ಸಿದ್ದರಾಮಯ್ಯ ವಿರುದ್ಧ ಹೋರಾಡ್ತಿರುವ ಸ್ನೇಹಮಯಿ ಕೃಷ್ಣ
ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಮಹಿಳೆಯಿಂದ ಗಂಭೀರ ಆರೋಪ, ಏನದು ಗೊತ್ತಾ?
ಮೈಸೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಹೋರಾಟ ಮಾಡುತ್ತಿರುವ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಂಜನಗೂಡು ಪೊಲೀಸ್ ಠಾಣೆಯಲ್ಲಿ 21/08/2024 ರಂದು ಪ್ರಕರಣ ದಾಖಲಾಗಿದೆ. ಬಿಎನ್ಎಸ್ 2023 ಅಡಿ ಪ್ರಕರಣ ದಾಖಲಾಗಿದೆ. U/s -85, 126(2), 74, 352, 351(2), 79, 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಆರೋಪ ಏನು..?
18/7/2024 ರಂದು ಕೋರ್ಟ್ ಮುಗಿಸಿಕೊಂಡು ಹೋಗುವಾಗ ಅಟ್ಯಾಕ್ ಮಾಡಿದ್ದಾರೆಂದು ಲಾವಣ್ಯ ಎಂಬ ಮಹಿಳೆ ಆರೋಪ ಮಾಡಿದ್ದಾರೆ. ಅತ್ತೆ, ಮಾವ ಹಾಗು ಅತ್ತೆ ಸಹೋದರನ ಪರವಾಗಿ ಸ್ನೇಹಮಯಿ ಕೃಷ್ಣ ಕಿರುಕುಳ ನೀಡುತ್ತಿದ್ದಾನೆ. 2020ರಲ್ಲಿ ಗಂಡ ಹೃದಯಘಾತದಿಂದ ನಿಧನ ಹೊಂದಿದ್ದಾರೆ. ಡೆತ್ ಬೆನಿಫಿಸರಿ ಹಣ ಹಾಗು ನನ್ನ ಒಡವೆ ಪಡೆಯುವ ವಿಚಾರ ನ್ಯಾಯಾಲಯದಲ್ಲಿ ಪ್ರಕರಣ ಇದೆ. ಪ್ರಕರಣ ಮುಗಿಸಿ ತಾಯಿ ಜೊತೆ ಮನೆಗೆ ಬರುವಾಗ ಅಟ್ಯಾಕ್ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಇದನ್ನೂ ಓದಿ:Exclusive: ಮೈಸೂರಲ್ಲಿ ರೇವ್ ಪಾರ್ಟಿ.. ಪೊಲೀಸರಿಂದ 50ಕ್ಕೂ ಹೆಚ್ಚು ಮಂದಿ ಬಂಧನ
ಈ ಎಫ್ಐಆರ್ನಲ್ಲಿ ಪ್ರಭ ಅವರನ್ನು A-1 ಮಾಡಲಾಗಿದೆ. ಸಿದ್ದಪ್ಪ ಅನ್ನೋರು A2 ಆಗಿದ್ದಾರೆ. ದೂರಿನಲ್ಲಿ ಸ್ನೇಹಮಯಿ ಕೃಷ್ಣ A4 ಆಗಿದ್ದಾರೆ. A3 ಆರೋಪಿ ಡಾಬಾ ಜಯಕುಮಾರ್ ಜೊತೆ ಸೇರಿ ಹಲ್ಲೆ ಮಾಡಲಾಗಿದೆ. ನನ್ನ ಹಿಡಿದು ಎಳೆದಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನನ್ನ ಹಾಗು ನನ್ನ ತಾಯಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಲಾವಣ್ಣ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ನನ್ನ ಮೇಲಿನ ಆರೋಪ ಸುಳ್ಳು
ನನ್ನ ವಿರುದ್ಧ ಮಹಿಳೆ ಮಾಡುತ್ತಿರುವುದು ಆರೋಪ ಸುಳ್ಳು ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ನನ್ನ ವಿರುದ್ಧ ಹಲವರು ಷಡ್ಯಂತ್ರ ಮಾಡುತ್ತಿದ್ದಾರೆ. ನಾನು ಜೈಲಿಗೆ ಹೋದರೂ ಸರಿ ಹೋರಾಟ ನಿಲ್ಲಿಸಲ್ಲ. 2012 ರಲ್ಲಿಯೂ ಇದೇ ರೀತಿ ಸುಳ್ಳು FIR ದಾಖಲಿಸಿ ಜೈಲಿಗೆ ಕಳುಹಿಸಿದ್ದರು. ಆಗಲೂ ಕೂಡ ನಾನು ಜೈಲಿನಿಂದಲೇ ಹೋರಾಟ ಮಾಡಿದ್ದೆ. ಆ ಮಹಿಳೆ ಮಾಡುತ್ತಿರುವ ಆರೋಪಗಳೆಲ್ಲ ಸುಳ್ಳು. ಆ ದಿನ ನಾನು ಮೈಸೂರಿನಲ್ಲಿಯೇ ಇದ್ದೆ. ಟವರ್ ಲೊಕೇಷನ್, ಸಿಸಿಟಿವಿ ದೃಶ್ಯಗಳನ್ನ ತೆಗೆಸಿ ಕ್ರಮಕೈಗೊಳ್ಳಲಿ. ಮುಡಾದ ಹಗರಣದಲ್ಲಿ ಭಾಗಿಯಾಗಿರುವವರೆಲ್ಲ ಒಟ್ಟಿಗೆ ಸೇರಿಕೊಂಡಿದ್ದಾರೆ. ಎಲ್ಲರೂ ಕೂಡ ನನ್ನನ್ನ ಮುಗಿಸುವ ಹುನ್ನಾರ ನಡೆಸಿದ್ದಾರೆ. ನನ್ನ ಹೋರಾಟವನ್ನ ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ಆಸಿಸ್ಗೆ ಈಗಲೇ ಟೆನ್ಷನ್; ಭಾರತದ ಈ ಆಟಗಾರನ ಕಟ್ಟಿಹಾಕಲು ಪಾಂಟಿಂಗ್ ಎಚ್ಚರಿಕೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ