ವಿಶ್ವವಿಖ್ಯಾತ 414ನೇ ಜಂಬೂ ಸವಾರಿಗೆ ಕ್ಷಣಗಣನೆ ಆರಂಭ
ಚಾಮುಂಡಿ ಬೆಟ್ಟದಿಂದ ಅರಮನೆಯತ್ತ ನಾಡದೇವಿಯ ವಿಗ್ರಹ
ಜಂಬೂಸವಾರಿಗೆ ಅಭಿಮನ್ಯು ಟೀಮ್ ಹೇಗೆ ರೆಡಿಯಾಗಿದೆ ಗೊತ್ತಾ?
ಮೈಸೂರು: ವಿಶ್ವವಿಖ್ಯಾತ 414ನೇ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಮಧ್ಯಾಹ್ನ 1:46 ರಿಂದ 02:08 ರೊಳಗೆ ನಂದಿಧ್ವಜ ಪೂಜೆ ನೆರವೇರಲಿದೆ. ಸಂಜೆ ಅದ್ಧೂರಿಯ ಜಂಬೂ ಸವಾರಿ ಕಣ್ತುಂಬಿಕೊಳ್ಳಲು ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಿದ್ದಾರೆ. ಸಾಂಸ್ಕೃತಿ ನಗರಿ ಮೈಸೂರು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಜಂಬೂ ಸವಾರಿಯ ಹಿನ್ನೆಲೆಯಲ್ಲಿ ನಾಡದೇವಿ ಚಾಮುಂಡೇಶ್ವರಿ ಮೂರ್ತಿ ಕೂಡ ಅರಮನೆಗೆ ಬರುತ್ತಿದೆ. ಚಾಮುಂಡಿ ಬೆಟ್ಟದಿಂದ ಅರಮನೆಗೆ ದೇವಿಯ ವಿಗ್ರಹವನ್ನು ತರಲಾಗುತ್ತಿದೆ. ಅರಮನೆಯಲ್ಲಿ ಪೂಜಾಕೈಂಕರ್ಯದ ಬಳಿಕ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ಆಸೀನಳಾಗಿದ್ದಾಳೆ. ಜಂಬೂಸವಾರಿಗೆ ಅರಮನೆ ಅಂಗಳದಲ್ಲಿ ಗಜಪಡೆ ಕೂಡ ರೆಡಿಯಾಗಿದೆ. ಚಿತ್ತಾಕರ್ಷಕವಾಗಿ ಚಿತ್ತಾರಗೊಂಡಿರೋ ಅಭಿಮನ್ಯು ಟೀಮ್ ಅಂಬಾರಿ ಹೊರಲು ಸಜ್ಜಾಗಿವೆ.
5 ಲಕ್ಷ ಮಂದಿ ಆಗಮಿಸುವ ನಿರೀಕ್ಷೆ!
ಈ ಬಾರಿಯ ವಿಶ್ವವಿಖ್ಯಾತ ಜಂಬೂ ಸವಾರಿ ಮೆರವಣಿಗೆ ವೀಕ್ಷಿಸಲು ಸುಮಾರು 5 ಲಕ್ಷ ಮಂದಿ ಆಗಮಿಸುವ ನಿರೀಕ್ಷೆ ಇದೆ. ಅರಮನೆ ಆವರಣದಲ್ಲೇ 30 ಸಾವಿರಕ್ಕೂ ಹೆಚ್ಚು ಮಂದಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಅಂಬಾರಿ ಆನೆಯ ಜೊತೆಗೆ 200 ಮಂದಿ ರಾಜ ವೈಭವದ ಧರಿಸಿನೊಂದಿಗೆ ಸಾಗಲಿರುವುದು ಈ ಬಾರಿಯ ವಿಶೇಷವಾಗಿದೆ. ಗೋಲ್ಡ್ ಕಾರ್ಡ್ ಹೊಂದಿದವರಿಗೆ ಅರಮನೆ ಎದುರಿನಲ್ಲೇ ಕೂರೋ ವ್ಯವಸ್ಥೆ ಮಾಡಲಾಗಿದೆ.
ಜಂಬೂಸವಾರಿ ಮೆರವಣಿಗೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಸ್ತಬ್ಧ ಚಿತ್ರಗಳ ಜೊತೆಗೆ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ 49 ಸ್ತಬ್ಧ ಚಿತ್ರಗಳು ಭಾಗಿಯಾಗುತ್ತಿವೆ. ಈಗಾಗಲೇ ಅರಮನೆ ಆವರಣದಲ್ಲಿ ಸ್ತಬ್ಧ ಚಿತ್ರಗಳು ರೆಡಿಯಾಗಿದ್ದು, ಕಲಾವಿದರು ಸ್ತಬ್ಧ ಚಿತ್ರಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ