newsfirstkannada.com

70 ಕ್ಯಾಮೆರಾ, 11 ಬೋನು, 38 ದಿನಗಳ ಕಾರ್ಯಾಚರಣೆ.. ಕೊನೆಗೂ ಸಿಕ್ತು ಕಗ್ಗಲಿಹುಂಡಿಯ ಕುರ್ಕ

Share :

03-08-2023

    47 ಕಿಲೋ ಮೀಟರ್ ಸುತ್ತಾಡಿ ಅರಣ್ಯ ಇಲಾಖೆಯ ಬೆವರಿಳಿಸಿದ್ದ ಚಿರತೆ

    ಚಿರತೆ ಹಾವಳಿಯಿಂದ ಬೆಚ್ಚಿಬಿದ್ದ ವಿದ್ಯಾರ್ಥಿಗಳು ಶಾಲೆಗೆ ಬರಲು ಹಿಂದೇಟು

    38 ದಿನಗಳ ನಿರಂತರ ಕಾರ್ಯಾಚರಣೆ ಬಳಿಕ ಸಿಕ್ತು ಕಗ್ಗಲಿಹುಂಡಿಯ ಚಿರತೆ

ಚಾಮರಾಜನಗರ: 115 ಜನ ಸಿಬ್ಬಂದಿ, 70 ಕ್ಯಾಮೆರಾ, 1 ಡ್ರೋನ್ ಕ್ಯಾಮೆರಾ, 11 ಬೋನು, ಬರೋಬ್ಬರಿ 38 ದಿನಗಳ ನಿರಂತರ ಕಾರ್ಯಾಚರಣೆ. ಅರೆ ಇದನ್ನೆಲ್ಲಾ ಬಳಸಿಕೊಂಡು ಯಾವುದಾದ್ರು ಸಿನಿಮಾ ಶೂಟಿಂಗ್ ಮಾಡಿದ್ರಾ ಅಂತ ಅನ್ಕೋಬೇಡಿ. ಚಾಮರಾಜನಗರ ಅರಣ್ಯ ಇಲಾಖೆ (ಬಿಆರ್ ಟಿ) ಚಿರತೆ ಸೆರೆ ಹಿಡಿಯಲು ಇಷ್ಟೆಲ್ಲಾ ಶ್ರಮ ಹಾಕಿದೆ.

ಹೌದು, ಅರಣ್ಯ ಇಲಾಖೆ ಆ ಚಿರತೆಯನ್ನ ಅಷ್ಟೊಂದು ಗಂಭೀರವಾಗಿ ಪರಿಗಣಿಸಲು ಬಲವಾದ ಕಾರಣವೂ ಇದೆ. ಜೂನ್ 26ರಂದು ಹನೂರು ತಾಲ್ಲೂಕಿನ ಕಗ್ಗಲಿಹುಂಡಿ ಗ್ರಾಮಕ್ಕೆ ಲಗ್ಗೆಯಿಟ್ಟಿದ್ದ ಐದರಿಂದ ಆರು ವರ್ಷದ ಗಂಡು ಚಿರತೆ ಮನೆ ಮುಂದೆ ಆಟವಾಡಿಕೊಂಡಿದ್ದ ಆರು ವರ್ಷದ ಸುಶೀಲಾ ಎಂಬ ಬಾಲಕಿ ಮೇಲೆ ದಾಳಿ ನಡೆಸಿ ಸಾವಿಗೆ ಕಾರಣವಾಗಿತ್ತು. ಬಲಿ ಪಡೆದ ಚಿರತೆಯ ಸೆರೆ ಹಿಡಿಯಲು ಅಂದೇ ಪಣ ತೊಟ್ಟಿದ್ದ ಅರಣ್ಯ ಇಲಾಖೆಗೆ ಆ ಚಿರತೆ ಚಳ್ಳೆ ಹಣ್ಣು ತಿನ್ನಿಸಿದ್ದು ಬರೋಬ್ಬರಿ 38 ದಿನಗಳು ಅಂದ್ರೆ ನೀವು ನಂಬಲೇಬೇಕು.

ಯಳಂದೂರು ತಾಲ್ಲೂಕಿನ ಕುಂತೂರು ಗ್ರಾಮದ ಬೆಟ್ಟದ ಬಸವೇಶ್ವರ ದೇವಸ್ಥಾನ ಸಮೀಪ ಅಳವಡಿಸಿದ್ದ ಬೋನಿಗೆ ಚಿರತೆ ಬುಧವಾರವಷ್ಟೇ ಸೆರೆ ಸಿಕ್ಕಿದೆ. ಅರಣ್ಯ ಇಲಾಖೆಯ ನಿರಂತರ ಕಾರ್ಯಾಚರಣೆಗೆ ಕೊನೆಗೂ ಫಲ ಸಿಕ್ಕಂತಾಗಿದೆ.

ಇನ್ನು ಕಗ್ಗಲಿಹುಂಡಿ ಬಾಲಕಿ ಮೇಲೆ ದಾಳಿ ನಡೆಸಿದ್ದ ಚಿರತೆ ನಿತ್ಯ ತನ್ನ ವಾಸಸ್ಥಾನವನ್ನು ಬದಲಿಸುತ್ತಲೇ ಬಂದಿತ್ತು. ಗುಂಡಾಲ್, ಹೊಂಡರಬಾಳು, ಸಿದ್ದೇಶ್ವರ ಬೆಟ್ಟ, ಕುಣಗಳ್ಳಿ, ಸುರಾಪುರ, ಶಿವಕಳ್ಳಿ, ಮದ್ದೂರಿನಲ್ಲಿ ಸಂಚರಿಸಿ ಜುಲೈ 25 ರಂದು ಮಲ್ಲಿಗೆಹಳ್ಳಿಯಲ್ಲಿ ಮತ್ತೊಂದು ಅನಾಹುತಕ್ಕೆ ನಾಂದಿ ಹಾಡಿತು.

ಚಿರತೆಯ ಚರ್ಮ ಮತ್ತು ಬಣ್ಣದ ಚಹರೆ
ಚಿರತೆಯ ಚರ್ಮ ಮತ್ತು ಬಣ್ಣದ ಚಹರೆ

ಮಲ್ಲಿಗೆಹಳ್ಳಿಯಲ್ಲಿ ಏನಾಯ್ತು?.

ಕಗ್ಗಲಿಹುಂಡಿ ಬಾಲಕಿಯನ್ನು ಬಲಿ ಪಡೆದ ಬಳಿಕ ಮಾನವರ ಮೇಲೆ ದಾಳಿ ನಡೆಸದ ಚಿರತೆ ಮಲ್ಲಿಗೆಹಳ್ಳಿಯಲ್ಲಿ ಅನಾಹುತ ಸೃಷ್ಟಿಸಿತ್ತು. ಜುಲೈ 25ರ ರಾತ್ರಿ 9 ಗಂಟೆ ಸಮಯದಲ್ಲಿ ಸಂಬಂಧಿಕರ ಮನೆಯಿಂದ ವಾಪಸ್ ಬರುತ್ತಿದ್ದ ಒಂಬತ್ತು ವರ್ಷದ ಹರ್ಷಿತ್ ಎಂಬಾತನ ಮೇಲೆ ಎಗರಿ ಗಾಯಗೊಳಿಸಿದೆ. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆಯು ಮುಂದಿನ ಅನಾಹುತ ತಪ್ಪಿಸಲು ಪಣ ತೊಟ್ಟಿತು. ಚಿರತೆ ಹಾವಳಿಯಿಂದ ಬೆಚ್ಚಿಬಿದ್ದ ವಿದ್ಯಾರ್ಥಿಗಳು ಶಾಲೆಗೆ ಬರಲು ಹಿಂದೇಟು ಹಾಕಿದಾಗ ಮಕ್ಕಳಿಗೆ ಭದ್ರತೆ ಒದಗಿಸುವ ಜವಾಬ್ದಾರಿಯನ್ನು ಅರಣ್ಯ ಇಲಾಖೆ ಹೊತ್ತುಕೊಳ್ಳಬೇಕಾಯ್ತು.

ಒಂದೇ ಚಿರತೆ ಅಂತ ನಂಬೋದು ಹೇಗೆ?

ಹೌದು, ಕಗ್ಗಲಿಹುಂಡಿಯಲ್ಲಿ ದಾಳಿ ನಡೆಸಿದ ಚಿರತೆಯೇ ಸೆರೆ ಸಿಕ್ಕಿದ್ದು ಎನ್ನುವುದನ್ನ ನಂಬೋದು ಹೇಗೆ ಎಂಬ ಪ್ರಶ್ನೆ ಮೂಡುತ್ತೆ. ಆದ್ರೆ ಅದಕ್ಕೆ ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮೆರಾಗಳು ಸಾಕ್ಷಿ ಒದಗಿಸಿವೆ. ಚಿರತೆಯ ಫೋಟೋಗಳನ್ನು ಸೂಕ್ಷ್ಮ ಪರಿಶೀಲನೆಗೆ ಒಳಪಡಿಸಿದ್ದು ಬರೋಬ್ಬರಿ 47 ಕಿಲೋ ಮೀಟರ್ ಸುತ್ತಾಡಿ ಅರಣ್ಯ ಇಲಾಖೆಯ ಬೆವರಿಳಿಸಿದ ಚಿರತೆ ಅದೇ ಎಂದು ರುಜುವಾತಾಗಿದೆ. ಒಟ್ಟಿನಲ್ಲಿ ಜನರಲ್ಲಿ ಭಾರಿ ಭಯ ಹುಟ್ಟಿಸಿದ್ದ ಚಿರತೆ ಸೆರೆಯಾಗಿದ್ದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

70 ಕ್ಯಾಮೆರಾ, 11 ಬೋನು, 38 ದಿನಗಳ ಕಾರ್ಯಾಚರಣೆ.. ಕೊನೆಗೂ ಸಿಕ್ತು ಕಗ್ಗಲಿಹುಂಡಿಯ ಕುರ್ಕ

https://newsfirstlive.com/wp-content/uploads/2023/08/Leapord.jpg

Load More