newsfirstkannada.com

ಕೊನೆಗೂ ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್ ಮದುವೆ ಫಿಕ್ಸ್​; ಭಾವಿ ಸೊಸೆ ಬಗ್ಗೆ ಗುಟ್ಟು ಬಿಚ್ಚಿಟ್ಟ ಅತ್ತೆ

Share :

Published July 2, 2024 at 7:47pm

Update July 2, 2024 at 9:27pm

    ಕೊನೆಗೂ ನಿಜವಾಗಿ ಬಿಡ್ತು ಸ್ಟಾರ್ ನಿರ್ದೇಶಕ ತರುಣ್ ಸುಧೀರ್ ಮದುವೆ ಸುದ್ದಿ

    ಖ್ಯಾತ ನಟಿಯನ್ನು ವಿವಾಹವಾಗಲಿದ್ದಾರೆ ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್

    ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ನಟ ತರುಣ್ ಸುಧೀರ್, ವಧು ಯಾರು?

ಇತ್ತೀಚೆಗೆಷ್ಟೇ ಸಾಮಾಜಿಕ ಜಾಲತಾಣದಲ್ಲಿ ರಾಬರ್ಟ್ ಕಾಟೇರ ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರಂತೆ. ಅದು ಕೂಡ  ರಾಬರ್ಟ್ ಸಿನಿಮಾ ನಟಿ ಸೋನಾಲ್ ಮಂಥೆರೊ ಅವರ ಜೊತೆ ಅಂತಾ ಗುಸು ಗುಸು ಮಾತುಗಳು ಸಿಕ್ಕಾಪಟ್ಟೆ ವೈರಲ್​ ಆಗಿತ್ತು.

ಇದನ್ನೂ ಓದಿ: ನಟಿ ಸೋನಾಲ್ ಮದುವೆ ಆಗ್ತಾರಾ ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್; ಇದು ಎಷ್ಟು ನಿಜ?

ಇದೀಗ ತರುಣ್ ಸುಧೀರ್ ಹಾಗೂ ಸೋನಾಲ್ ಮಂಥೆರೊ ಮದುವೆ ಫಿಕ್ಸ್ ಆಗಿದೆ. ಹೌದು, ಕಾಟೇರ ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಮದುವೆ ವಿಚಾರವನ್ನು ತಾಯಿ ಮಾಲತಿ ಸುಧೀರ್ ಅವರು ನ್ಯೂಸ್​​ ಫಸ್ಟ್​ಗೆ ಮಾಹಿತಿ ನೀಡಿದ್ದಾರೆ. ತರುಣ್ ಹಾಗೂ ಸೋನಲ್ ಮದುವೆ ಆಗುತ್ತಿರುವುದು ನಿಜ. ಆದ್ರೆ, ಮದುವೆ ದಿನಾಂಕ ಯಾವಾಗ ಅನ್ನೋದು ಫೈನಲ್ ಆಗಬೇಕಿದೆ ಎಂದು ತಾಯಿ ಸ್ಪಷ್ಟನೆ ನೀಡಿದ್ದಾರೆ.

ಯಾರು ಈ ನಟಿ ಸೋನಾಲ್ ಮಂಥೆರೊ ?

ನಟಿ ಸೋನಾಲ್ ಮಂಥೆರೊ ಅವರು ತರುಣ್ ಸುಧೀರ್ ನಿರ್ದೇಶನದ ‘ರಾಬರ್ಟ್’ ಚಿತ್ರದಲ್ಲಿ ನಟಿಸಿದ್ದರು. ವಿನೋದ್ ಪ್ರಭಾಕರ್ ಅವರಿಗೆ ಜೋಡಿಯಾಗಿ ಸೋನಾಲ್ ಮಂಥೆರೊ ಅಭಿನಯಿಸಿದ್ದರು. ಮಂಗಳೂರು ಮೂಲದ ಸೋನಾಲ್ ಮಂಥೆರೊ ಮೊದಲು ತುಳು ಚಿತ್ರಗಳಲ್ಲಿ ಅಭಿನಯಿಸಿ ಆನಂತರ ‘ಅಭಿಸಾರಿಕೆ’ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಪಂಚತಂತ್ರ, ಡೆಮೊ ಪೀಸ್, ಗರಡಿ, ಶುಗರ್ ಫ್ಯಾಕ್ಟರಿ ಸೇರಿದಂತೆ ಹಲವು ಸಿನಿಮಾದಲ್ಲಿ ಸೋನಾಲ್ ಮಂಥೆರೊ ಅಭಿನಯಿಸಿದ್ದಾರೆ. ಸದ್ಯ ನಟಿ ಸೋನಾಲ್ ಮಂಥೆರೊ ಅವರು ತರುಣ್ ಸುಧೀರ್ ಅವರ ಕೈ ಹಿಡಿಯಲಿದ್ದಾರೆ ಅಂತ ಮಾಲತಿ ಸುಧೀರ್ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊನೆಗೂ ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್ ಮದುವೆ ಫಿಕ್ಸ್​; ಭಾವಿ ಸೊಸೆ ಬಗ್ಗೆ ಗುಟ್ಟು ಬಿಚ್ಚಿಟ್ಟ ಅತ್ತೆ

https://newsfirstlive.com/wp-content/uploads/2024/07/tharun-sudir-1.jpg

Load More