ಕಹಿ ಘಟನೆಯನ್ನು ನೆನೆದ ಬಾಲಿವುಡ್ ಹಿರಿಯ ನಟಿ
'ಆ ಡೈರೆಕ್ಟರ್ ನನ್ನ ಸೀರೆ ಪಿನ್ ತೆಗೆಯಲು ಹೇಳಿದ್ರು'
ಹಿರಿಯ ನಟಿ ಹೇಮಾ ಮಾಲಿನಿ ಬಿಚ್ಚಿಟ್ಟ ಕರಾಳ ಸತ್ಯ
ಬಾಲಿವುಡ್ ಹಿರಿಯ ನಟಿ-ರಾಜಕಾರಣಿ ಹೇಮಾ ಮಾಲಿನಿ ಅವರು ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಹೇಮಾ ಮಾಲಿನಿ ಅವರು ಆಗಾಗ ತಮ್ಮ ಫ್ಯಾನ್ಸ್ ಬಳಿ ತಮ್ಮ ಜೀವನದ ಆಗು ಹೋಗುಗಳ ಬಗ್ಗೆ ಹಂಚಿಕೊಳ್ಳುತ್ತಾ ಇರುತ್ತಾರೆ. ಇದೀಗ ತಮ್ಮ ಜೀವನದಲ್ಲಾದ ಕಹಿ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಾತಾಡಿದ ಹೇಮಾ ಮಾಲಿನಿ ಅವರು, ಯಾವುದೇ ಹೆಸರನ್ನು ಪ್ರಸ್ತಾಪಿಸದೇ ನಿರ್ದೇಶಕರೊಬ್ಬರು ಶೂಟಿಂಗ್ ವೇಳೆ ನನ್ನ ಸೀರೆಯ ಪಿನ್ ತೆಗೆದುಹಾಕಲು ಕೇಳಿದರು. ಆಗ ನಾನು ಸೀರೆಯ ಪಿನ್ನು ತೆಗೆದರೆ ಜಾರುತ್ತದೆ ಎಂದು ಹೇಳಿದ್ದೆ. ಅದಕ್ಕವರು ಸೀರೆ ಜಾರುವುದೇ ನಮಗೆ ಬೇಕು ಎಂದರು. ಅವರಿಗೆ 74 ವರ್ಷ ವಯಸ್ಸು. ಆ ಡೈರೆಕ್ಟರ್ ಬೇರೆಯದ್ದೇ ರೀತಿಯ ದೃಶ್ಯವನ್ನು ಚಿತ್ರೀಕರಿಸಲು ಬಯಸಿದ್ದರು ಎಂದರು ಹೇಮಾ ಮಾಲಿನಿ.
ನಟಿ ಹೇಮಾ ಮಾಲಿನಿ ಅವರು 1960ರ ದಶಕದಲ್ಲಿ ತಮ್ಮ ನಟನೆಗೆ ಪಾದಾರ್ಪಣೆ ಮಾಡಿದರು. ಐದು ದಶಕಗಳ ಕಾಲದ ಅವರ ವೃತ್ತಿ ಜೀವನದಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಳಿಕ 2004ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು. ಸದ್ಯ ಮಥುರಾ ಕ್ಷೇತ್ರದಿಂದ ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ