ಚಾಮರಾಜಪೇಟೆ ಆನಂದಪುರ ವಿನಾಯಕ ಟಾಕೀಸ್ ಬಳಿ ಅಗ್ನಿ ದುರಂತ
ಈ ಅನಾಹುತದಲ್ಲಿ ಓರ್ವ ಮಹಿಳೆಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು
ಬೆಂಕಿಗೆ ಸುಟ್ಟು ಕರಕಲಾದ ಡೆಕೋರೇಷನ್ ಸ್ಪಂಜ್ ಹಾಗೂ ಹಲವು ವಸ್ತುಗಳು!
ಬೆಂಗಳೂರು: ಗಣೇಶ ಹಬ್ಬದ ಸಾಮಗ್ರಿ ಇಟ್ಟಿದ್ದ ಗೋಡೌನ್ವೊಂದಕ್ಕೆ ದಿಢೀರ್ ಬೆಂಕಿ ಬಿದ್ದಿರೋ ಘಟನೆ ಚಾಮರಾಜಪೇಟೆಯ ಆನಂದಪುರದ ವಿನಾಯಕ ಟಾಕೀಸ್ ಬಳಿ ನಡೆದಿದೆ. ಇಂದು ಗೋಡೌನ್ನಲ್ಲಿ ಬೆಂಕಿ ಹೊತ್ತಿ ಉರಿದಿದ್ದು, ಡೆಕೋರೇಷನ್ ಸ್ಪಂಜ್ ಸೇರಿದಂತೆ ಹಲವು ವಸ್ತುಗಳು ಸುಟ್ಟು ಕರಕಲಾಗಿವೆ.
ಇನ್ನೂ, ದೊಡ್ಡ ಮಟ್ಟದಲ್ಲಿ ಬೆಂಕಿ ಅವರಿಸಿಕೊಳ್ಳುತ್ತಿದ್ದಂತೆ ಗೋಡೌನ್ ಅಕ್ಕ ಪಕ್ಕದಲ್ಲಿದ್ದ ಗುಡಿಸಿಲು ಹಾಗೂ ನಾಲ್ಕು ಮನೆಗಳು ಬೆಂಕಿಗೆ ಅಹುತಿಯಾಗಿವೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಎರಡು ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದರು.
ಇದರ ಜೊತೆಗೆ ಗೋಡೌನ್‌ಗೆ ಬೆಂಕಿ ಬಿದ್ದ ಪರಿಣಾಮ ಮನೆಯಲ್ಲಿದ್ದ ಒಟ್ಟು ನಾಲ್ಕು ಸಿಲಿಂಡರ್ ಏಕಾಏಕಿ ಸ್ಫೋಟಗೊಂಡಿದೆ. ಹೀಗಾಗಿ ಅದೇ ಸಂದರ್ಭದಲ್ಲಿ ಮನೆಯಲ್ಲಿ ಭಾಗ್ಯ ಎಂಬುವವರಿಗೆ ಗಂಭೀರವಾಗಿ ಗಾಯಗಳಾಗಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ