5 ದಿನದ ಹಿಂದೆ ಮೊದಲ ಬಾರಿ ಕಾಣಿಸಿಕೊಂಡಿದ್ದ ಚಿರತೆಯಿಂದ ಭಯ
ಚಾಲಾಕಿ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನ್ಗೂ ಬೀಳದೆ ಎಸ್ಕೇಪ್
ಸಿಬ್ಬಂದಿ ಹಿಡಿಯೋಕೆ ಹೋದ್ರೆ ಕಿಲಾಡಿ ಚಿರತೆ ಮಂಗ ಮಾಯವಾಗುತ್ತಿತ್ತು
ಬೆಂಗಳೂರು: ಕೂಡ್ಲು ಗೇಟ್ ಬಳಿಯ ಕೃಷ್ಣಾ ರೆಡ್ಡಿ ಕೈಗಾರಿಕಾ ಪ್ರದೇಶದಲ್ಲಿ ಅಡಗಿದ್ದ ಚಿರತೆ ಕೊನೆಗೂ ಸೆರೆಯಾಗಿದೆ. ನಿರಂತರ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗೆ ಅರವಳಿಕೆ ಮದ್ದು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಜ್ಞೆ ಕಳೆದುಕೊಂಡ ಚಿರತೆಯನ್ನು ಸದ್ಯ ಬನ್ನೇರುಘಟ್ಟ ಅರಣ್ಯಪ್ರದೇಶಕ್ಕೆ ಶಿಫ್ಟ್ ಮಾಡಲಾಗಿದೆ.
ಕಳೆದ ಮೂರು ದಿನಗಳಿಂದ ಬೊಮ್ಮನಹಳ್ಳಿ ಬಳಿಯ ಕೃಷ್ಣಾ ರೆಡ್ಡಿ ಇಂಡಸ್ಟ್ರಿಯಲ್ ಲೇಔಟ್ನಲ್ಲಿ ಕಾಣಿಸಿಕೊಂಡ ಚಿರತೆ ಸ್ಥಳೀಯರ ನಿದ್ದೆ ಕೆಡಿಸಿತ್ತು. ಚಿರತೆಯನ್ನ ಹಿಡಿಯೋಕೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹರಸಾಹಸ ಪಡಬೇಕಾಯಿತು.
5 ದಿನದ ಹಿಂದೆ ಮೊದಲ ಬಾರಿ ಕಾಣಿಸಿಕೊಂಡಿದ್ದ ಚಿರತೆ ಅಕ್ಷರಶಃ ಆತಂಕ ಸೃಷ್ಟಿಸಿತ್ತು. ಚಾಲಾಕಿ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನ್ಗೂ ಬೀಳದೆ ಎಸ್ಕೇಪ್ ಆಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳ ಜೊತೆಗಂತೂ ಕಣ್ಣಾಮುಚ್ಚಾಲೆ ಆಟವನ್ನೇ ಆಡ್ತಿತ್ತು. ಪಾಳು ಬಿದ್ದ ಕಟ್ಟಡ, ಪೊದೆಯಲ್ಲಿ ಅವಿತಿದ್ದ ಚಿರತೆ ಸ್ಥಳೀಯರಿಗೆ ಭಯ ಸೃಷ್ಟಿಸಿತ್ತು. ಅಪಾರ್ಟ್‌ಮೆಂಟ್‌ನಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾದ ಮೇಲೆ ಸ್ಥಳೀಯ ನಿವಾಸಿಗಳು ದೊಡ್ಡೆ ಹಿಡಿದುಕೊಂಡು ಓಡಾಡುತ್ತಿದ್ದರು.
ಎಲ್ಲೋಯ್ತಪ್ಪ ಈ ಚಿರತೆ ಅಂತ ಅಧಿಕಾರಿಗಳು ಹುಡುಕಿ ಹುಡುಕಿ ಸುಸ್ತಾಗಿ ಕಾರ್ಯಾಚರಣೆ ನಿಲ್ಲಿಸಿದ್ರೆ ಥಟ್ ಅಂತ ಮತ್ತೆ ಪ್ರತ್ಯಕ್ಷವಾಗುತ್ತಿತ್ತು. ಅರೆ ಮತ್ತೆ ಬಂತು ಚಿರತೆ ಅಂತ ಹಿಡಿಯೋಕೆ ಇವ್ರು ಹೋದ್ರೆ ಕಿಲಾಡಿ ಚಿರತೆ ಮಂಗ ಮಾಯವಾಗುತ್ತಿತ್ತು.
ಇಂದು ಬೆಳಗ್ಗೆ ಚಿರತೆ ಸೆರೆಗಾಗಿ ಅರಿವಳಿಕೆ ಮದ್ದು ನೀಡಲು ಹೋಗಿದ್ದ ವೈದ್ಯ ಡಾ. ಕಿರಣ್ ಹಾಗೇ ಓರ್ವ ಟಾಸ್ಕ್ ಫೋರ್ಸ್ ಸಿಬ್ಬಂದಿಯ ಮೇಲೂ ಅಟ್ಯಾಕ್ ಮಾಡಿತ್ತು. ಆದ್ರೂ ಎರಡು ಬಾರಿ ಅರಿವಳಿಕೆ ಮದ್ದು ನೀಡುವಲ್ಲಿ ತಂಡ ಯಶಸ್ವಿಯಾಗಿದೆ. ಆದ್ರೆ ಅರಿವಳಿಕೆ ನೀಡುತ್ತಿದ್ದಂತೆ, ಚಿರತೆ ಇದ್ದ ಸ್ಥಳದಿಂದ ಕಣ್ಮರೆ ಆಗಿದ್ದು, ಅದಕ್ಕಾಗಿ ಮತ್ತೆ ಹುಡುಕಾಟ ನಡೆಸಲಾಗಿತ್ತು.
ಬೇರೆ ಬೇರೆ ನಾಲ್ಕು ವಲಯಗಳ ತಂಡಗಳು ಚಿರತೆ ಸೆರೆ ಕಾರ್ಯಾಚರಣೆಗೆ ಆಗಮಿಸಿದ್ದು, ಚಿರತೆಯನ್ನ ಹಿಡಿಯೋಕೆ ಶತ ಪ್ರಯತ್ನ ಮಾಡಿದ್ದು ಕೊನೆಗೂ ಯಶಸ್ವಿಯಾಗಿದೆ. ಸೆರೆಯಾದ ಚಿರತೆಯನ್ನ ಸುರಕ್ಷಿತವಾಗಿ ಬನ್ನೆರುಘಟ್ಟ ಅರಣ್ಯ ವಲಯಕ್ಕೆ ತೆಗೆದುಕೊಂಡು ಹೋಗಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ