15 ಕೆಜಿ ಟೊಮ್ಯಾಟೋ ಬಾಕ್ಸ್ ರೇಟ್ ಬರೋಬ್ಬರಿ 2,200 ರೂಪಾಯಿ
ಮತ್ತಷ್ಟು ಬೆಲೆ ಏರಿಕೆಯಾಗೋ ಹಿನ್ನೆಲೆ ಮಧ್ಯಪ್ರವೇಶಿಸಿದ ಕೇಂದ್ರ ಸರ್ಕಾರ
ರೈತರು ಫುಲ್ ಖುಷ್, ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್
ದೇಶಾದ್ಯಂತ ಟೊಮ್ಯಾಟೋಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಪ್ರತಿ ಕೆಜಿಗೆ 100, 150, 200 ರೂಪಾಯಿ ದಾಟಿರೋ ಟೊಮ್ಯಾಟೋ ಬೆಲೆ ದಿನ ಕಳೆದಂತೆ ಗಗನಕ್ಕೇರಿದೆ. ಇದೀಗ ಟೊಮ್ಯಾಟೋ ಬೆಲೆ ಏರಿಕೆಯಿಂದ ರೈತರು ಫುಲ್ ಖುಷಿಯಲ್ಲಿದ್ದಾರೆ. ಅಷ್ಟು ಮಾತ್ರವಲ್ಲದೇ ಟೊಮ್ಯಾಟೋ ಬೆಳೆಯುವ ರೈತರಂತೂ ಮಾರುಕಟ್ಟೆಯಲ್ಲಿ ಬೀಡುಬಿಟ್ಟಿದ್ದಾರೆ. ಹೀಗೆ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆಜಿ ಟೊಮ್ಯಾಟೋ ಬಾಕ್ಸ್‌ಗೆ 2,200 ರೂಪಾಯಿಗೆ ಮಾರಾಟವಾಗಿದೆ. ಇದರಿಂದ ರೈತರಲ್ಲಿ ಸಂತಸ ದುಪ್ಪಟ್ಟಾಗಿದೆ.
ಇನ್ನು, ನಿನ್ನೆಗಿಂತ ಇಂದು ಟೊಮ್ಯಾಟೋ ದರದಲ್ಲಿ ಏರಿಳಿತ ಕಂಡು ಬಂದಿದೆ. 15 ಕೆಜಿ ಟೊಮ್ಯಾಟೋ ಬಾಕ್ಸ್ 1800 ರೂಪಾಯಿಗಳಿಗೆ ಮಾರಾಟವಾಗಿದೆ. ಟೊಮ್ಯಾಟೋಗೆ ವೈರಸ್ ರೋಗ ಬಾಧೆಯಿಂದಲೂ ಟೊಮ್ಯಾಟೋ ಬೇಡಿಕೆ ಹೆಚ್ಚಾಗಿದೆ. ರಾಜ್ಯದಲ್ಲಿ ಅಲ್ಲದೆ ದೇಶದಲ್ಲಿಯೂ ಕೂಡ ಟೊಮ್ಯಾಟೋ ಬೆಲೆ ಏರಿಕೆ ಕಂಡಿದೆ. ಹೀಗಾಗಿ ಟೊಮ್ಯಾಟೋ ಏರಿಕೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ರೈತರಿಂದ ಟೊಮ್ಯಾಟೋ ಖರೀದಿಗೆ ನಾಫೆಡ್, NCCF ಗೆ ಕೇಂದ್ರದ ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಸೂಚನೆ ನೀಡಿವೆ.
ಆಂಧ್ರಪ್ರದೇಶ, ಕರ್ನಾಟಕ , ಮಹಾರಾಷ್ಟ್ರ ರೈತರಿಂದ ಖರೀದಿಗೆ ಸೂಚನೆ ನೀಡಲಾಗಿದೆ. ಇದೇ ಶುಕ್ರವಾರ ರಾಷ್ಟ್ರ ರಾಜಧಾನಿ ದೆಹಲಿ ವಲಯದಲ್ಲಿ ಕಡಿಮೆ ಬೆಲೆಗೆ ಟೊಮ್ಯಾಟೋ ಸಿಗಲಿದ್ದು, ದೇಶದಲ್ಲಿ ಟೊಮ್ಯಾಟೋ ಬೆಲೆ ಹೆಚ್ಚು ಇರುವ ಭಾಗದಲ್ಲಿ ಕಡಿಮೆ ಬೆಲೆಗೆ ಕೇಂದ್ರ ಸರ್ಕಾರದಿಂದ ಮಾರಾಟ ಮಾಡಲಾಗುವುದು. ಸದ್ಯ ದೇಶದ ಕೆಲವು ಭಾಗಗಳಲ್ಲಿ ಪ್ರತಿ ಕೆಜಿ ಟೊಮ್ಯಾಟೋ ಬೆಲೆಗೆ 160-200 ರೂಪಾಯಿಗೆ ಏರಿಕೆ ಕಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ