newsfirstkannada.com

ಕಾಂಗ್ರೆಸ್​ ಕಾರ್ಯಕರ್ತೆ ವಿರುದ್ಧ ಅವಹೇಳನಕಾರಿ ಪೋಸ್ಟ್​​; ಚಕ್ರವರ್ತಿ ಸೂಲಿಬೆಲೆ ಮೇಲೆ ಬಿತ್ತು ಕೇಸ್!

Share :

29-08-2023

    ಸೋಷಿಯಲ್​​ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್‌

    ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕೇಸ್

    ​ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಾಂಗ್ರೆಸ್​​ ಕಾರ್ಯಕರ್ತೆ ದೂರು..!

ಬೆಂಗಳೂರು: ಸೋಷಿಯಲ್​​ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದ್ದ ಆರೋಪದಡಿ ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕೇಸ್​ ದಾಖಲಾಗಿದೆ. ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್​​ಐಆರ್​​ ದಾಖಲು ಮಾಡಲಾಗಿದೆ.

ಇತ್ತೀಚೆಗೆ ಚಕ್ರವರ್ತಿ ಸೂಲಿಬೆಲೆ ಇಸ್ರೋದ ಚಂದ್ರಯಾನ 3 ಯಶಸ್ಸಿಗೆ ಪ್ರಾರ್ಥಿಸಿ ಪೂಜೆ ಮಾಡಿ ಫೋಟೋ ಹಾಕಿ ಎಂದು ಪೋಸ್ಟ್​ ಹಾಕಿದ್ದರು. ಇದಕ್ಕೆ ಶಿವಮೊಗ್ಗ ನಿವಾಸಿ ಸೌಗಂಧಿರಾ ರಘುನಾಥ್ ಎಂಬುವರು ಕಾಮೆಂಟ್ ಮಾಡಿದ್ದರು. ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡುವುದು ತಪ್ಪಲ್ಲ. ಆದರೆ, ಪೂಜೆ ಮಾಡಿದ ಫೋಟೋ ಹಾಕಲೇಬೇಕು ಎಂದು ಹೇರಿಕೆ ಮಾಡುವುದು ತಪ್ಪು ಎಂದು ಕಾಮೆಂಟ್​​ ಮಾಡಿದ್ದರು. ಸೌಗಂಧಿರಾ ರಘುನಾಥ್ ಈ ಕಾಮೆಂಟ್​ಗೆ ಸೂಲಿಬೆಲೆ ಪ್ರತಿಕ್ರಿಯೆ ನೀಡಿ “ನಿನಗೇನು ಉರಿ?” ಎಂದು ಪೋಸ್ಟ್​ ಮಾಡಿದ್ದಾರೆ.

ಇನ್ನು, ಇದು ಸ್ತ್ರೀ ನಿಂದನೆ. ಹೆಣ್ಣುಮಕ್ಕಳಿಗೆ ಮರ್ಯಾದೆ ಕೊಡಬೇಕು. ತಾನು ಮಾಡಿದ ಕಾಮೆಂಟ್ ಡಿಲೀಟ್ ಮಾಡಿದ ಮೇಲೂ ನಕಲಿ ಖಾತೆಗಳ ಮೂಲಕ ಸ್ಕ್ರೀನ್ ಶಾಟ್ ಹಾಕಿಸಿ ನನ್ನ ತೇಜೋವಧೆ ಮಾಡಿಸಿದ್ದಾರೆ. ಈ ಸ್ತ್ರೀ ನಿಂದಕ ಸೂಲಿಬೆಲೆ ವಿರುದ್ಧ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದರು. ಸದ್ಯ ಕೆಪಿಸಿಸಿ ಸೋಶಿಯಲ್ ಮೀಡಿಯಾ ಉಪಾಧ್ಯಕ್ಷೆ ಸೌಗಂಧಿಕ ರಘುನಾಥ್ ನೀಡಿದ್ದ ದೂರಿನ ಆಧಾರದ ಮೇರೆಗೆ ಪೊಲೀಸರು ಐಪಿಸಿ ಸೆಕ್ಷನ್ 504, 509ರ ಅಡಿ ಕೇಸ್​​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​ ಕಾರ್ಯಕರ್ತೆ ವಿರುದ್ಧ ಅವಹೇಳನಕಾರಿ ಪೋಸ್ಟ್​​; ಚಕ್ರವರ್ತಿ ಸೂಲಿಬೆಲೆ ಮೇಲೆ ಬಿತ್ತು ಕೇಸ್!

https://newsfirstlive.com/wp-content/uploads/2023/08/Sulibele.jpg

Load More