ನಾಗಮಂಗಲ ಗಲಭೆ ಬಗ್ಗೆ ಸುಳ್ಳು ಮಾಹಿತಿ ಹಂಚಿಕೆ ಆರೋಪ
ಅಶೋಕ್, ಶೋಭಾ ವಿರುದ್ಧ BNS ಸೆಕ್ಷನ್ 192ರಡಿ ಕೇಸ್
ಗಲಾಟೆ ವಿರುದ್ಧ ಸಿಡಿದೆದ್ದಿದ್ದ ಕಮಲ ನಾಯಕರಿಗೆ ಕಾನೂನಿನ ಬಿಸಿ
ವಿಘ್ನೇಶ್ವರನ ವಿಸರ್ಜನಾ ಮೆರವಣಿಗೆ ವೇಳೆ ಧಗಧಗಿಸಿದ್ದ ಮಂಡ್ಯದ ನಾಗಮಂಗಲ ಪಟ್ಟಣ ಸಹಜ ಸ್ಥಿತಿಗೆ ಮರಳುತ್ತಿದೆ. ನಾಗಮಂಗಲದ ಬೆಂಕಿ ವರದಿ ಸಿದ್ಧಪಡಿಸಿರೋ ಬಿಜೆಪಿ ಸತ್ಯಶೋಧನಾ ಸಮಿತಿ ವರದಿ ನೀಡಲು ಸಜ್ಜಾಗಿದೆ. ಈ ಮಧ್ಯೆ ಗಲಭೆ ವಿರುದ್ಧ ಸಿಡಿದೆದ್ದಿದ್ದ ಕಮಲ ನಾಯಕರಿಗೆ ಕಾನೂನಿನ ಬಿಸಿ ತಟ್ಟಿದೆ. ನಕಲಿ ವಿಡಿಯೋ ಹಂಚಿಕೊಂಡಿದ್ದ ಇಬ್ಬರು ಕೇಸರಿ ಕಲಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಅಶೋಕ್, ಶೋಭಾ ಕರಂದ್ಲಾಜೆ ವಿರುದ್ಧ ಎಫ್‌ಐಆರ್
ಗಣೇಶ ವಿಸರ್ಜನೆ ವೇಳೆ ನಾಗಮಂಗಲದಲ್ಲಿ ಹೊತ್ತಿದ್ದ ಧರ್ಮ ದಂಗಲ್‌ನ ಕಿಚ್ಚು ಸದ್ಯ ತಣ್ಣಗಾಗಿದೆ. ಕಿಡಿಗೇಡಿಗಳನ್ನ ಬಂಧಿಸಿರೋ ಪೊಲೀಸರು ತನಿಖೆ ನಡೆಸ್ತಿದ್ದಾರೆ. ಕೃತ್ಯದ ಹಿಂದಿರೋ ಕಾಣದ ಕೈಗಳ ಹಿಂದೆ ಬಿದ್ದಿದ್ದಾರೆ. ಈ ಮಧ್ಯೆ ಘಟನೆಯನ್ನ ಖಂಡಿಸೋ ಭರದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾಗಮಂಗಲ ಗಲಭೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿರೋ ಆರೋಪ ಕೇಳಿಬಂದಿದೆ. ಪೇದೆಯೊಬ್ಬರ ಹೆಸರಲ್ಲಿ ದೂರು ಕೂಡಾ ದಾಖಲಾಗಿದೆ.
ಇದನ್ನೂ ಓದಿ:ನಾಗಮಂಗಲ ಪ್ರಕರಣಕ್ಕೆ ಕೇರಳ ಲಿಂಕ್.. ಕಿಡಿಗೇಡಿಗಳು ಹಾರೆ ಬಳಸಿ ಮಾಡಿದ್ದೇನು ಗೊತ್ತಾ..?
ಶೋಭಾ ವಿರುದ್ಧ ಎಫ್‌ಐಆರ್!
ನಾಗಮಂಗಲ ಗಲಭೆ ಬಗ್ಗೆ ಸುಳ್ಳು ಮಾಹಿತಿ ಹಂಚಿಕೆ ಆರೋಪದಡಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕೋಮುಗಲಭೆಗೆ ಸಂಬಂಧಿಸದ ವಿಡಿಯೋ, ಫೋಟೋ ಪೋಸ್ಟ್ ಮಾಡಿದ ಆರೋಪ ಕೇಳಿಬಂದಿದೆ. ಕಲ್ಲು ತೂರಿ, ಬೆಂಕಿ ಹಚ್ಚಿದವರನ್ನ ರಕ್ಷಿಸಲಾಗಿದೆ, ಗಣೇಶನನ್ನ ಬಂಧಿಸಲಾಗಿದೆ ಎಂದು ಶೋಭಾ ಕರಂದ್ಲಾಜೆ ಪೋಸ್ಟ್ ಹಾಕಿದ್ರು. ಬೆಂಗಳೂರಿನಲ್ಲಿ ನಡೆದಿದ್ದ ಘಟನೆಯ ವಿಡಿಯೋ ಹಾಕಿ ನಾಗಮಂಗಲದ ಘಟನೆ ಎಂದು ಶೇರ್ ಮಾಡಿದ್ರು. ಹೀಗಾಗಿ ದೊಂಬಿ ಗಲಭೆಗೆ ಪ್ರಚೋದನೆ ನೀಡಿದ ಆರೋಪಡಿ ಕೇಸ್ ದಾಖಲಾಗಿದ್ದು, ನಾಗಮಂಗಲ ಟೌನ್ ಠಾಣೆಯಲ್ಲಿ BNS ಸೆಕ್ಷನ್ 192ರಡಿ ಎಫ್‌ಐಆರ್ ದಾಖಲಾಗಿದೆ.
ಗಲಭೆ ನಡೀತಿದ್ದಂತೆ ಸ್ಥಳಕ್ಕೆ ಆರ್. ಅಶೋಕ್ ಕೂಡಾ ಭೇಟಿ ನೀಡಿದ್ರು. ಇದಕ್ಕೂ ಮುನ್ನ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಅಂತ ಆರೋಪಿಸಿ ನಾಗಮಂಗಲ ಟೌನ್ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಅಶೋಕ್ ವಿರುದ್ಧ ಎಫ್‌ಐಆರ್!
ಪಾಕಿಸ್ತಾನ್ ಜಿಂದಾಬಾದ್ ಅಂತ ಕೂಗಿದ್ದಾರೆ ಅಂತ ವಿಪಕ್ಷ ನಾಯಕ ಆರ್. ಅಶೋಕ್ ಪೋಸ್ಟ್ ಹಾಕಿದ್ರು. ಪ್ರತ್ಯಕ್ಷದರ್ಶಿಗಳೇ ಹೇಳಿದ್ದಾರೆ ಎಂದು ಪೋಸ್ಟ್ ಹಾಕಿದ್ರು. ಬೇರೆ ಕಡೆ ನಡೆದ ಎರಡು ಘಟನೆಗಳ ವಿಡಿಯೋ ಲಗತ್ತಿಸಿ ಆರ್.ಅಶೋಕ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ರು. ಹೀಗಾಗಿ ನಾಗಮಂಗಲ ಟೌನ್ ಠಾಣೆಯಲ್ಲಿ BNS ಸೆಕ್ಷನ್ 192ರಡಿ ಪೊಲೀಸರು ಸುಮೋಟೋ ಕೇಸ್ ದಾಖಲಿಸಿ ಪೊಲೀಸರು ಎಫ್‌ಐಆರ್ ಹಾಕಿದ್ದಾರೆ. ಘಟನೆಯನ್ನ ಖಂಡಿಸೋದು ಓಕೆ. ಆದ್ರೆ, ಸಾಮಾನ್ಯ ಜನರಂತೆ ಜನಪ್ರತಿನಿಧಿಗಳು ಸಿಕ್ಕಿದ್ದನ್ನೆಲ್ಲಾ ಪೋಸ್ಟ್ ಮಾಡಿದ್ರೆ ಅದು ಸಮಾಜದ ಸ್ವಾಸ್ಥ್ಯವನ್ನ ಹಾಳುಗೆಡವಿದಂತೆ. ಇನ್ಮೇಲಾದ್ರೂ ರಾಜಕಾರಣಿಗಳು ಇದರ ಸೂಕ್ಷ್ಮತೆಯನ್ನ ಅರ್ಥ ಮಾಡಿಕೊಳ್ತಾರಾ? ನೋಡ್ಬೇಕು.
ಇದನ್ನೂ ಓದಿ:‘ವ್ಯವಸ್ಥಿತ ಸಂಚು’! ನಾಗಮಂಗಲ ಪ್ರಕರಣಕ್ಕೆ ಚನ್ನಪಟ್ಟಣ ಬೈಎಲೆಕ್ಷನ್ ಲಿಂಕ್ ಕೊಟ್ಟ ಕುಮಾರಸ್ವಾಮಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ