ಕೊನೆಗೂ ‘ಸಲಾರ್’ ಬಿಡುಗಡೆಯ ಡೇಟ್ ಫಿಕ್ಸ್‌; ಪ್ರಶಾಂತ್ ನೀಲ್, ಹೊಂಬಾಳೆ ಫಿಲಂಸ್‌ನಿಂದ ಅಧಿಕೃತ ಘೋಷಣೆ

author-image
admin
Updated On
ಕೊನೆಗೂ ‘ಸಲಾರ್’ ಬಿಡುಗಡೆಯ ಡೇಟ್ ಫಿಕ್ಸ್‌; ಪ್ರಶಾಂತ್ ನೀಲ್, ಹೊಂಬಾಳೆ ಫಿಲಂಸ್‌ನಿಂದ ಅಧಿಕೃತ ಘೋಷಣೆ
Advertisment
  • ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಕನಸಿನ ಚಿತ್ರ ರಿಲೀಸ್‌ಗೆ ರೆಡಿ
  • ಕಳೆದ ಎರಡು ವರ್ಷದಿಂದ ತಯಾರಾಗ್ತಿರುವ ಬಹುನಿರೀಕ್ಷಿತ ಸಲಾರ್
  • ಕ್ರಿಸ್‌ಮಸ್‌ಗೆ ಸಲಾರ್ ವರ್ಸಸ್ ಡಂಕಿ ಬಿಡುಗಡೆ ಆಗೋದು ಫಿಕ್ಸ್

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಕನಸಿನ ಚಿತ್ರ, ಪ್ಯಾನ್ ಇಂಡಿಯಾದ ಬಹು ನಿರೀಕ್ಷಿತ ಸಿನಿಮಾ ಸಲಾರ್ ಬಿಡುಗಡೆಯ ದಿನಾಂಕ ಕೊನೆಗೂ ಫಿಕ್ಸ್ ಆಗಿದೆ. ಹೊಂಬಾಳೆ ಫಿಲಂಸ್ ಅಧಿಕೃತವಾಗಿ ಸಲಾರ್ ಸಿನಿಮಾದ ಡೇಟ್ ಅನೌನ್ಸ್ ಮಾಡಿದ್ದು, ಮುಂದಿನ ಕ್ರಿಸ್‌ಮಸ್‌ಗೆ ಬ್ಲಾಕ್ ಬಸ್ಟರ್ ಚಿತ್ರ ಬೆಳ್ಳಿ ತೆರೆ ಮೇಲೆ ಅಬ್ಬರಿಸೋದು ಪಕ್ಕಾ ಎನ್ನಲಾಗಿದೆ. ಡಿಸೆಂಬರ್ 22, 2023ರಂದು ಸಲಾರ್ ಸಿನಿಮಾ ವರ್ಲ್ಡ್‌ವೈಡ್ ರಿಲೀಸ್ ಆಗಲಿದೆ ಎಂದು ಹೊಂಬಾಳೆ ಫಿಲಂಸ್ ಅಧಿಕೃತವಾಗಿ ಘೋಷಣೆ ಮಾಡಿದೆ.

ಪ್ಯಾನ್ ಇಂಡಿಯಾದ ಬಿಗ್ಗೆಸ್ಟ್​ ಸಿನಿಮಾ ಸಲಾರ್​ಗಾಗಿ ಇಡೀ ಸಿನಿ ದುನಿಯಾ ಎದುರು ನೋಡ್ತಿದೆ. ಈ ಮೊದಲು ಸಲಾರ್‌ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಹೊಂಬಾಳೆ ಫಿಲಂಸ್ ಸೆಪ್ಟೆಂಬರ್ 28ಕ್ಕೆ ರಿಲೀಸ್ ಮಾಡಲಿದೆ ಎನ್ನಲಾಗಿತ್ತು. ಆದರೆ, ಸಲಾರ್ ಸಿನಿಮಾದ ಸಿಜಿ ವರ್ಕ್ ಪೂರ್ಣಗೊಂಡಿರಲಿಲ್ಲ. ಸಿಜಿ ಕರೆಕ್ಷನ್ ಆಗಬೇಕಿರೋ ಕಾರಣದಿಂದಾಗಿ ಸಲಾರ್ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು.

ಇದನ್ನೂ ಓದಿ: ಸಲಾರ್​​ ಸಿನಿಮಾಗಾಗಿ ಕಾಯುತ್ತಿದ್ದ ಫ್ಯಾನ್ಸ್​​ಗೆ ಬಿಗ್​ ಶಾಕ್​​.. ಇಲ್ಲಿದೆ ಮಹತ್ವದ ಅಪ್ಡೇಟ್​!

ಕಳೆದ ಎರಡು ವರ್ಷದಿಂದ ತಯಾರಾಗ್ತಿರುವ ಸಲಾರ್ ಟೀಮ್ ಈಗಾಗ್ಲೇ ಎರಡ್ಮೂರು ಸಲ ಡೇಟ್ ಬದಲಿಸಿದೆ.. ಪ್ರಭಾಸ್​ ಕಾಲ್​ಶೀಟ್​, ಪ್ರಶಾಂತ್ ನೀಲ್​ ಕಮಿಟ್​ಮೆಂಟ್​.. ಸ್ಕ್ರಿಪ್ಟ್​ನಲ್ಲಿ ಬದಲಾವಣೆ ಹೀಗೆ ಹಲವು ಕಾರಣಗಳಿಂದ ಸಲಾರ್​ ಪದೇ ಪದೇ ಮುಂದಕ್ಕೆ ಹೋಗ್ತಾನೇ ಇತ್ತು. ನಿಮಗೊಂದು ಅದ್ಭುತ ಅನುಭವ ಕೊಡುವ ಉದ್ದೇಶದಿಂದ ಕೆಲಸ ಸಾಗ್ತಿದೆ, ಪೋಸ್ಟ್​ ಪ್ರೊಡಕ್ಷನ್​ ಹಂತದಲ್ಲಿದ್ದೇವೆ' ಎಂದಷ್ಟೇ ಹೇಳಿರುವ ಚಿತ್ರತಂಡ ಶೀಘ್ರದಲ್ಲೇ ಹೊಸ ದಿನಾಂಕ ಘೋಷಿಸ್ತೇವೆ ಎಂದಿದ್ದರು. ದಿಢೀರ್ ಅಂತ ಸಲಾರ್ ರಿಲೀಸ್ ಡೇಟ್​ ಮುಂದೂಡಿದ್ದ ಹೊಂಬಾಳೆ ಫಿಲಂಸ್‌ ಇದೀಗ ಮೇಜರ್ ಅಪ್‌ಡೇಟ್ ಕೊಟ್ಟಿದೆ.

ಇದನ್ನೂ ಓದಿ: ಸಲಾರ್​​​ ರಿಲೀಸ್​ ಡೇಟ್​ ಫಿಕ್ಸ್​​.. ಶಾರುಖ್​ಗೆ ಸೆಡ್ಡು ಹೊಡೀತಾರಾ ಪ್ರಭಾಸ್​​..? ಗೆಲ್ಲೋದ್ಯಾರು..?

ಡಿಸೆಂಬರ್ 22ರಂದು ಸಲಾರ್ ಸಿನಿಮಾ ಬಿಡುಗಡೆಯಾಗೋದು ಪಕ್ಕಾ ಆಗಿದೆ. ಅಂದೇ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಅಭಿನಯದ ಡಂಕಿ ಕೂಡ ಅಂದೇ ರಿಲೀಸ್ ಆಗ್ತಿದೆ. ಈ ಬಾರಿಯ ಕ್ರಿಸ್‌ಮಸ್‌ಗೆ ಸಲಾರ್ ವರ್ಸಸ್ ಡಂಕಿ ಬಿಡುಗಡೆ ಆಗೋದು ಖಚಿತ ಆಗಿದೆ. ಡಾರ್ಲಿಂಗ್ ಪ್ರಭಾಸ್, ಶಾರೂಖ್ ಖಾನ್ ಫ್ಯಾನ್ಸ್‌ ಕ್ಯಾಲೆಂಡರ್‌ನಲ್ಲಿ ಡಿಸೆಂಬರ್ 22ರ ಡೇಟ್ ಅನ್ನೇ ಎದುರು ನೋಡ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment