newsfirstkannada.com

ನಟ ದರ್ಶನ್​ ಸಾಕು ನಾಯಿ ಕಚ್ಚಿದ್ದು ನಿಜಾನಾ?; ಅಂದು ರಾತ್ರಿ ನಡೆದಿದ್ದೇನು? ಮಹಿಳೆ ಕೊಟ್ಟ ದೂರಿನಲ್ಲಿ ಏನಿದೆ?

Share :

01-11-2023

  ನಟ ದರ್ಶನ್ ವಿರುದ್ಧ ದೂರು ದಾಖಲಿಸಿದ ಅಮಿತ ಜಿಂದಾಲ್​

  ನಟ ದರ್ಶನ್ ಸಾಕಿದ ಪ್ರಾಣಿಯಿಂದಲೇ ಸುತ್ತಿಕೊಂಡ ವಿವಾದ!

  ಮಹಿಳೆ ನೀಡಿರುವ ದೂರಿನಲ್ಲಿ ಚಾಲೆಂಜಿಂಗ್ ಸ್ಟಾರ್ 2ನೇ ಆರೋಪಿ?

ಬೆಂಗಳೂರು: ಚಾಲೆಂಜಿಗ್ ಸ್ಟಾರ್ ದರ್ಶನ್​​ ವಿವಾದಗಳಿಂದ ದೂರವಿದ್ದರೂ ವಿವಾದಗಳು ಮಾತ್ರ ದರ್ಶನ್​​ರನ್ನ ಬಿಡುತ್ತಿಲ್ಲ. ಹೌದು ದರ್ಶನ್ ಸಾಕಿರುವ ನಾಯಿಗಳಿಂದ ವಿವಾದವೊಂದು ದರ್ಶನ್​​ರನ್ನ ಸುತ್ತಿಕೊಂಡಿದ್ದು, ಸಾರಥಿ ವಿರುದ್ಧ ಎಫ್​ಐಆರ್ ಕೂಡ ದಾಖಲಾಗಿದೆ. ಅಷ್ಟಕ್ಕೂ ದರ್ಶನ್​ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ನಟ ದರ್ಶನ್​​ ಪ್ರಾಣಿ ಪ್ರಿಯ. ದರ್ಶನ್ ಫಾರ್ಮಹೌಸ್​​ನಲ್ಲಿ ಇಲ್ಲದೇ ಇರುವ ಪ್ರಾಣಿಗಳೇ ಇಲ್ಲ. ಶ್ವಾನಗಳು ಕಂಡರೂ ದರ್ಶನ್​ಗೆ ಬಲು ಪ್ರೀತಿ. ಆದರೆ ಇದೀಗ ಇದೇ ಶ್ವಾನದಿಂದ ದರ್ಶನಗೆ ವಿವಾದವೊಂದು ಸುತ್ತಿಕೊಂಡಿದ್ದು, ಅಮಿತ ಜಿಂದಾಲ್​ ಅನ್ನೋ ಮಹಿಳೆ ದರ್ಶನ್ ವಿರುದ್ಧ ದೂರು ದಾಖಲಿಸಿದ್ದಾರೆ.

ಮಹಿಳೆ ಹೊಟ್ಟೆ ಮೇಲೆ ಗಾಯಗಳಾಗಿವೆ. ಆದ್ರೆ ಈ ಗಾಯಗಳಿಗೆ ಕಾರಣವಾಗಿದ್ದು, ದರ್ಶನ್​ ಸಾಕಿರುವ ನಾಯಿ. ಹೌದು ಈ ಮಹಿಳೆ ಹೆಸರು ಅಮಿತ ಜಿಂದಾಲ್ ಅಂತ ಮೂರು ದಿನಗಳ ಹಿಂದೆ ದರ್ಶನ್​ ಮನೆ ಬಳಿ ನಿಲ್ಲಿಸಿದ್ದ ಕಾರು ತೆಗೆದುಕೊಳ್ಳುವಾಗ ದರ್ಶನ್​ ಸಾಕು ನಾಯಿಗಳು ಅಮಿತ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ್ದವು. ಇದೇ ಕಾರಣಕ್ಕೆ ಅಮಿತ ಜಿಂದಾಲ್​ ಚಾಲೆಂಜಿಗ್ ಸ್ಟಾರ್ ದರ್ಶನ್ ವಿರುದ್ಧ ದೂರು ನೀಡಿದ್ದರು. ಇದೀಗ ಎಫ್​ಐಆರ್ ಕೂಡ ದಾಖಲಾಗಿದೆ.

ಸ್ಪರ್ಶ್​ ಆಸ್ಪತ್ರೆಯಲ್ಲಿ ಪಾರ್ಶ್ವವಾಯು ದಿನದ ಪ್ರಯುಕ್ತ ಕಾರ್ಯಕ್ರಮಕ್ಕೆ ವಕೀಲೆ ಅಮಿತ್ ಜಿಂದಾಲ್​ ಬಂದಿದ್ದರು. ಈ ವೇಳೆ ನಟ ದರ್ಶನ್ ಮನೆ ಬಳಿ ಕಾರು ಪಾರ್ಕಿಂಗ್ ಮಾಡಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಕಾರು ತೆಗೆದುಕೊಳ್ಳಲು ಹೋದಾಗ ದರ್ಶನ್ ಮನೆಯ ನಾಯಿಗಳನ್ನು ನೋಡಿದ್ದಾರೆ. ನಾಯಿಗಳನ್ನು ನೋಡಿಕೊಳ್ತಿದ್ದ ವ್ಯಕ್ತಿಗೆ ಈ ನಾಯಿಗಳನ್ನು ಬೇರೆಡೆ ಎಳೆದುಕೊಳ್ಳುವಂತೆ ವಕೀಲೆ ಸೂಚಿಸಿದ್ದಾರೆ. ಆದ್ರೆ ಆಕೆಯ ಮಾತುಗಳನ್ನು ದರ್ಶನ್ ಸಿಬ್ಬಂದಿ ನಿರ್ಲಕ್ಷಿಸಿದ್ದಾರೆ. ಈ ವೇಳೆ ವಕೀಲೆ ಹಾಗೂ ಆ ವ್ಯಕ್ತಿ ಜೊತೆ ವಾಗ್ವಾದ ನಡೆದಿದೆ. ಈ ಜಾಗದಲ್ಲಿ ನೀವು ಕಾರು ಪಾರ್ಕಿಂಗ್ ಮಾಡುವಂತಿಲ್ಲ ಅಂತ ಕಿರಿಕ್ ತೆಗೆದಿದ್ದಾರೆ. ಇದೇ ವೇಳೆಯಲ್ಲಿ ವಕೀಲೆ ಮೇಲೆ ಹಾರಿದ ನಾಯಿಗಳು ಆಕೆಗೆ ಕಚ್ಚಿ ಗಾಯಗೊಳಿಸಿವೆ. ನಾಯಿಗಳು ದಾಳಿ ನಡೆಸ್ತಿದ್ರೂ ಎಳೆದುಕೊಳ್ಳದೇ ಆ ವ್ಯಕ್ತಿ ಸುಮ್ಮನೆ ನಿಂತಿದ್ದ ಎಂದು ಆರೋಪ ಮಾಡಲಾಗಿದೆ.

ಹೌದು, ನಾಯಿಗಳು ಅಮಿತ್ ಮೇಲೆ ದಾಳಿ ಮಾಡಿದ್ರು ದರ್ಶನ್ ಮನೆಯ ಸಿಬ್ಬಂದಿ ಬಿಡಿಸುವ ಪ್ರಯತ್ನ ಮಾಡಿರಲ್ಲಿಲ್ಲ ಪರಿಣಾಮ ಅಮಿತ್ ಹೊಟ್ಟೆಗೆ ನಾಯಿ ಕಚ್ಚಿದ್ದು ಗಾಯಗಳಾಗಿವೆ. ಹೀಗಾಗಿ ಗಾಯಗೊಂಡ ಮಹಿಳೆ ಅಮಿತ ಜಿಂದಾಲ್, ದರ್ಶನ್ ಮನೆಯ ಸಿಬ್ಬಂದಿ ಮತ್ತು ದರ್ಶನ್ ವಿರುದ್ಧ ನೀಡಿದ್ದು, ಈಗ ಎಫ್​ಐಆರ್ ಕೂಡ ದಾಖಲಾಗಿದೆ. ನಾನು ಪಾರ್ಕಿಂಗ್ ಮಾಡುವಾಗ ಅಲ್ಲಿ ಯಾವುದೇ ಬೋರ್ಡ್​ ಇರಲಿಲ್ಲ. ಜಾಗ ಖಾಲಿ ಇತ್ತು. ಇದೇ ಕಾರಣಕ್ಕೆ ನಾನು ಕಾರ್ ಪಾರ್ಕ್​ ಮಾಡಿದ್ದು ಅಂತ ನಾಯಿಯಿಂದ ದಾಳಿಗೊಳಾದ ಮಹಿಳೆ ಅಮಿತ ಜಿಂದಾಲ್ ಆಕ್ರೋಶ ಹೊರ ಹಾಕಿದ್ದಾರೆ.ಪ್ರಾಣಿ ಪ್ರಿಯ ದರ್ಶನ್​ಗೆ ತಾವು ಸಾಕಿರುವ ನಾಯಿಗಳಿಂದಲೇ ವಿವಾದ ಸುತ್ತಿಕೊಂಡಿದೆ.

ಸದ್ಯ ರಾಜರಾಜೇಶ್ವರಿನಗರ ಠಾಣೆಯಲ್ಲಿ ದೂರು ನೀಡಲಾಗಿದ್ದು ದರ್ಶನ್ ಮನೆಯ ಸಿಬ್ಬಂದಿ ಎ1 ಹಾಗೂ ದರ್ಶನ್ ಎ2 ಆರೋಪಿ ಎಂದು ಎಫ್​ಐಆರ್ ದಾಖಲಾಗಿದೆ. ದೂರು ಕೊಟ್ಟಿರುವ ಮಹಿಳೆ ಅಮಿತರನ್ನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದ್ದು, ಶ್ವಾನ ಕಂಟಕದಿಂದ ದರ್ಶನ್ ಪಾರಾಗ್ತಾರಾ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟ ದರ್ಶನ್​ ಸಾಕು ನಾಯಿ ಕಚ್ಚಿದ್ದು ನಿಜಾನಾ?; ಅಂದು ರಾತ್ರಿ ನಡೆದಿದ್ದೇನು? ಮಹಿಳೆ ಕೊಟ್ಟ ದೂರಿನಲ್ಲಿ ಏನಿದೆ?

https://newsfirstlive.com/wp-content/uploads/2023/11/dboss-3.jpg

Load More