newsfirstkannada.com

ಶಾರ್ಟ್​ ಸರ್ಕ್ಯೂಟ್​​.. ಧಗ ಧಗ ಹೊತ್ತಿ ಉರಿದ ಅಂಗಡಿಗಳು.. ಅಸಲಿಗೆ ಆಗಿದ್ದೇನು..?

Share :

11-11-2023

    ಶಾರ್ಟ್ ಸರ್ಕ್ಯೂಟ್‌, ಮೂರು ಅಂಗಡಿ ಸುಟ್ಟು ಭಸ್ಮ

    ಧಗಧಗ.. ಧಗಧಗ.. ಪಟಾಕಿ ಅಂಗಡಿಯಲ್ಲಿ ಬೆಂಕಿ..!

    ಅಕ್ಕಪಕ್ಕದ ಅಂಗಡಿಗಳಿಗೂ ಬೆಂಕಿ ಹಬ್ಬಿ ಅವಘಡ

ಹೈದರಾಬಾದ್​: ಇಲ್ಲಿನ ರಾಜೇಂದ್ರ ನಗರದಲ್ಲಿರೋ ಪಟಾಕಿ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಇದರ ಪರಿಣಾಮ ಪಟಾಕಿ ಅಂಗಡಿಯ ಅಕ್ಕಪಕ್ಕದ ಅಂಗಡಿಗಳಿಗೂ ಬೆಂಕಿ ಹಬ್ಬಿದ್ದು ಒಟ್ಟು ಮೂರು ಅಂಗಡಿಗಳು ಸುಟ್ಟು ಹೋಗಿವೆ.

ಈ ಬೆಂಕಿಯ ಜ್ವಾಲೆ ಪಟಾಕಿ ಅಂಗಡಿ ಪಕ್ಕದ ಫುಡ್ ಕೋರ್ಟ್‌ಗೂ ಆವರಿಸಿತ್ತು. ಇನ್ನು, ಈ ಬೆಂಕಿ ಅವಘಡಕ್ಕೆ ಕಾರಣ ಸಿಲಿಂಡರ್ ಸ್ಫೋಟ. ಸ್ಫೋಟದ ಸದ್ದಿಗೆ ಅಕ್ಕಪಕ್ಕದ ಅಪಾರ್ಟ್‌ಮೆಂಟ್ ನಿವಾಸಿಗಳು ಭಯಭೀತಗೊಂಡಿದ್ರು.

ಇನ್ನು, ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸಿದ್ದಾರೆ. ಅದೃಷ್ಟವಶಾತ್, ಅಂಗಡಿಗಳು ಖಾಲಿ ಇದ್ದ ಕಾರಣ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾರ್ಟ್​ ಸರ್ಕ್ಯೂಟ್​​.. ಧಗ ಧಗ ಹೊತ್ತಿ ಉರಿದ ಅಂಗಡಿಗಳು.. ಅಸಲಿಗೆ ಆಗಿದ್ದೇನು..?

https://newsfirstlive.com/wp-content/uploads/2023/11/Fire-accident_123.jpg

Load More