ನನ್ನ ಮೇಲೆ ದಾಳಿ ಮಾಡಿರುವ ಶ್ವಾನ ಯಾವ ಬ್ರೀಡ್ ಅಂತ ಗೊತ್ತಿಲ್ಲ
ದರ್ಶನ್ ವಿರುದ್ಧ ಎಫ್ಐಆರ್ ದಾಖಲಿಸಿದ ವಕೀಲೆ ಹೇಳಿದ್ದೇನು..?
ಸಿಬ್ಬಂದಿಗೆ ರಿಕ್ವೆಸ್ಟ್ ಮಾಡಿದ್ರೂ ಕೇಳಲಿಲ್ಲ, ಹೀಗಾಗಿ ನಾಯಿ ಕಡಿದವು
ಡಿ ಬಾಸ್ ಅಂತಾನೇ ಕರೆಸಿಕೊಳ್ಳೋ ನಟ ದರ್ಶನ್ಗೆ ಮತ್ತೊಂದು ವಿವಾದ ಸುತ್ತಿಕೊಂಡಿದೆ. ದರ್ಶನ್ ಮನೆ ನಾಯಿಗಳು ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿವೆ. ನಾಯಿ ದಾಳಿಗೊಳಗಾದ ಮಹಿಳೆ ಗಾಯಗೊಂಡಿದ್ದು ನಟ ದರ್ಶನ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ನಟ ದರ್ಶನ್ ಸ್ಯಾಂಡಲ್ವುಡ್ನ ಜನಪ್ರಿಯ ನಟ. ಪ್ರಾಣಿ ಪ್ರಿಯ ದರ್ಶನ್ ತಮ್ಮ ಫಾರ್ಮ್ ಹೌಸ್ನಲ್ಲಿ ಹಸು, ಎತ್ತು, ಕುದುರೆ ಸೇರಿ ಇನ್ನೂ ಕೆಲವು ಪ್ರಾಣಿ ಹಾಗೂ ಕೆಲವು ಪಕ್ಷಿಗಳನ್ನು ಸಾಕಿದ್ದಾರೆ. ದರ್ಶನ್ ತಾವು ವಾಸಿಸುವ ಆರ್.ಆರ್ ನಗರ ನಿವಾಸದಲ್ಲಿ ಕೆಲವು ನಾಯಿಗಳನ್ನು ಸಾಕಿದ್ದಾರೆ. ತಾವು ಸಾಕಿದ್ದ ನಾಯಿಗಳಿಂದಲೇ ಈಗ ದರ್ಶನ್ರನ್ನು ಮತ್ತೊಂದು ವಿವಾದಕ್ಕೆ ಸಿಲುಕಿಸಿವೆ.
ದರ್ಶನ್ ಮನೆ ಬಳಿ ಕಾರು ತೆಗೆದುಕೊಳ್ಳುವಾಗ ದಾಳಿ
ನಟ ದರ್ಶನ್ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ವಕೀಲೆ ಅಮಿತ್ ಜಿಂದಾಲ್ ಎಂಬುವರು 3 ದಿನಗಳ ಹಿಂದೆ ದರ್ಶನ್ ಮನೆ ಬಳಿ ನಿಲ್ಲಿಸಿದ್ದ ಕಾರನ್ನು ವಾಪಸ್ ತೆಗೆದುಕೊಳ್ಳುವಾಗ ದರ್ಶನ್ ಮನೆಯ ನಾಯಿಗಳು ದಾಳಿ ನಡೆಸಿವೆ. ಬೆಂಗಳೂರಿನಲ್ಲಿ ದರ್ಶನ್ ನಿವಾಸದ ಬಳಿ ಘಟನೆ ನಡೆದಿದೆ.
ಘಟನೆ ನಡೆದಿದ್ದು ಹೇಗೆ?
ಇನ್ನು ನಾಯಿಗಳ ದಾಳಿಗಳಿಂದ ವಕೀಲೆ ಹೊಟ್ಟೆ ಭಾಗದಲ್ಲಿ ಗಾಯಗಳಾಗಿವೆ. ಘಟನೆ ಬಗ್ಗೆ ವಕೀಲೆ ಅಮಿತ್ ಜಿಂದಾಲ್ ಹೇಳಿದ್ದು ಹೀಗೆ.
‘ನಾಯಿ ಹಿಡಿದುಕೊಳ್ಳುವಂತೆ ಹೇಳಿದ್ದೆ’
ಕಾರು ಪಕ್ಕದಲ್ಲೇ ತುಂಬಾ ಅಗ್ರೆಸ್ಸಿವ್ ಡಾಗ್ ಇತ್ತು. ಅದು ಯಾವ ಬ್ರೀಡ್ ಅನ್ನುವುದು ಗೊತ್ತಿಲ್ಲ. ನಾನು ಅವರಿಗೆ ರಿಕ್ವೆಸ್ಟ್ ಮಾಡಿದ್ದೆ. ಪ್ಲೀಜ್ ಹಿಡಿದುಕೊಳ್ಳಿ ಎಂದು ಹೇಳಿದ್ದೆ. ತುಂಬಾ ಸ್ಪೇಶ್ ಇತ್ತು ಅದಕ್ಕೆ ಅಲ್ಲಿ ನಾನು ಕಾರು ಪಾರ್ಕ್ ಮಾಡಿದ್ದೆ.
ಅಮಿತ್ ಜಿಂದಾಲ್, ನಾಯಿ ದಾಳಿಗೊಳಗಾದವರು
ಚಾಲೆಂಜಿಂಗ್ ಸ್ಟಾರ್, ನಟ ದರ್ಶನ್ ವಿರುದ್ಧ ಎಫ್ಐಆರ್
ಇನ್ನು ನಾಯಿ ದಾಳಿ ಪ್ರಕರಣದಲ್ಲಿ ನಟ ದರ್ಶನ್ ವಿರುದ್ಧ ವಕೀಲೆ ಅಮಿತ್ ಜಿಂದಾಲ್ ರಾಜರಾಜೇಶ್ವರಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಬಳಿಕ ಎಫ್ಐಆರ್ ದಾಖಲಾಗಿದೆ.. ಎಫ್ಐಆರ್‌ನಲ್ಲಿ ದರ್ಶನ್ ಮನೆಯ ವ್ಯಕ್ತಿ ಎ1 ಹಾಗೂ ನಟ ದರ್ಶನ್ ಎ2 ಆರೋಪಿ ಎಂದು ಉಲ್ಲೇಖಿಸಲಾಗಿದೆ.
ದರ್ಶನ್ ಮನೆಯ ನಾಯಿ ನೋಡಿಕೊಳ್ತಿದ್ದ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ರು ಅಂತ ವಕೀಲೆ ದೂರಿದ್ದಾರೆ. ಅದೇನೇ ಇರಲಿ. ನಾಯಿ ಕಡಿತದಿಂದ ಅದೆಷ್ಟೋ ಮಂದಿ ತೊಂದರೆ ಅನುಭವಿಸಿದ್ದಾರೆ. ನಾಯಿಗಳನ್ನು ಸಾಕುವವರು ಅವುಗಳಿಂದ ಬೇರೆಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಅವರ ಕರ್ತವ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ