newsfirstkannada.com

1 ಲಕ್ಷ ರೂಪಾಯಿ ಫೋನ್‌ಗಾಗಿ ಡ್ಯಾಂನಿಂದ 41 ಲಕ್ಷ ಲೀಟರ್ ನೀರು ಬಿಟ್ಟ ಅಧಿಕಾರಿಗೆ ಹಾಕಿದ ದಂಡ ಎಷ್ಟು?

Share :

30-05-2023

    ಫ್ರೆಂಡ್ಸ್‌ ಜೊತೆ ಜಾಲಿ ಟ್ರಿಪ್ ಹೋಗಿದ್ದ ಅಧಿಕಾರಿ

    ಸೆಲ್ಫಿ ತೆಗೆದುಕೊಳ್ಳುವಾಗ ಡ್ಯಾಂಗೆ ಫೋನ್ ಬಿದ್ದಿತ್ತು

    41 ಲಕ್ಷ ಲೀಟರ್ ನೀರು ಹಾಳು ಮಾಡಿದ್ದಕ್ಕೆ ಫೈನ್‌!

ಭೋಪಾಲ್‌: ಒಂದೇ ಒಂದು ಮೊಬೈಲ್‌ ಫೋನ್‌ಗಾಗಿ ಡ್ಯಾಂನಿಂದ 41 ಲಕ್ಷ ಲೀಟರ್ ನೀರು ಬಿಟ್ಟಿದ್ದ ಪ್ರಕರಣ ಇತ್ತೀಚಿಗೆ ದೇಶಾದ್ಯಂತ ಸದ್ದು ಮಾಡಿತ್ತು. ಇದೀಗ ಈ ಘಟನೆಗೆ ಕಾರಣವಾದ ಸರ್ಕಾರಿ ಅಧಿಕಾರಿಗೆ ದಂಡವನ್ನು ಹಾಕಲಾಗಿದೆ. ಆದರೆ ಆ ದಂಡದ ಮೊತ್ತ ಮತ್ತೊಂದು ವಿವಾದಕ್ಕೆ ಗುರಿಯಾಗಿದೆ.

ಕಳೆದ ಮೇ 26ರಂದು ಮಧ್ಯಪ್ರದೇಶದ ಪರಲ್‌ಕೊಟ್‌ ಜಲಾಶಯದಲ್ಲಿ ಈ ಘಟನೆ ನಡೆದಿತ್ತು. ಆಹಾರ ಇಲಾಖೆಯ ಇನ್ಸ್‌ಪೆಕ್ಟರ್ ರಾಜೇಶ್ ವಿಶ್ವಾಸ್‌ ಎಂಬುವವರು ತನ್ನ ಸ್ನೇಹಿತರೊಂದಿಗೆ ಡ್ಯಾಂ ಬಳಿ ಮೋಜು, ಮಸ್ತಿ ಮಾಡಲು ಬಂದಿದ್ದರು. ಸೆಲ್ಫಿ ತೆಗೆದುಕೊಳ್ಳುವಾಗ 1 ಲಕ್ಷ ರೂಪಾಯಿ ಬೆಲೆ ಬಾಳುವ ಮೊಬೈಲ್ ಫೋನ್ ಅಚಾನಕ್ಕಾಗಿ ಡ್ಯಾಂ ನೀರಿಗೆ ಬಿದ್ದಿತ್ತು. ಆ ಫೋನ್‌ನಲ್ಲಿ ಮಹತ್ವದ ದಾಖಲೆಗಳಿದೆ ಎಂದು ಹೇಳಿದ ರಾಜೇಶ್ ಅವರು ಕೂಡಲೇ ಜಲಾಶಯದ 5 ಅಡಿ ನೀರು ಅಂದ್ರೆ 41 ಲಕ್ಷ ಲೀಟರ್ ನೀರನ್ನ ಹೊರಗೆ ಬಿಡಲು ಹೇಳಿದ್ರು. ನೀರು ಕಡಿಮೆಯಾದ ಮೇಲೆ ಸ್ಥಳೀಯರ ಸಹಾಯದಿಂದ ಫೋನ್ ಹುಡುಕಿಸಲಾಗಿತ್ತು. 1 ಲಕ್ಷ ರೂಪಾಯಿಯ ಫೋನ್ ಏನೋ ಸಿಕ್ಕಿದೆ. ಆದರೆ ಸರ್ಕಾರಿ ಅಧಿಕಾರಿಯ ಈ ಉದ್ಧಟತನಕ್ಕೆ ಜಲಾಶಯದಲ್ಲಿದ್ದ ಜೀವಜಲ ವ್ಯರ್ಥವಾಗಿತ್ತು.

ಡ್ಯಾಂ ನೀರು ವ್ಯರ್ಥವಾಗಲು ಕಾರಣವಾದ ಛತ್ತೀಸ್‌ಗಢ ಸರ್ಕಾರಿ ಅಧಿಕಾರಿಯ ಈ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಕೂಡಲೇ ಅಧಿಕಾರಿಯನ್ನ ಅಮಾನತುಗೊಳಿಸಿತ್ತು. ಇದೀಗ ಹಿರಿಯ ಅಧಿಕಾರಿಗಳು ಫುಡ್ ಇನ್ಸ್‌ಪೆಕ್ಟರ್ ರಾಜೇಶ್ ವಿಶ್ವಾಸ್‌ ಅವರಿಗೆ ದಂಡವನ್ನು ವಿಧಿಸಿದ್ದಾರೆ. ಡ್ಯಾಂನಿಂದ 41 ಲಕ್ಷ ಲೀಟರ್ ನೀರು ಹಾಳು ಮಾಡಿದ ತಪ್ಪಿಗೆ 53,000 ರೂಪಾಯಿ ದಂಡ ಹಾಕಲಾಗಿದೆ.

ಜಲಾಶಯದಲ್ಲಿ ಸಂಗ್ರಹವಾಗಿದ್ದ ಈ ನೀರು ಬೇಸಿಗೆ ಕಾಲದಲ್ಲಿ ಪ್ರಾಣಿ, ಪಕ್ಷಿಗಳಿಗೆ ಜೀವಾಮೃತವಾಗಿತ್ತು. ಹೀಗೆ ವ್ಯರ್ಥ ಮಾಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇಷ್ಟೆಲ್ಲಾ ಖಂಡನೆ ವ್ಯಕ್ತವಾದ ಮೇಲೆ ಕೇವಲ 53 ಸಾವಿರ ರೂಪಾಯಿ ಫೈನ್ ಹಾಕಲಾಗಿತ್ತು. 41 ಸಾವಿರ ಲೀಟರ್ ವ್ಯರ್ಥ ಮಾಡಿದ್ದಕ್ಕೆ ಬರೀ 53 ಸಾವಿರ ರೂಪಾಯಿ ದಂಡ ಹಾಕಿರೋದು ಸರಿನಾ ಅನ್ನೋ ಚರ್ಚೆಯೂ ಜೋರಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

1 ಲಕ್ಷ ರೂಪಾಯಿ ಫೋನ್‌ಗಾಗಿ ಡ್ಯಾಂನಿಂದ 41 ಲಕ್ಷ ಲೀಟರ್ ನೀರು ಬಿಟ್ಟ ಅಧಿಕಾರಿಗೆ ಹಾಕಿದ ದಂಡ ಎಷ್ಟು?

https://newsfirstlive.com/wp-content/uploads/2023/05/Dam-Water.jpg

Load More