newsfirstkannada.com

BBMP ಕಚೇರಿಯಲ್ಲಿ ಬೆಂಕಿ; 3 ಮಂದಿ ಗಂಭೀರ, 6 ಮಂದಿಗೆ ಗಾಯ; 3 ಪ್ರತ್ಯೇಕ ಆಯಾಮಗಳಲ್ಲಿ ತನಿಖೆ

Share :

12-08-2023

    ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ಸಿದ್ದು, ಡಿಸಿಎಂ ಡಿಕೆಶಿ

    ಗಾಯಾಳುಗಳ ಆರೋಗ್ಯ ವಿಚಾರಿಸಿ ನಾಯಕರ ಸಾಂತ್ವನ

    ಐಪಿಸಿ ಸೆಕ್ಷನ್ 337,338 ಅಡಿ ಎಫ್ಐಆರ್ ದಾಖಲು

ನಿನ್ನೆ ಉದ್ಯಾನ ನಗರಿಯ ಕಡತಗಳ ಖಜಾನೆಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿ 9 ನೌಕರರ ಮೈಸೋಕಿ ಆತಂಕ ಸೃಷ್ಟಿಸಿತ್ತು. ಸದ್ಯ ಘಟನೆಯಲ್ಲಿ ಗಾಯಗೊಂಡವರು ಸೇಫ್​ ಅನ್ನೋ ಸುದ್ದಿ ಹೊರಬಿದ್ದಿದ್ದು, ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸಿಎಂ, ಡಿಸಿಎಂ ಧೈರ್ಯ ತುಂಬಿದ್ದಾರೆ. ಆದ್ರೆ ದುರಂತದ ಬಳಿಕ ಹಲವು ಅನುಮಾನ, ಚರ್ಚೆಗಳು ಹುಟ್ಟಿಕೊಂಡಿವೆ..

ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಧಗಧಗಿಸಿದ್ದ ಅಗ್ನಿಯ ಜ್ವಾಲೆ ಆತಂಕದ ಜೊತೆ ಹಲವು ಅನುಮಾನಗಳನ್ನ ಹುಟ್ಟುಕಾಕಿತ್ತು. ಸಿಲಿಕಾನ್​ ಸಿಟಿಯ ಹೃದಯ ಭಾಗದಲ್ಲಿರೋ ಬಿಬಿಎಂಪಿ ಕಚೇರಿಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿ 9 ನೌಕರರ ಮೈಸೋಕಿತ್ತು. ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿ ಇನ್ನುಳಿದವರು ಸುಟ್ಟಗಾಯಗಳಿಂದ ನರಳಾಡಿದ್ರು. ಬಳಿಕ ಅವರನ್ನ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್​​ ಮಾಡಲಾಗಿತ್ತು.

ಗುಣನಿಯಂತ್ರಣ ಕೊಠಡಿಯಲ್ಲಿ ಕಾಣಿಸಿಕೊಂಡ ಬೆಂಕಿ
ಗುಣನಿಯಂತ್ರಣ ಕೊಠಡಿಯಲ್ಲಿ ಕಾಣಿಸಿಕೊಂಡ ಬೆಂಕಿ

ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ, ಡಿಸಿಎಂ!

ಬಿಬಿಎಂಪಿಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಗಾಯಗೊಂಡ ನೌಕರರ ಆರೋಗ್ಯವನ್ನ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್​ ವಿಚಾರಿಸಿದ್ರು. ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ನಾಯಕರು ಕೆಲ ಕಾಲ ಗಾಯಾಳುಗಳ ಜೊತೆ ಮಾತುಕತೆ ನಡೆಸಿದ್ರು. ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಘಟನೆ ಬಗ್ಗೆ ತನಿಖೆ ನಡೆಸಲು ಪಾಲಿಕೆ ಆಯುಕ್ತರಿಗೆ ಸೂಚಿಸಿರೋದಾಗಿ ತಿಳಿಸಿದ್ರು.

 ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್​

‘ಗಾಯಾಳುಗಳಿಗೆ ಬೆಸ್ಟ್​ ಟ್ರೀಟ್ಮೆಂಟ್ ಕೊಡಲು ಹೇಳಿದ್ದೇವೆ’

ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಡಿಸಿಎಂ ಡಿ.ಕೆ ಶಿವಕುಮಾರ್​ ಸಹ ಟ್ರೀಟ್ಮೆಂಟ್​ ಬಗ್ಗೆ ಮಾತನಾಡಿದ್ರು. ಗಾಯಾಳು ಅಧಿಕಾರಿಗಳಿಗೆ ಬೆಸ್ಟ್ ಟ್ರೀಟ್ಮೆಂಟ್​ ನೀಡಲು ವೈದ್ಯರಿಗೆ ತಿಳಿಸಿದ್ದೇವೆ.. ಘಟನೆ ಬಗ್ಗೆ ಪ್ರತ್ಯೇಕವಾಗಿ 3 ಆಯಾಮಗಳಲ್ಲಿ ತನಿಖೆ ನಡೆಯಲಿದೆ ಅಂತ ತಿಳಿಸಿದ್ರು.

ಘಟನೆ ಬಗ್ಗೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ಚರ್ಚೆ ಮತ್ತು ತನಿಖೆಗೆ ಆದೇಶ

ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ ಬಿಬಿಎಂಪಿ ಕಮಿಷನರ್​

ಬಿಬಿಎಂಪಿಯ ಅಗ್ನಿ ದುರಂತದ ಬಗ್ಗೆ ತಾಂತ್ರಿಕ ತನಿಖೆ ನಡೆಸಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶಿಸಿದ್ದಾರೆ. ಬಿಬಿಎಂಪಿಯ ಇಂಜಿನಿಯರ್ ಇನ್ ಚೀಫ್‌ ಪ್ರಹ್ಲಾದ್ ನೇತೃತ್ವದಲ್ಲಿ ತನಿಖೆ ನಡೆಸಿ ಆಗಸ್ಟ್ 31ರೊಳಗೆ ತಾಂತ್ರಿಕ ವಿಚಾರಣಾ ವರದಿಯನ್ನ ಸಲ್ಲಿಸಲು ಸೂಚಿಸಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್​

ಒಟ್ಟಿನಲ್ಲಿ ಬಿಬಿಎಂಪಿ ನೌಕರರ ನೋವಿಗೆ ಕಾರಣಾವಾದ ಬೆಂಕಿ, ಸದ್ಯ ಹಲವು ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ. ಅಷ್ಟಕ್ಕೂ ಬಿಬಿಎಂಪಿ ಕಚೇರಿಯ ಗುಣ ನಿಯಂತ್ರಣ ಪ್ರಯೋಗಾಲಯ ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದಾದ್ರೂ ಹೇಗೆ. ಘಟನೆ ಹಿಂದೆ ಕಾಣದ ಕೈಗಳ ಕೈವಾಡ ಇದೀಯಾ ಅನ್ನೋದು ತನಿಖೆ ಬಳಿಕವಷ್ಟೇ ಬೆಳಕಿಗೆ ಬರಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBMP ಕಚೇರಿಯಲ್ಲಿ ಬೆಂಕಿ; 3 ಮಂದಿ ಗಂಭೀರ, 6 ಮಂದಿಗೆ ಗಾಯ; 3 ಪ್ರತ್ಯೇಕ ಆಯಾಮಗಳಲ್ಲಿ ತನಿಖೆ

https://newsfirstlive.com/wp-content/uploads/2023/08/DKS-1.jpg

Load More