newsfirstkannada.com

ಮಾಲೀಕರ ನಿರ್ಲಕ್ಷ್ಯದಿಂದಲೇ ಬೆಂಗಳೂರಿನಲ್ಲಿ ಹೆಚ್ಚಾಯ್ತು ಅಗ್ನಿ ಅವಘಡ; ನೀವು ಓದಲೇಬೇಕಾದ ಸ್ಟೋರಿ!

Share :

06-11-2023

    ನಗರದಲ್ಲಿ ಪ್ರತಿದಿನ ಸರಾಸರಿ 10 ಅಗ್ನಿ ಅವಘಡಗಳು ದಾಖಲು

    ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಅಗ್ನಿ ದುರಂತ ಸಂಖ್ಯೆ 12% ಏರಿಕೆ

    ಸಾಲು ಸಾಲು ಅಗ್ನಿ ಅವಘಡಗಳಿಂದ ಆಘಾತಕ್ಕೀಡಾದ ಸಿಲಿಕಾನ್ ಮಂದಿ

ಬೆಂಗಳೂರು: ಬಿಬಿಎಂಪಿ ಅಗ್ನಿ ಅವಘಡ, ಅತ್ತಿ ಬೆಲೆ ಪಟಾಕಿ ದುರಂತ, ವೀರಭದ್ರ ನಗರದಲ್ಲಿ ಅಗ್ನಿಯ ವೀರಾವೇಷ. ಹೀಗೆ ಸಾಲು ಸಾಲು ಅಗ್ನಿ ಅವಘಡಗಳಿಂದ ಸಿಲಿಕಾನ್ ಮಂದಿ ಆಘಾತಕ್ಕೀಡಾಗಿದ್ದಾರೆ. ನಗರದಲ್ಲಿ ವರ್ಷದಿಂದ ವರ್ಷಕ್ಕೆ ಅಗ್ನಿ ಅವಘಡಗಳು ಹೆಚ್ಚಾಗ್ತಿವೆ. ಅವಘಡಗಳು ಹೆಚ್ಚಾಗಲು ಕಾರಣ ಏನು ಎಂಬ ಪ್ರಶ್ನೆಗಳು ಎದುರಾಗುತ್ತಿವೆ. ಜನರ ಮೈಮೇಲೆ ಅಗ್ನಿ ನರ್ತಿಸುತ್ತಿದೆ.

ಕಟ್ಟಡಗಳು ಹೊತ್ತಿ ಉರಿಯುತ್ತಿದ್ರೆ, ವಾಹನಗಳು ಧಗ ಧಗಿಸುತ್ತಿವೆ. ಇದು ಈ ವರ್ಷ ನಗರದಲ್ಲಿ ನಡೆದ ಅಗ್ನಿ ಅನಾಹುತದ ಡೆಡ್ಲಿ ಸೀನ್​ಗಳು. ಈ ಬೆಂಕಿಯಲ್ಲಿ ಬೆಂದವರ ಕಥೆ ತಣ್ಣೀರು ತರಿಸುವಂತಿದ್ರೆ, ಇದೇ ಬೆಂಕಿ ಹತ್ತಾರು ಮನೆಗಳ ನೆಮ್ಮದಿಯ ಬೆಳಕನ್ನೇ ನಂದಿಸಿ, ಕಣ್ಣೀರಿನ‌ ದೀಪ ಉರಿಯುವಂತೆ ಮಾಡಿದೆ. ನಗರದಲ್ಲಿ ವರ್ಷದಿಂದ ವರ್ಷಕ್ಕೆ ಅಗ್ನಿ ಅವಘಡಗಳು ಹೆಚ್ಚಾಗ್ತಾನೆ ಇವೆ. ಅಗ್ನಿಶಾಮಕ ದಳದ ಅಂಕಿ-ಅಂಶಗಳ ಪ್ರಕಾರ ನಗರದಲ್ಲಿ ಪ್ರತಿದಿನ ಸರಾಸರಿ 10 ಅಗ್ನಿ ಅವಘಡಗಳು ದಾಖಲಾಗಿವೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷದ ಅಗ್ನಿ ಅವಘಡಗಳ ಸಂಖ್ಯೆ 12% ಏರಿಕೆಯಾಗಿವೆ. 2018ರಲ್ಲಿ ನಗರದಲ್ಲಿ 2808 ಅಗ್ನಿ ಅನಾಹುತಗಳು ಸಂಭವಿಸಿದ್ರೆ, 2019ರಲ್ಲಿ 3363 ಕೇಸ್ ದಾಖಲಾಗಿತ್ತು. 2020 ರಲ್ಲಿ 2409, 2021 ರಲ್ಲಿ 2515, 2022ರಲ್ಲಿ 2033, 2023 ರಲ್ಲಿ ನವೆಂಬರ್ 4ರ ತನಕ ಒಟ್ಟು 2372 ಕೇಸ್ ರಿಜಿಸ್ಟರ್ ಆಗಿವೆ. ಬೆಂಕಿ ಅವಘಡಗಳ ನಿರ್ಲಕ್ಷ್ಯ ಮತ್ತು ಸುರಕ್ಷತಾ ಮುನ್ನೆಚ್ಚರಿಕೆಗಳ ಕೊರತೆಯಿಂದಲೇ ಈ ರೀತಿಯ ದುರ್ಘಟನೆಗಳು ನಡೆಯುತ್ತಿವೆ. ರೆಸ್ಟೋರೆಂಟ್​ಗಳು, ಗೋಡೌನ್​ಗಳು, ಪಟಾಕಿ ಅಂಗಡಿಗಳು ಮತ್ತು ಹಳೆಯ ಕಟ್ಟಡಗಳು ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸುವಲ್ಲಿ ವಿಫಲವಾಗಿದೆ.

ಅಗ್ನಿಶಾಮಕ ಇಲಾಖೆಯಿಂದ ಅಗ್ನಿ ಸುರಕ್ಷತಾ ಪ್ರಮಾಣಪತ್ರ ಪಡೆಯದೇ, ಕಟ್ಟಡಗಳನ್ನು ವಾಣಿಜ್ಯ ವಹಿವಾಟು, ವಸತಿ, ಕಚೇರಿ ಸೇರಿದಂತೆ ವಿವಿಧ ಉದ್ದೇಶಕ್ಕೆ ಬಳಕೆ ಮಾಡಿದ್ದಾರೆ ಅನ್ನೋದು ವರದಿಯಾಗಿದೆ. ಒಟ್ಟಿನಲ್ಲಿ ಬಹುಮಹಡಿ ಕಟ್ಟಡಗಳ ಮಾಲೀಕರು, ಪಬ್ & ರೆಸ್ಟೋರೆಂಟ್ ಮಾಲೀಕರ ನಿರ್ಲ್ಯಕ್ಷ್ಯದಿಂದಲೇ ಈ ರೀತಿಯ ಅವಘಡಗಳು ನಡೆಯುತ್ತಿವೆ. ಆದಷ್ಟು ಬೇಗ ಈ ರೀತಿ ಅಗ್ನಿಶಾಮಕ ದಳದ ನಿಮಯವನ್ನ ಗಾಳಿಗೆ ತೂರಿರುವವರಿಗೆ ಸಂಬಂಧಪಟ್ಟ ಅಧಿಕಾರಿಗಳು ಬಿಸಿ ಮುಟ್ಟಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾಲೀಕರ ನಿರ್ಲಕ್ಷ್ಯದಿಂದಲೇ ಬೆಂಗಳೂರಿನಲ್ಲಿ ಹೆಚ್ಚಾಯ್ತು ಅಗ್ನಿ ಅವಘಡ; ನೀವು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2023/11/fire-bng.jpg

Load More