newsfirstkannada.com

ಸಿಲಿಂಡರ್​ ಸ್ಫೋಟ.. ಧಗ ಧಗ ಹೊತ್ತಿ ಉರಿದ ಮನೆ; ಆಮೇಲೇನಾಯ್ತು..?

Share :

13-11-2023

    ಬೆಳಗಾವಿಯಲ್ಲಿ ಭೀಕರ ಸಿಲಿಂಡರ್​ ಸ್ಫೋಟ

    ಧಗ ಧಗ ಹೊತ್ತಿ ಉರಿದ ಮನೆ, ಕುರಿಗಳು ಸಾವು

    ನಾಲ್ಕು ಲಕ್ಷ ಕ್ಯಾಶ್​​ ಜತೆ ಸಂಪೂರ್ಣ ಮನೆ ಭಸ್ಮ!

ಬೆಳಗಾವಿ: ಇದು ಮತ್ತೊಂದು ಅಗ್ನಿ ಅವಘಡ. ಇಲ್ಲಿ ಬೆಂಕಿಯಲ್ಲಿ ಧಗಧಗಿಸಿದ್ದು ಕೇವಲ ಮನೆಯಲ್ಲ.. ರೈತನೊಬ್ಬನ ಬದುಕು.. ಆತನ ಕನಸು. ಈ ಅವಘಡ ಸಂಭವಿಸಿರೋದು ಬೆಳಗಾವಿ ತಾಲೂಕಿನ ಬಸವನಕುಡಚಿ ಗ್ರಾಮದಲ್ಲಿ.

ಸಿಲಿಂಡರ್ ಸ್ಫೋಟದಿಂದ ಇಡೀ ಮನೆಗೆ ಬೆಂಕಿ ಆವರಿಸಿ ಧಗಧಗನೆ ಹೊತ್ತಿ ಉರಿದಿದೆ. ಹಬ್ಬದ ಸಂದರ್ಭದಲ್ಲಿ ಟ್ರ್ಯಾಕ್ಟರ್ ಖರೀದಿಸಬೇಕು ಅಂತ ರೈತ ಅಭಿಷೇಕ್ ಕೌಲಗಿ, ಬ್ಯಾಂಕ್​​ನಿಂದ 4 ಲಕ್ಷ ರೂ. ಹಣ ತಂದು ಮನೆಯಲ್ಲಿಟ್ಟಿದ್ರು. ಆದ್ರೆ ಗ್ಯಾಸ್ ಸಿಲಿಂಡರ್ ಸ್ಫೋಟಿಸಿ ಆ ಹಣವೂ ಸೇರಿದಂತೆ ಎಲ್ಲವೂ ಬೆಂಕಿಗಾಹುತಿಯಾಗ್ಬಿಟ್ಟಿದೆ.

ಮನೆಯ ಆವರಣದಲ್ಲಿದ್ದ ನಾಲ್ಕು ಕುರಿಮರಿಗಳು ಸಜೀವ ದಹನವಾಗಿವೆ. ಅದೃಷ್ಟವಶಾತ್ ಸಿಲಿಂಡರ್ ಸ್ಫೋಟಿಸಿದಾಗ ಮನೆಯಲ್ಲಿ ಯಾರೂ ಇರಲಿಲ್ಲ, ಹೀಗಾಗಿ ಪ್ರಾಣ ಹಾನಿ ಸಂಭವಿಸಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಲಿಂಡರ್​ ಸ್ಫೋಟ.. ಧಗ ಧಗ ಹೊತ್ತಿ ಉರಿದ ಮನೆ; ಆಮೇಲೇನಾಯ್ತು..?

https://newsfirstlive.com/wp-content/uploads/2023/11/Fire_Belagavi.jpg

Load More