂಬಸ್ಥರು ಮದುವೆಗೆ ನಿರಾಕರಿಸಿದ್ದಾರೆ. ಅದಕ್ಕೆ ಕೋಪಗೊಂಡ ಯುವಕ ಗಲಾಟೆ ಮಾಡಿಕೊಂಡಿದ್ದಾನೆ. ಯುವತಿ ಕುಟುಂಬಸ್ಥರು ಫಜಲ್ ಮೇಲೆ ಹಲ್ಲೆ ನಡೆಸಿ, ದೌರ್ಜನ್ಯದ ಆರೋಪದ ಮೇಲೆ ಪೊಲೀಸ್​ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಆತನ ಪಾಸ್‌ಪೋರ್ಟ್, ವೀಸಾ ಸೇರಿದಂತೆ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಅವರು ಮೀರತ್‌ಗೆ ಅವರ ಪ್ರಯಾಣದ ವಿವರಗಳನ್ನು, ಯುವತಿಯ ಜೊತೆ ಮಾಡಿರೋ ಸಂದೇಶಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಸೈಯದ್ ಫಜಲ್ ಅವರು ಮೊರಾದಾಬಾದ್ ಮೂಲದ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಈಗಾಗಲೇ ಮದುವೆಯಾಗಿ ಕೆಲ ತಿಂಗಳ ಹಿಂದೆ ಪತ್ನಿಯಿಂದ ದೂರವಾಗಿದ್ದಾರೆ. ಸೈಯದ್​ಗೆ ಮೂರು ಮಕ್ಕಳಿದ್ದು ಆತ ತನ್ನ ಮರುಮದುವೆ ಬಗ್ಗೆ ಕಂಪನಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ತಿಳಿಸಿದ್ದನು ಎಂದು ತನಿಖೆ ಮೂಲಕ ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆನ್​ಲೈನ್​ನಲ್ಲಿ ಮೂಡಿತು ಪ್ರೀತಿ: ಯುವತಿಯನ್ನ ಮದುವೆಯಾಗಲು ಫಿಜಿ ದೇಶದಿಂದ ಭಾರತಕ್ಕೆ ಬಂದ 3 ಮಕ್ಕಳ ತಂದೆ..!

https://newsfirstlive.com/wp-content/uploads/2023/08/lover.jpg

Load More