newsfirstkannada.com

ಪ್ರಯಾಣಿಕರೇ ಹುಷಾರ್.. ಸಿಲಿಕಾನ್ ಸಿಟಿಯಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳು ಸೀಜ್‌.. ಸೀಜ್‌.. ಸೀಜ್‌!

Share :

Published July 6, 2024 at 6:10am

  ನಗರದ ಮೂಲೆ ಮೂಲೆಯಲ್ಲಿ RTO ಮೆಗಾ ಕಾರ್ಯಾಚರಣೆ

  ಆಟೋ, ಕ್ಯಾಬ್ ಚಾಲಕರ ಮುತ್ತಿಗೆ ಬೆನ್ನಲ್ಲೇ ಅಧಿಕಾರಿಗಳು ಅಲರ್ಟ್

  ಬೆಂಗಳೂರಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಸಂಚಾರಕ್ಕೆ ಬಿತ್ತು ಬ್ರೇಕ್‌!

ಬೆಂಗಳೂರು ಶಾಂತಿನಗರದ RTO ಕಚೇರಿ ಮುಂದೆ ಹೊತ್ತಿಕೊಂಡ ಖಾಸಗಿ ಸಾರಿಗೆ ಸಂಘಟನೆಗಳ ಆಕ್ರೋಶದ ಬೆಂಕಿಗೆ ಎಲೆಕ್ಟ್ರಿಕ್ ಬೈಕ್ ಸವಾರರು ಬಿದ್ದಿದ್ದಾರೆ. ಆಟೋ, ಕ್ಯಾಬ್ ಚಾಲಕರ ಮುತ್ತಿಗೆ ಬೆನ್ನಲ್ಲೇ ಅಲರ್ಟ್ ಆದ RTO ಅಧಿಕಾರಿಗಳು ನಗರದ ಮೂಲೆ ಮೂಲೆಯಲ್ಲಿ ಮೆಗಾ ಕಾರ್ಯಾಚರಣೆ ಕೈಗೊಂಡು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ವಿರುದ್ಧ ಸಮರ ಸಾರಿದ್ದಾರೆ.

ನುಡಿದಂತೆ ಆರ್.ಟಿ ಓ ಅಧಿಕಾರಿಗಳು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಸಂಚಾರಕ್ಕೆ ನಗರದಲ್ಲಿ ಬ್ರೇಕ್​ ಹಾಕ್ತಿದ್ದಾರೆ. 2024ರ ಮಾರ್ಚ್ 6ರಂದೇ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಸಂಚಾರಕ್ಕೆ ಸರ್ಕಾರ ನಿಷೇಧ ಹೇರಿತ್ತು. ಆದ್ರೂ ಅನಧಿಕೃತ ಓಡಾಟಕ್ಕೆ ಬ್ರೇಕ್​ ಬಿದ್ದಿರಲಿಲ್ಲ.

ಸಾರಿಗೆ ಸಂಘಟನೆಗಳಿಗೆ ಕೊಟ್ಟ ಭರವಸೆಯಂತೆ ಬೆಂಗಳೂರು ಕೇಂದ್ರ, ಪಶ್ಚಿಮ, ಉತ್ತರ, ದಕ್ಷಿಣ ಸೇರಿದಂತೆ ಒಟ್ಟು ನಗರದ ಹನ್ನೊಂದು ಭಾಗದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದ 80ಕ್ಕೂ ಅಧಿಕ ವಾಹನಗಳನ್ನ ಆರ್.ಟಿ ಒ ಅಧಿಕಾರಿಗಳು, ಸೀಜ್ ಮಾಡಿ ಶಾಕ್ ಕೊಟ್ಟಿದ್ದಾರೆ.

ಬೆಳಗ್ಗೆ 7.30ರಿಂದಲೇ ಬೆಂಗಳೂರು ನಗರದ ಎಲ್ಲಾ 11 ಕಚೇರಿಯಲ್ಲೂ ಕಾರ್ಯಾಚರಣೆ ಹಮ್ಮಿಕೊಂಡಿದ್ದೇವೆ. ಅದರಂತೆ ಸುಮಾರು 85 ಬೈಕ್‌ ಸೀಜ್‌ ಮಾಡಿದ್ದೇವೆ. ಬೇರೆ ಪ್ರಕರಣಗಳಿಗೆ ಕೇಸ್ ದಾಖಲು ಮಾಡಿದ್ದೇವೆ. ಈ ಕಾರ್ಯಾಚರಣೆ ಮುಂದುವರಿಯುತ್ತೆ.

ಎಂ.ಶೋಭಾ, ಸಾರಿಗೆ ಇಲಾಖೆ ಜಂಟಿ ಆಯುಕ್ತೆ

ಗಾಡಿಗಳು ಸೀಜ್ ಆಗ್ತಾಯಿದ್ದಂತೆ ವಿಚಲಿತರಾದ ಕೆಲ ಸವಾರರು, ಕ್ಯಾಮೆರಾ ಮುಂದೆ ತಮ್ಮ ಅಳಲು ತೋಡ್ಕೊಂಡ್ಡಿದ್ದಾರೆ.

ಪೋರ್ಟಲ್‌ ಆ್ಯಪ್‌ನಲ್ಲಿ ಬುಕ್‌ ಮಾಡಿ ಇಲ್ಲಿಗೆ ಕರೆಸಿದ್ದಾರೆ. ಈಗ ಹಿಡಿದು ಫೈನ್ ಹಾಕುತ್ತಿದ್ದಾರೆ. ವಾರ್ಡ್‌ನಲ್ಲಿ ಫೈನ್ ಹಣವನ್ನು ಕಟ್ಟಿ ಗಾಡಿ ತೆಗೆದುಕೊಂಡಿ ಹೋಗಿ ಅಂತ ಹೇಳಿದ್ದಾರೆ.
ಮುಸ್ತಫಾ, ಸವಾರ

ನುಡಿದಂತೆ ನಡೆದ ಆರ್.ಟಿ ಓ ಅಧಿಕಾರಿಗಳು, ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ. ಆದರೆ ಈ ಕಾರ್ಯಾಚರಣೆಯಲ್ಲಿ ಅಮಾಯಕರಿಗೆ ಸಮಸ್ಯೆಯಾಗದಿರಲಿ ಅನ್ನೋದೇ ಎಲ್ಲರ ಆಶಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಯಾಣಿಕರೇ ಹುಷಾರ್.. ಸಿಲಿಕಾನ್ ಸಿಟಿಯಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳು ಸೀಜ್‌.. ಸೀಜ್‌.. ಸೀಜ್‌!

https://newsfirstlive.com/wp-content/uploads/2024/07/Bangalore-Bike-taxi.jpg

Load More