newsfirstkannada.com

VIDEO: ಅರಿಶಿನಗುಂಡಿ ಫಾಲ್ಸ್‌ನಲ್ಲಿ ಜಾರಿ ಬಿದ್ದ ಶರತ್‌ಗೆ ಅಂತಿಮ ನಮನ; ಭದ್ರಾವತಿಯಲ್ಲಿ ಕುಟುಂಬಸ್ಥರ ಆಕ್ರಂದನ

Share :

31-07-2023

    ಅರಿಶಿನಗುಂಡಿ ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದಿದ್ದ ಶರತ್

    ಮಗ ಬದುಕಿ ಬರುತ್ತಾನೆ ಎಂದು ಕಾಯುತ್ತಿದ್ದ ಹೆತ್ತವರು

    ಭದ್ರಾವತಿಯ ಸ್ಮಶಾನದಲ್ಲಿಂದು ಶರತ್ ಅಂತ್ಯ ಸಂಸ್ಕಾರ

ಶಿವಮೊಗ್ಗ: ಕೊಲ್ಲೂರಿನ ಅರಿಶಿನಗುಂಡಿ ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದ ಶರತ್ ಮೃತದೇಹ 8 ದಿನಗಳ ಬಳಿಕ ಪತ್ತೆಯಾಗಿದೆ. ಶರತ್ ಮೃತದೇಹವನ್ನ ಇಂದು ಸ್ವಗ್ರಾಮಕ್ಕೆ ತರಲಾಗಿದ್ದು, ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ. ಶರತ್ ಬದುಕಿ ಬರಬಹುದು ಎಂದು ಕಾಯುತ್ತಿದ್ದ ಕುಟುಂಬಸ್ಥರು ದಿಗ್ಭ್ರಾಂತರಾಗಿದ್ದಾರೆ. ಶರತ್ ಅಗಲಿಕೆಗೆ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದು, ಸ್ನೇಹಿತರು ಹಾಗೂ ಗ್ರಾಮಸ್ಥರು ಶರತ್ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಭದ್ರಾವತಿ ಕೆ.ಹೆಚ್.ನಗರದ ಸ್ಮಶಾನದಲ್ಲಿ ಶರತ್ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ‌ ಮಾಡಲಾಗಿದೆ. ತಮಿಳು ಗೌಂಡರ್ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆಸಲಾಗುತ್ತಿದೆ.

ಇದನ್ನೂ ಓದಿ: WATCH: ಅರಿಶಿನಗುಂಡಿಯಲ್ಲಿ ಜಾರಿದ ಶರತ್ ಮೃತದೇಹ ಸಿಕ್ಕಿದ್ಹೇಗೆ?; 7 ದಿನದ ಕಾರ್ಯಾಚರಣೆಯಲ್ಲಿ ಎದುರಾದ ಸವಾಲುಗಳೇನು?

ಶರತ್, ಭದ್ರಾವತಿ ಕೆ.ಹೆಚ್‌ ನಗರದ ನಿವಾಸಿ ಮುನಿಸ್ವಾಮಿ ಮತ್ತು ರಾಧಾ ದಂಪತಿಯ ಮಗ. ಕಳೆದ ಜುಲೈ 23ರಂದು ಶರತ್ ಫಾಲ್ಸ್‌ನಲ್ಲಿ ಜಾರಿ ಬಿದ್ದು‌ ನಾಪತ್ತೆಯಾಗಿದ್ದ. ಶರತ್ ಜಾರಿ ಬಿದ್ದ ವಿಡಿಯೋ ವೈರಲ್ ಆಗಿದ್ದು ಕುಟುಂಬಸ್ಥರಲ್ಲಿ ಆತಂಕ ಹೆಚ್ಚಿಸಿತ್ತು. ನಿರಂತರ 8 ದಿನದ ಶೋಧದ ಬಳಿಕ ನಿನ್ನೆ ಶರತ್ ಅವರ ಮೃತದೇಹ ಪತ್ತೆಯಾಗಿತ್ತು. ಕೊಲ್ಲೂರು ಪೊಲೀಸರು, ಅಗ್ನಿಶಾಮಕ ದಳ, ಸ್ಥಳೀಯರ‌ ಕಾರ್ಯಾಚರಣೆ ಬಳಿಕ ಶರತ್ ಮೃತದೇಹ ಪತ್ತೆಯಾಗಿತ್ತು. ಇಂದು ಶರತ್ ಅಂತಿಮ ಸಂಸ್ಕಾರ ನಡೆಯುತ್ತಿದ್ದು, ಕುಟುಂಬಸ್ಥರು, ಸ್ನೇಹಿತರು ತೀವ್ರ ಕಂಬನಿ ಮಿಡಿಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ಅರಿಶಿನಗುಂಡಿ ಫಾಲ್ಸ್‌ನಲ್ಲಿ ಜಾರಿ ಬಿದ್ದ ಶರತ್‌ಗೆ ಅಂತಿಮ ನಮನ; ಭದ್ರಾವತಿಯಲ್ಲಿ ಕುಟುಂಬಸ್ಥರ ಆಕ್ರಂದನ

https://newsfirstlive.com/wp-content/uploads/2023/07/Sharath-Bhadravati.jpg

Load More