newsfirstkannada.com

ಅವಹೇಳನಕಾರಿ ಪದ ಬಳಕೆ; ರಿಯಲ್ ಸ್ಟಾರ್ ಉಪೇಂದ್ರ ಮೇಲೆ FIR​ ದಾಖಲು

Share :

13-08-2023

    ರಿಯಲ್​ ಸ್ಟಾರ್ ಉಪೇಂದ್ರ​ ಮೇಲೆ ದಾಖಲಾಯ್ತು ಎಫ್​ಐಆರ್​

    ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಂದ ದೂರು

    ಆಕ್ಷೇಪಾರ್ಹ ಹೇಳಿಕೆ ಬೆನ್ನಲ್ಲೇ ಕ್ಷಮೆಯಾಚಿಸಿದ ನಟ ಉಪೇಂದ್ರ

ಬೆಂಗಳೂರು: ಸ್ಯಾಂಡಲ್​ವುಡ್​​ ಖ್ಯಾತ ನಟ ರಿಯಲ್ ಸ್ಟಾರ್ ಉಪೇಂದ್ರ ಅವರ ಮೇಲೆ ಎಫ್ಐಆರ್​ ದಾಖಲಾಗಿದೆ. ಪರಿಶಿಷ್ಟ ಜಾತಿ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಉಪ್ಪಿ ಮೇಲೆ ಕೇಸ್​ ದಾಖಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಮದೂಸೂಧನ್ ಕೆ ಎಸ್ ಎಂಬುವವರು ದೂರು ದಾಖಲಿಸಿದ್ದಾರೆ.

ನಟ ಉಪೇಂದ್ರ ಅವರು ಆನ್​ಲೈನ್​ ಕಾರ್ಯಕ್ರಮವೊಂದರಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ನಟ ಉಪೇಂದ್ರ ಅವರ ವಿರುದ್ಧ ಸಿಕೆ (ಚೆನ್ನಮ್ಮನ ಕೆರೆ) ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದೆ.

ಕ್ಷಮಾಪಣೆ ಕೋರಿದ ಉಪ್ಪಿ

ಇನ್ನು ಈ ಕುರಿತು ನಟ ಉಪೇಂದ್ರ ತಮ್ಮ ಫೇಸ್​​​ಬುಕ್​ ಖಾತೆಯಲ್ಲಿ ಕ್ಷಮಾಪಣೆ ಕೋರಿದ್ದಾರೆ. ಇಂದು ಫೇಸ್​ಬುಕ್​​ ಹಾಗೂ ಇನ್​ಸ್ಟಾಗ್ರಾಮ್​​ ನೇರ ಪ್ರಸಾರದಲ್ಲಿ ಬಾಯಿ ತಪ್ಪಿ ಒಂದು ಗಾದೆ ಮಾತನ್ನು ಬಳಸಿದ್ದು, ಅದರಿಂದ ಹಲವರ ಭಾವನೆಗಳಿಗೆ ಧಕ್ಕೆ ಉಂಟಾಗಿರುವುದು ಕಂಡು ಬಂದ ತಕ್ಷಣವೇ ಆ ಲೈವ್ ವಿಡಿಯೋವನ್ನು ನನ್ನ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿರುತ್ತೇನೆ. ಮತ್ತು ಈ ಮಾತಿಗೆ ಕ್ಷಮೆಯಿರಲಿ ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅವಹೇಳನಕಾರಿ ಪದ ಬಳಕೆ; ರಿಯಲ್ ಸ್ಟಾರ್ ಉಪೇಂದ್ರ ಮೇಲೆ FIR​ ದಾಖಲು

https://newsfirstlive.com/wp-content/uploads/2023/08/upendra-1.jpg

Load More