newsfirstkannada.com

WTC Final: ಕಾಂಗರೂಗಳ ಲೆಕ್ಕಾಚಾರ ಉಲ್ಟಾ ಮಾಡಿದ ಭಲೇ ಜೋಡಿ.. ಕ್ರಿಕೆಟ್​ ವಿಶ್ಲೇಷಕರು ಗಪ್​​ಚುಪ್..!

Share :

10-06-2023

    ಫಾಲೋ ಆನ್​ ಭೀತಿಯಲ್ಲಿ ಆಸರೆಯಾದ ಹೀರೋಸ್​

    ಟೀಮ್ ಇಂಡಿಯಾದ ರೂಟ್ ಬದಲಿಸಿದ ರಹಾನೆ

    ಜಡ್ಡು ಮ್ಯಾಜಿಕಲ್ ಇನ್ನಿಂಗ್ಸ್​ನಿಂದ ಆಪತ್ತು ಪಾರು

WTC​ ಫೈನಲ್​​​​ನಲ್ಲಿ ಟೀಮ್ ಇಂಡಿಯಾದ ಖೇಲ್​ ಖತಂ ಆಯ್ತು ಅಂತಾನೇ ಎಲ್ಲರೂ ಊಹಿಸಿದ್ದರು. ಇನ್ನೇನಿದ್ದರೂ ಫಾಲೋ ಆನ್​​​​ಗೆ ಸಿಲುಕಿ ಆಸಿಸ್​​ ಬಲೆಯಲ್ಲಿ ಒದ್ದಾಡಬೇಕು ಅಂತಾನೇ ಪಂಡಿತರು ವಿಶ್ಲೇಷಿಸಿದರು. ಆದ್ರೆ ಟೀಮ್ ಇಂಡಿಯಾದ ಈ ಮೂವರು ಆಟಗಾರರು, ಕ್ರಿಕೆಟ್​ ವಿಶ್ಲೇಷಕರ ಭವಿಷ್ಯವನ್ನಷ್ಟೇ ಅಲ್ಲ. ಕಾಂಗರೂಗಳ ಲೆಕ್ಕಚಾರವನ್ನೂ ಉಲ್ಟಾ ಮಾಡಿ ಅಪದ್ಭಾಂದವರದರು.

ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​​ ಫೈನಲ್​ನಲ್ಲಿ ಮದಗಜಗಳ ಹೋರಾಟ ನಡೆಯುತ್ತಿದೆ. ಏಟಿಗೆ ಏಟು ಎಂಬಂತೆ ತಿರುಗೇಟು, ತಂತ್ರಗಳಿಗೆ ಪ್ರತಿತಂತ್ರಗಳನ್ನ ಹೆಣೆಯುತ್ತ ನಾಲ್ಕನೇ ದಿನದಾಟಕ್ಕೆ ಹೆಜ್ಜೆ ಇಟ್ಟಿದೆ. ಆದ್ರೆ ಎಲ್ಲವೂ ಆಸ್ಟ್ರೇಲಿಯನ್ನರ ಲೆಕ್ಕಚಾರದಂತೆಯೇ ನಡೆದಿದ್ರೆ ಟೀಮ್ ಇಂಡಿಯಾ ಫಾಲೋ ಆನ್​ಗೆ ಸಿಲುಕಿ ಇಂದೇ ಸೋಲಿನ ಮುಖಭಂಗ ಅನುಭವಿಸಬೇಕಿತ್ತು.

ಇದೆಲ್ಲವನ್ನೂ ದೂರ ಮಾಡಿದ್ದು ಈ ತ್ರಿಮೂರ್ತಿ ಅಪದ್ಬಾಂದವರು. ಅಂದ್ಹಾಗೆ ಆ ಅಪದ್ಭಾಂದವರು ಬೇಱರು ಅಲ್ಲ. ತಾಳ್ಮೆಯ ಸಾಕಾರಮೂರ್ತಿ ಅಜಿಂಕ್ಯಾ ರಹಾನೆ. ಆಲ್​ರೌಂಡರ್ ಜಡೇಜಾ. ಲಾರ್ಡ್​ ಶಾರ್ದೂಲ್​. ಮೊದಲ ಇನ್ನಿಂಗ್ಸ್​ನಲ್ಲಿ ಸ್ಮಿತ್-ಹೆಡ್​​ರ ಹೆಡ್ಡೇಕ್ ಬ್ಯಾಟಿಂಗ್ ಪರಿಣಾಮ ಆಸ್ಟ್ರೇಲಿಯಾ, 469 ರನ್​ಗಳ ಬೃಹತ್ ಮೊತ್ತ ಪೇರಿಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಮೊದಲ ಇನ್ನಿಂಗ್ಸ್​ ಆರಂಭಿಸಿದ್ದ ಟೀಮ್ ಇಂಡಿಯಾ, ಅಗ್ರಗಣ್ಯ ಆಟಗಾರರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕೇವಲ 71 ರನ್​​ಗೆ ರೋಹಿತ್, ಶುಭಮನ್​ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್​ ಕೊಹ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಟೀಮ್ ಇಂಡಿಯಾಗೆ ಆಕ್ಷರಶಃ ಬೆನ್ನಲುವಾಗಿ ನಿಂತಿದ್ದೇ ಈ ತ್ರಿಮೂರ್ತಿಗಳು.

ಟೀಮ್ ಇಂಡಿಯಾ ರೂಟ್ ಬದಲಿಸಿದ ರಹಾನೆ
ನಿಜಕ್ಕೂ ಫಾಲೋ ಆನ್​ಗೆ ಸಿಲುಕಬೇಕಿದ್ದ ಟೀಮ್ ಇಂಡಿಯಾದ ರೂಟ್​ ಬದಲಿಸಿದ್ದು ಕಮ್​ಬ್ಯಾಕ್ ಸ್ಟಾರ್​ ರಹಾನೆ, ಬರೋಬ್ಬರಿ 18 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್​​​ನ ಅಂಗಳಕ್ಕಿಳಿದ ಈ ಮುಂಬೈಕರ್, ತಾಳ್ಮೆಯ ಆಟವಾಡಿದರು. ಅದರಲ್ಲೂ ಪ್ರತಿ ಎಸೆತವನ್ನ ಎಳೆದು ತೂಗಿ ಎದುರಿಸಿದ ಅಜಿಂಕ್ಯಾ, 5ನೇ ವಿಕೆಟ್​ಗೆ ಜಡೇಜಾ ಜೊತೆ ಸೇರಿ 71 ರನ್​ಗಳ ಜೊತೆಯಾಟವಾಡಿದ್ದರು.

ಜಡೇಜಾ ವಿಕೆಟ್ ಪತನದ ಬಳಿಕವೂ ಆಸ್ಟ್ರೇಲಿಯನ್ನರ ದಾಳಿಗೆ ಬಗ್ಗದ ರಹಾನೆ, 7ನೇ ವಿಕೆಟ್​ಗೆ ಶಾರ್ದೂಲ್ ಜೊತೆ ಸೇರಿ 109 ರನ್​​ಗಳ ಅಮೋಘ ಇನ್ನಿಂಗ್ಸ್​ ಕಟ್ಟಿದರು. ಇದು ನಿಜಕ್ಕೂ ಟೀಮ್ ಇಂಡಿಯಾದ ಹಣೆಬರಹವನ್ನೇ ಬದಲಿಸಿದ ಜೊತೆಯಾಟವಾಗಿತ್ತು. ಬರೋಬ್ಬರಿ 254 ನಿಮಿಷಗಳ ಕಾಲ ಕ್ರೀಸ್​ನಲ್ಲಿ ನೆಲೆಯೂರಿದ್ದ ರಹಾನೆ, 129 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್​ ಒಳಗೊಂಡ 89 ರನ್​ ಗಳಿಸಿ ಶತಕದ ಹೊಸ್ತಿಲಲ್ಲಿ ಔಟಾದರೂ, ಇದರೊಂದಿಗೆ ಟೆಸ್ಟ್​ನಲ್ಲಿ 5 ಸಾವಿರ ರನ್ ಪೂರೈಸಿದ ರಹಾನೆ, ಐಸಿಸಿ ಟೆಸ್ಟ್ ಚಾಂಪಿಯನ್​ ಶಿಪ್​​ ಫೈನಲ್​ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ ಮೊದಲಿಗರೆಂಬ ಹೆಗ್ಗಳಿಕೆ ಪಾತ್ರರಾದರು.

ಆಪತ್ತಿನಿಂದ ಪಾರು ಮಾಡ್ತು ಜಡ್ಡು ಮ್ಯಾಜಿಕಲ್ ಇನ್ನಿಂಗ್ಸ್​​​​​​​​​​​​​​​​​​​​​​​​​​​​..!
71 ರನ್​ಗೆ ಟಾಪ್​ 4 ಬ್ಯಾಟರ್​ಗಳನ್ನು ಕಳೆದುಕೊಂಡಿದ್ದ ಟೀಮ್ ಇಂಡಿಯಾಗೆ ಆಕ್ಷರಶಃ ತಂಡಕ್ಕೆ ಬೂಸ್ಟ್ ನೀಡಿದ್ದೇ ಜಡೇಜಾರ ಮ್ಯಾಜಿಕಲ್ ಇನ್ನಿಂಗ್ಸ್. ಜಡೇಜಾ ಸಿಡಿಸಿದ್ದು ಜಸ್ಟ್​ 48 ರನ್​ಗಳೇ ಆಗಿದ್ದರೂ ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಿದ ಪರಿ ಎದುರಾಳಿ ಆಸ್ಟ್ರೇಲಿಯಾದ ನಿದ್ದೆ ಗೆಡಿಸಿದ್ದು ಸುಳ್ಳಲ್ಲ.

ಸಂಕಷ್ಟದಲ್ಲಿದ್ದ ಭಾರತಕ್ಕೆ ದೇವರಾದ ಶಾರ್ದೂಲ್
ಜಡೇಜಾ ವಿಕೆಟ್ ಪತನದ ಬಳಿಕ ಭರತ್, ಆಸರೆಯಾಗೋ ನಿರೀಕ್ಷೆ ಹುಸಿಯಾಗಿತ್ತು. ಅಷ್ಟೇ ಅಲ್ಲ, ಟೀಮ್ ಇಂಡಿಯಾ ಫಾಲೋ ಆನ್​ ಸುಳಿಗೆ ಸಿಲುಕುವ ಆತಂಕದಲ್ಲಿತ್ತು. ಆದ್ರೆ ಈ ವೇಳೆ ರಹಾನೆ ಜೊತೆಗೂಡಿ ಸಂಕಷ್ಟದಿಂದ ಪಾರು ಮಾಡಿದ್ದೇ ಶಾರ್ದೂಲ್ ಠಾಕೂರ್. 156 ನಿಮಿಷಗಳ ಕಾಲ ಕ್ರೀಸ್​ನಲ್ಲಿ ನೆಲನಿಂತ ಶಾರ್ದೂಲ್ ಠಾಕೂರ್, ಎದುರಿಸಿದ 109 ಎಸೆತಗಳಿಂದ 51 ರನ್​​ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ಅಕಸ್ಮಾತ್ ಮಹತ್ವದ ಘಟ್ಟದಲ್ಲಿ ಶಾರ್ದೂಲ್ ಆಸರೆಯಾಗಿರದಿದ್ರೆ, ಟೀಮ್ ಇಂಡಿಯಾ ಫಾಲೋ ಆನ್​ ಸುಳಿಗೆ ಸಿಲುಕಿ ಸೋಲಿನ ಅಂಚಿನಲ್ಲಿ ನರಳಾಡುತ್ತಿದ್ದಂತು ಸತ್ಯ.

ಒಟ್ನಲ್ಲಿ, ಆಸಿಸ್​ನ ಬೆಂಕಿ ದಾಳಿಯ ಎದುರು ನೆಲೆಕಚ್ಚಿ ಆಡಿದ ಈ ಮೂವರು, ಫಸ್ಟ್ ಇನ್ನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಪಾಲಿಗೆ ಆಪದ್ಭಾಂದವರಾಗಿದ್ದಂತೂ ಸತ್ಯ. ಆದ್ರೀಗ ಗೆಲುವು, ಸೋಲಿನ ಭವಿಷ್ಯ ಟೀಮ್ ಇಂಡಿಯಾ ಕೈಯಲ್ಲೇ ಇದ್ದು, ಗೆಲುವಿನ ಎಡೆಗೆ ಕರೆದೊಯ್ಯುತ್ತಾರಾ ಇಲ್ವಾ ಕಾದುನೋಡಬೇಕಷ್ಟೇ.

ವಿಶೇಷ ಸೂಚನೆ: ಕ್ರಿಕೆಟ್​ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ‘ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

WTC Final: ಕಾಂಗರೂಗಳ ಲೆಕ್ಕಾಚಾರ ಉಲ್ಟಾ ಮಾಡಿದ ಭಲೇ ಜೋಡಿ.. ಕ್ರಿಕೆಟ್​ ವಿಶ್ಲೇಷಕರು ಗಪ್​​ಚುಪ್..!

https://newsfirstlive.com/wp-content/uploads/2023/06/RAHANE-1-1.jpg

Load More