newsfirstkannada.com

ಕೊನೆಗೂ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದ ಹಾಲಶ್ರೀ.. ಇವರ ಬಂಧನವೇ ರೋಚಕ!

Share :

19-09-2023

  ಆರೋಪಿ ಚೈತ್ರಾ ಕುಂದಾಪುರ ಬಂಧನದ ಬೆನ್ನಲ್ಲೇ ಅಭಿನವ ಹಾಲಶ್ರೀ ಅರೆಸ್ಟ್​

  ಎಫ್ಐಆರ್ ಆದ 11 ದಿನಗಳ ಬಳಿಕ ಕೊನೆಗೂ ಅರೆಸ್ಟ್ ಆದ ಸ್ವಾಮೀಜಿ!

  ಸಿಸಿಬಿಗೆ ಯಾರ ಮೇಲೂ ಇಲ್ಲದ ಕಾಳಜಿ ಹಾಲಶ್ರೀ ಸ್ವಾಮಿಜಿ ಮೇಲೆ ಏಕೆ?

ಬೆಂಗಳೂರು: ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರ ಹರಸಾಹಸಕ್ಕೆ ಉತ್ತಮ ಫಲ ಸಿಕ್ಕಿದೆ. 11 ದಿನಗಳಿಂದ ಆರೋಪಿ ಅಭಿನವ ಹಾಲಶ್ರೀ ಹುಡುಕಾಟದಲ್ಲಿದ್ದ ಪೊಲೀಸರಿಗೆ ಕೊನೆಗೆ ಅವರು ಸಿಕ್ಕಿದ್ದಾರೆ. ಆದ್ರೆ, ಇದು ಸುಲಭಕ್ಕೆ ಆದ ಕೆಲಸವಲ್ಲ. ಸಿಸಿಬಿ ಪೊಲೀಸರು ಹಾಕಿರೋ ಎಫರ್ಟ್‌ ತುಂಬಾ ಜಾಸ್ತಿಯಿದೆ. ಒಂದೊಂದೇ ಲಿಂಕ್‌ನ ಕನೆಕ್ಟ್ ಮಾಡಿಕೊಂಡು ಒಡಿಶಾ ರಾಜ್ಯದ ಪೊಲೀಸರ ಸಹಾಯ ಪಡೆದು ಅರೆಸ್ಟ್ ಮಾಡಿದ್ದಾರೆ.

ಅಭಿನವ ಹಾಲಶ್ರೀ ಆ್ಯಕ್ಟಿಂಗ್‌ ದಿ ಎಂಡ್‌!
ಕಣ್ಣಿಗೆ ಕಾಣದವರು ಕೊನೆಗೂ ಕಣ್ಣಿಗೆ ಬಿದ್ದಿದ್ದು ಹೇಗೆ?

ಸಿಸಿಬಿ ಪೊಲೀಸರಿಗೆ ನಿನ್ನೆ ರಾತ್ರಿ ಒಂದು ಗುಡ್‌ ನ್ಯೂಸ್ ಸಿಕ್ಕೇ ಬಿಟ್ಟಿತ್ತು. ಹಲವು ದಿನಗಳಿಂದ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು, ಬೆಂಗಳೂರಿನಿಂದ ನಾನಾ ಊರಿಗೆ ತಿರುಗಾಟ ನಡೆಸಿ, ಲಭ್ಯವಿರೋ ಎಲ್ಲಾ ಮಾರ್ಗಗಳಿಂದ 3 ತಂಡ ಸತತವಾಗಿ ಹುಡುಕಾಡಿದ್ದಕ್ಕೆ ಫಲ ಸಿಕ್ಕಿದ ಗುಡ್‌ನ್ಯೂಸ್‌ ಅದು. ಒಂದೇ ಒಂದು ಫೋಟೋ ಸಿಸಿಬಿ ಪೊಲೀಸರ ಮೊಬೈಲ್‌ಗೆ ಬರ್ತಿದ್ದಂತೆ, ಅವರೇ ಇವರು ಎಂದು ಕನ್ಫರ್ಮ್ ಆದ್ಮೇಲೆ ಸಿಸಿಬಿ ಪೊಲೀಸರು ನಿರಾಳರಾದರು. ಈ ಫೋಟೋ ಅವರ ಮೊಬೈಲ್‌ಗೆ ಬಂದಾಗ, ಅವರು ಬಿಹಾರದಲ್ಲಿದ್ದರು. ಬೆಂಗಳೂರಿನಿಂದ ಬಿಹಾರಕ್ಕೆ ಹೋಗಿದ್ದ ಆ ತಂಡ ರಿಲ್ಯಾಕ್ಸ್ ಮೂಡ್‌ಗೆ ಜಾರಿತು. ಆದ್ರೆ, ಆಪರೇಷನ್‌ ಕಂಪ್ಲೀಟ್ ಆಗಿರಲಿಲ್ಲ. ಅವರು ಒಡಿಶಾಗೆ ಹೋದರು. ಅಂದ್ಹಾಗೇ, ಹಾಲಶ್ರೀಯ ಅರೆಸ್ಟ್ ಜರ್ನಿ ಇದ್ಯಾಲ್ಲಾ ಅದು ಸರಳಾತೀ ಸರಳವಲ್ಲ. ಇದೇ ತಿಂಗಳ 11ನೇ ತಾರೀಖು ಅಭಿನವ ಹಾಲಶ್ರೀ ಅಂದ್ರೆ ಚೈತ್ರಾ ಕುಂದಾಪುರ ಅರೆಸ್ಟ್ ಆದಾಗ ಬಳ್ಳಾರಿಯ ಜಿಲ್ಲೆಯ ಹಿರೇಹಡಗಲಿಯಲ್ಲಿ ಇರ್ತಾರೆ.

ಚೈತ್ರಾ ಬಲೆಗೆ ಬೀಳುತ್ತಿದ್ದಂತೆ, ಸ್ವಾಮೀಜಿ ಕನ್ಫರ್ಮ್ ಆಗಿತ್ತು, ನೆಕ್ಸ್ಟ್ ನಾನೇ ಅರೆಸ್ಟ್ ಆಗೋದು ಅಂತಾ. ಹಾಗಾಗಿ, ಸ್ವಾಮೀಜಿ ಎಸ್ಕೇಪ್‌ ಆಗೋ ಪ್ಲಾನ್ ಮಾಡಿಕೊಂಡರು. ಹಿರೇಹಡಗಲಿಯಿಂದ ಕಾರ್‌ನಲ್ಲಿ ಮೈಸೂರಿಗೆ ಬರ್ತಾರೆ. 11ನೇ ತಾರೀಖು, ರಾತ್ರಿ ಮೈಸೂರಿಗೆ ಬರೋ ಸ್ವಾಮೀಜಿ ನೈಟ್ ಅಲ್ಲೇ ಉಳಿದುಕೊಳ್ತಾರೆ. 12ನೇ ತಾರೀಖು ಮೈಸೂರಿನಲ್ಲಿ ಉಳಿದುಕೊಳ್ಳೋ ಸ್ವಾಮೀಜಿ ಒಂದು ಪ್ಲಾನ್ ಮಾಡ್ತಾರೆ. ಈಗಿರುವ ಮೊಬೈಲ್‌ ನಂಬರ್ ನಾನು ಯೂಸ್ ಮಾಡಿದ್ರೆ ಪಕ್ಕಾ ಸಿಕ್ಕಿಹಾಕಿಕೊಳ್ಳುತ್ತೇನೆ. ಹೀಗಾಗಿ ಮೊಬೈಲ್ ಮತ್ತು ಸಿಮ್‌ ಚೇಂಜ್ ಮಾಡೋಣ ಅಂತಾ ಡಿಸೈಡ್ ಮಾಡ್ತಾರೆ. ಮೈಸೂರಿನ ಅಪೂರ್ವ ಸ್ಟೋರ್ಸ್‌ನಲ್ಲಿ ನಾಲ್ಕು ಸಿಮ್ ಮತ್ತು ನಾಲ್ಕು ಮೊಬೈಲ್‌ ಖರೀದಿಸುತ್ತಾರೆ. ಈ ಪೈಕಿ 2 ಮೊಬೈಲ್ ಮತ್ತು 2 ಸಿಮ್‌ನ ಡ್ರೈವರ್‌ ನಿಂಗರಾಜು ಕೊಡ್ತಾರೆ. ಇದಿಷ್ಟೇ ಅಲ್ಲ, ಮೈಸೂರಿನಲ್ಲಿಯೇ ತನ್ನ ಕಾರ್‌ನ ನಂಬರ್‌ ಪ್ಲೇಟ್‌ ಚೇಂಜ್ ಮಾಡಿಕೊಳ್ತಾರೆ ಸ್ವಾಮೀಜಿ.

ಇದಿಷ್ಟೇ ಅಲ್ಲ, ತನ್ನ ಆಪ್ತ ಪ್ರಣವ್‌ನಿಂದ 50 ಲಕ್ಷ ರೂಪಾಯಿ ಪಡೆದುಕೊಳ್ತಾರೆ. ಇಲ್ಲೊಂದು ಪ್ರಶ್ನೆ ಉದ್ಭವಿಸುತ್ತೆ. ಸ್ವಾಮೀಜಿ 50 ಲಕ್ಷ ರೂಪಾಯಿ ಯಾಕೆ ಪಡೆದರು ಅಂತಾ. ಕಾರಣವಿಷ್ಟೇ, ಏನೇ ಆದರೂ ಪೊಲೀಸರ ಕೈಯಲ್ಲಿ ಸಿಲುಕಿಕೊಳ್ಳಬಾರದು. ಕಾಶಿಗೆ ಹೋಗೋಣ, ಅನ್ನೋ ಕಾರಣಕ್ಕೆ 50 ಲಕ್ಷ ರೂಪಾಯಿ ಪಡೆಯುತ್ತಾರೆ. ಬಳಿಕ ಮೈಸೂರಿನಿಂದ ಸಿಕಂದರಬಾದ್‌ಗೆ ತೆರಳುತ್ತಾರೆ. 13ನೇ ತಾರೀಖು ಅವ್ರು ಉತ್ತರ ಪ್ರದೇಶದ ಸಿಕಂದರಬಾದ್‌ಗೆ ಹೋಗ್ತಾರೆ. 13ನೇ ತಾರೀಖು ನಿಂಗರಾಜು ಪೊಲೀಸರ ಕೈಗೆ ತಗ್ಲಾಕೊಳ್ತಾನೆ. ನಿಂಗರಾಜು ಅರೆಸ್ಟ್ ಆದ ನಂತರ ಸ್ವಾಮೀಜಿ ಟ್ರೈನ್‌ ಮೂಲಕ ಶ್ರೀಶೈಲಂಗೆ ತೆರಳುತ್ತಾರೆ.

ಶ್ರೀಶೈಲಂನಿಂದ ಪುರಿಗೆ ಮತ್ತೆ ಲೋಕೇಶನ್‌ ಚೇಂಜ್ ಮಾಡ್ತಾರೆ. ಶ್ರೀಶೈಲಂನಿಂದ ಪುರಿಗೆ ನಂತರ ಗಾಂಜಾಂನಿಂದ ಕಟಕ್‌ ತೆರಳುತ್ತಾರೆ. ಕಟಕ್‌ನಿಂದ ಕಾಶಿಗೆ ಹೋಗಲು ರಾಜಧಾನಿ ಎಕ್ಸ್‌ಪ್ರೆಸ್ ಟ್ರೈನ್‌ ಬುಕ್ ಮಾಡಿರುತ್ತಾರೆ ಸ್ವಾಮೀಜಿ. ಕೊನೆಗೂ ಸ್ವಾಮೀಜಿ ರೈಲ್ವೆ ಪೊಲೀಸರಿಗೆ ಸಿಲುಕಿಕೊಂಡು ಬಿಡ್ತಾನೆ. ಆದ್ರೆ, ಸ್ವಾಮೀಜಿ ಗೆಟಪ್‌ನಲ್ಲಿ ಆತ ಇರಲಿಲ್ಲ. ಟೀ-ಶರ್ಟ್ ಹಾಕಿಕೊಂಡಿದ್ದ. ರೈಲ್ವೆ ಪೊಲೀಸರು ಕಳುಹಿಸಿದ ಫೋಟೋ ನೋಡಿದ ಸಿಸಿಬಿ ಪೊಲೀಸರು ಆತನೇ ಅಂತಾ ಕನ್ಫರ್ಮ್ ಮಾಡಿ ಕಟಕ್‌ನತ್ತ ಪಯಣ ಬೆಳೆಸುತ್ತಾರೆ. ಅಭಿನವ ಹಾಲಶ್ರೀಯನ್ನ ಬೆಂಗಳೂರಿಗೆ ಕರೆತರಲು ಒಂದಷ್ಟು ಕಾನೂನಿನ ಪ್ರಕ್ರಿಯೆಗಳು ನಡೆಯಬೇಕು. ಬೇರೆ ರಾಜ್ಯದಲ್ಲಿ ಓರ್ವ ಆರೋಪಿಯ ಬಂಧನವಾದರೇ, ಮೊದಲು ಸ್ಥಳೀಯ ಮ್ಯಾಜಿಸ್ಟ್ರೇಟ್ ಕೋರ್ಟ್​ ಅರ್ಜಿ ಹಾಕಿ, ಕೇಸ್‌ನ ಕಂಪ್ಲೀಟ್‌ ವಿವರ ನೀಡಬೇಕು.

ಕೋರ್ಟ್ ಅನುಮತಿ ಪಡೆದು ಟ್ರಾನ್ಸಿಟ್ ವಾರಂಟ್ ಮೇಲೆ ಕರೆ ತರಬೇಕು. ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣವಾಗಿ ಅಭಿನವ ಹಾಲಶ್ರೀಯನ್ನ ಏರ್ಪೋರ್ಟ್​ನಿಂದ ವಿಐಪಿ ಮಾನ್ಯತೆ ನೀಡಿ ಪೊಲೀಸರು ಕರೆದುಕೊಂಡಿದ್ದಾರೆ. ಮಾಧ್ಯಮಗಳ ಕಣ್ಣುತಪ್ಪಿಸಿ ಹಾಲಶ್ರೀಯನ್ನು ಸಿಸಿಬಿ ಅಧಿಕಾರಿಗಳು ಎಫ್ಐಆರ್ ಆದ 11 ದಿನಗಳ ಬಳಿಕ ಅರೆಸ್ಟ್ ಮಾಡಿದ್ದಾರೆ. ಇನ್ನೂ ಹಾಲಶ್ರೀ ವಿಚಾರದಲ್ಲಿ ಮಾಧ್ಯಮಗಳಿಗೆ ಯಾವುದೇ ರೀತಿಯಲ್ಲಿ ಸಿಸಿಬಿ ಅಧಿಕಾರಿಗಳು ಗುಟ್ಟನ್ನು ಬಿಟ್ಟು ಕೊಡುತ್ತಿಲ್ಲ. ಹೀಗಾಗಿ ಸಿಸಿಬಿಗೆ ಯಾರ ಮೇಲೂ ಇಲ್ಲದ ಕಾಳಜಿ ಹಾಲಶ್ರೀ ಸ್ವಾಮೀಜಿ ಮೇಲೆ ಏಕೆ ಎಂಬ ಪ್ರಶ್ನೆ ಕಾಡುತ್ತಿದೆ.

ಸದ್ಯ ಅಭಿನವ ಹಾಲಶ್ರೀ ಕೊನೆಗೂ ಪೊಲೀಸರ ಕೈಗೆ ಸಿಕ್ಕಿದ್ದಾನೆ. ಕೇಸ್‌ನ ಪ್ರಮುಖ ಆರೋಪಿಯಾಗಿರೋ ಈತನಿಂದ ಮಹತ್ವದ ಮಾಹಿತಿ ಸಿಗುವ ಸಾಧ್ಯತೆ ಇದೆ. ಯಾಕಂದ್ರೆ, ಇನ್ನೊರ್ವ ಆರೋಪಿ ಚೈತ್ರಾ ಕುಂದಾಪುರ ಕೂಡ, ಸ್ವಾಮೀಜಿ ಬಳಿ ಪ್ರಮುಖ ವಿಷಯಗಳಿವೆ ಅಂತಾ ಬಂಧನದ ನಂತರ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಳು. ಈ ಹಿನ್ನೆಲೆಯಲ್ಲಿ ಸ್ವಾಮೀಜಿಯ ಬಂಧನ ಈ ಕೇಸ್‌ಗೆ ದೊಡ್ಡ ಟ್ವಿಸ್ಟ್ ಅಂತಾ ಭಾವಿಸಬಹುದು. ಸ್ವಾಮೀಜಿಯ ಬಂಧನ ಹಿಂದೆ ಸಿಸಿಬಿ ಪೊಲೀಸರ ಹಾರ್ಡ್‌ವರ್ಕ್‌ ನಿಜಕ್ಕೂ ಎದ್ದು ಕಾಣುತ್ತಿದೆ. ಇವರ ಶ್ರಮ ನಿಜಕ್ಕೂ ಶ್ಲಾಘನೀಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊನೆಗೂ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದ ಹಾಲಶ್ರೀ.. ಇವರ ಬಂಧನವೇ ರೋಚಕ!

https://newsfirstlive.com/wp-content/uploads/2023/09/swamiji-1.jpg

Load More