newsfirstkannada.com

VIDEO: ಧಗಧಗನೇ ಹೊತ್ತಿ ಉರಿದ ಕೆಮಿಕಲ್ ಗೋಡೌನ್‌; ಆರು ಮಂದಿ ಸಜೀವ ದಹನ

Share :

13-11-2023

    ಐದನೇ ಮಹಡಿಯಲ್ಲಿದ್ದ ಕೆಮಿಕಲ್ ಗೋಡೌನ್‌ನಲ್ಲಿ ಕಾಣಿಸಿಕೊಂಡ ಬೆಂಕಿ

    ಗೋಡೌನ್‌ ಬೆಂಕಿಯ ಜ್ವಾಲೆಯಿಂದ ಅಕ್ಕ, ಪಕ್ಕದ ಹಲವು ಮನೆಗಳಿಗೂ ಹಾನಿ

    ನಾಂಪಲ್ಲಿ ಬಜಾರ್‌ಘಾಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಅವಘಡ

ಹೈದರಾಬಾದ್‌: ಕೆಮಿಕಲ್ ಗೋಡೌನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಆರು ಮಂದಿ ದಾರುಣವಾಗಿ ಸಾವನ್ನಪ್ಪಿರೋ ದಾರುಣ ಘಟನೆ ತೆಲಂಗಾಣದ ನಾಂಪಲ್ಲಿಯಲ್ಲಿ ನಡೆದಿದೆ.
ನಾಂಪಲ್ಲಿಯ ಬಜಾರ್‌ಘಾಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಐದನೇ ಮಹಡಿಯಲ್ಲಿದ್ದ ಕೆಮಿಕಲ್ ಗೋಡೌನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಕಟ್ಟಡವೇ ನೋಡ, ನೋಡುತ್ತಿದ್ದಂತೆ ಹೊತ್ತಿ ಉರಿದಿದೆ.

ಡೀಸೆಲ್‌ ಡ್ರಮ್ಸ್‌ ಗೋಡೌನ್‌ ಧಗಧಗನೇ ಹೊತ್ತಿ ಉರಿದಿದ್ದು ಬೆಂಕಿ ನಂದಿಸೋದು ಸವಾಲಾಗಿತ್ತು. ಅಪಾರ್ಟ್‌ಮೆಂಟ್ ಅಕ್ಕ, ಪಕ್ಕ ಹಲವಾರು ಮನೆಗಳು ಇರುವುದರಿಂದ ಸ್ಥಳೀಯ ನಿವಾಸಿಗಳು ಭಯಭೀತಗೊಂಡಿದ್ದರು.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗೋಡೌನ್ ಬೆಂಕಿ ಹಾರಿಸಲು ಹರಸಾಹಸ ಪಟ್ಟಿದ್ದಾರೆ. ಅಗ್ನಿ ಅವಘಡದಲ್ಲಿ ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಡಿಸಿಪಿ ವೆಂಕಟೇಶ್ವರ್ ರಾವ್ ಮಾಹಿತಿ ನೀಡಿದ್ದಾರೆ. ನಾಂಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ಧಗಧಗನೇ ಹೊತ್ತಿ ಉರಿದ ಕೆಮಿಕಲ್ ಗೋಡೌನ್‌; ಆರು ಮಂದಿ ಸಜೀವ ದಹನ

https://newsfirstlive.com/wp-content/uploads/2023/11/Hyderabad-Fire.jpg

Load More