newsfirstkannada.com

Breaking: ಬಿಜೆಪಿ ಮಾಜಿ ಸಚಿವ ಅಶ್ವಥ್ ನಾರಾಯಣ್ ವಿರುದ್ಧ FIR ದಾಖಲು..!

Share :

24-05-2023

    ಬಿಜೆಪಿ ಮಾಜಿ ಸಚಿವ ಅಶ್ವಥ್ ನಾರಾಯಣ್ ವಿರುದ್ಧ FIR

    ಅಷ್ಟಕ್ಕೂ ಅಶ್ವಥ್ ನಾರಾಯಣ್ ಹೇಳಿದ್ದೇನು..?

    ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರಿಂದ ದೂರು.!

ಮೈಸೂರು: ಮಾಜಿ ಸಚಿವ ಅಶ್ವತ್ ನಾರಾಯಣ್ ವಿರುದ್ಧ ದೇವರಾಜ ಅರಸು ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ‘ಟಿಪ್ಪುಗೆ ಹೊಡೆದಂತೆ ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕು’ ಎಂಬ ಹೇಳಿಕೆ ಸಂಬಂಧಿಸಿದಂತೆ ಅಶ್ವಥ್ ನಾರಾಯಣ್ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಅಶ್ವತ್ಥ ನಾರಾಯಣ್, ಮಂಡ್ಯದ ಸಾತನೂರು ಗ್ರಾಮದಲ್ಲಿ ಈ ಹೇಳಿಕೆ ನೀಡಿದ್ದರು. 15.02.2023 ರಂದು ಅಶ್ವತ್ಥ ನಾರಾಯಣ್ ಹೇಳಿಕೆ ನೀಡಿದ್ದರು. ಈ ಸಂಬಂಧ 17.02.2023 ರಂದು ಕಾಂಗ್ರೆಸ್​ ನಾಯಕರು ಅಶ್ವಥ್ ನಾರಾಯಣ್ ವಿರುದ್ಧ ದೂರು ದಾಖಲಿಸಿದ್ದರು. ದೂರು ದಾಖಲಾಗಿದ್ದರೂ, ಅಶ್ವಥ್ ನಾರಾಯಣ್ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿರಲಿಲ್ಲ.

ಅಶ್ವಥ್ ನಾರಾಯಣ್ ಏನ್ ಹೇಳಿದ್ದರು..?

ಮಂಡ್ಯದವರು ಮನಸು ಮಾಡಿದ್ರೆ ಏನನ್ನ ಬೇಕಾದ್ರು ಸಾಧಿಸುತ್ತಾರೆ. ಸಾಧಿಸುವಂತ ಕೆಲಸ ಮಂಡ್ಯದಿಂದ ಪ್ರಾರಂಭವಾಗಬೇಕು. ಇಲ್ಲದಿದ್ದರೆ ಟಿಪ್ಪುವಿನ ಸಿದ್ದರಾಮಯ್ಯ ಬಂದು ಬಿಡುತ್ತಾರೆ. ಟಿಪ್ಪು ಬೇಕಾ? ಸಾವರ್ಕರ್ ಬೇಕಾ? ನೀವೇ ತೀರ್ಮಾನಿಸಿ. ಟಿಪ್ಪುಗೆ ಉರಿಗೌಡ ನಂಜೇಗೌಡ ಏನ್ ಮಾಡಿದ್ರು. ಟಿಪ್ಪುವನ್ನ ಹೊಡೆದು ಹಾಕಿದ್ರು. ಅದೇ ರೀತಿ ಸಿದ್ದರಾಮಯ್ಯರನ್ನ ಹೊಡದು ಹಾಕಬೇಕು ಎಂದು ಅಶ್ವತ್ಥ್ ನಾರಾಯಣ ಹೇಳಿದ್ದರು.

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರಿಂದ ದೂರು..!

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ಅಶ್ವಥ್ ನಾರಾಯಣ್ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಸಿದ್ದರಾಮಯ್ಯರನ್ನ ಹೊಡೆದು ಹಾಕಿ ಅನ್ನೋ ಮೂಲಕ ಬಹಿರಂಗವಾಗಿ ಪ್ರಚೋದನೆ ನೀಡಿದ್ದಾರೆ. ಈ ಹಿಂದೆ ಕೊಡಗು ಜಿಲ್ಲೆಯಲ್ಲೂ ಕೊಲೆಗೆ ಯತ್ನ ನಡೆದಿತ್ತು. ಮಳೆ ಪ್ರವಾಹ ವೀಕ್ಷಣೆಗೆ ತೆರಳಿದ್ದ ವೇಳೆ‌ ಒಂದು ವರ್ಗ ಕೊಲೆಗೆ ಯತ್ನ ಮಾಡಿತ್ತು. ಮತ್ತೊಮ್ಮೆ ಸಮಾಜ ದ್ರೋಹಿ, ಕೊಲೆ‌ ಮಾಡಲು ಯತ್ನಿಸುವ ಸಾಧ್ಯತೆಗಳಿವೆ. ಹೀಗಾಗಿ ಅಶ್ವಥ್ ನಾರಾಯಣ್ ವಿರುದ್ಧ ಕೇಸ್ ದಾಖಲಿಸಿಕೊಂಡು ಕ್ರಮ ತೆಗೆದುಕೊಳ್ಳಬೇಕು ಎಂದು ಎಂ.ಲಕ್ಷ್ಮಣ್ ಆಗ್ರಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ಬಿಜೆಪಿ ಮಾಜಿ ಸಚಿವ ಅಶ್ವಥ್ ನಾರಾಯಣ್ ವಿರುದ್ಧ FIR ದಾಖಲು..!

https://newsfirstlive.com/wp-content/uploads/2023/05/New-Project-98-1.jpg

Load More