newsfirstkannada.com

ಕನ್ನಡ‌ ಇಂಡಸ್ಟ್ರಿಯಲ್ಲೂ ಶುರುವಾಯ್ತು ಢವಢವ.. CM ಭೇಟಿಯಾಗಿ 10 ಬೇಡಿಕೆ ಇಟ್ಟ ಫೈರ್..!

Share :

Published September 5, 2024 at 12:43pm

Update September 8, 2024 at 7:28am

    ವೃತ್ತಿ ಸಮಾನತೆ, ಘನತೆ ಸೇರಿದಂತೆ ಹಲವು ಬೇಡಿಕೆಗಳನ್ನಿಟ್ಟ ಫೈರ್ ಟೀಂ

    ಸೆಟ್​ನಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಸೌಲಭ್ಯಗಳನ್ನು ಒದಗಿಸಬೇಕು!

    FIRE ಸಿದ್ದರಾಮಯ್ಯರ ಮುಂದೆ ಇಟ್ಟಿರುವ ಡಿಮ್ಯಾಂಡ್ ಏನೇನು?

ಕೇರಳದ ಮಲಯಾಳಂ ಚಿತ್ರರಂಗದಲ್ಲಿ ಮೀಟೂ ಪ್ರಕರಣ ಬೆನ್ನಲ್ಲೇ ಸ್ಯಾಂಡಲ್​ವುಡ್​ನಲ್ಲೂ ಬಿರುಗಾಳಿ ಎಬ್ಬಿದೆ. ಕೇರಳದ ಸಿನಿಮಾ ಇಂಡಸ್ಟ್ರಿಯಲ್ಲಿ ಹೇಮಾ ಕಮಿಟಿ ರಚನೆಯಾದ ಹಾಗೇ ನಮ್ಮಲ್ಲೂ ಕನ್ನಡ ಚಲನ ಚಿತ್ರರಂಗದಲ್ಲೂ ಅಂತಹದೇ ಕಮಿಟಿ ರಚನೆ ಆಗಬೇಕು ಅನ್ನೋ ಕೂಗು ಕೇಳಿ ಬಂದಿದೆ.

ಇದನ್ನೂ ಓದಿ: ‘ನಮ್ಮ ಇಂಡಸ್ಟ್ರಿಯಲ್ಲಿ ನಾನು ನೋಡಿದಂತೆ..’ ಸ್ಯಾಂಡಲ್​ವುಡ್​ #MeToo ಬಗ್ಗೆ ತನಿಷಾ ಹೇಳಿದ್ದೇನು?

ಕೇರಳದ ಹೇಮಾ ಸಮಿತಿಯಂತೆ ಕರ್ನಾಟಕದಲ್ಲೂ ಸಮಿತಿ ಮಾಡಲು ಒತ್ತಾಯ ಕೇಳಿಬಂದ ಬೆನ್ನಲ್ಲೇ ‘ಫೈರ್’ ಟೀಂ ಸಿಎಂ ಸಿದ್ದರಾಮಯ್ಯನವರಿಗೆ ಭೇಟಿ ಮಾಡಿದ್ದಾರೆ. ಈ ವೇಳೆ ನಟ ಚೇತನ್ ಅಹಿಂಸಾ, ಕವಿತಾ ಲಂಕೇಶ್, ನಟಿ ನೀತು, ಶೃತಿ ಹರಿಹರನ್ ಸೇರಿದಂತೆ ಇನ್ನೂ ಕೆಲವರು ಸಿಎಂ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ.

ಆಗ್ರಹಗಳೇನು?

ಸೆಟ್​ನಲ್ಲಿ ಹೆಣ್ಣುಮಕ್ಕಳಿಗೆ ಸಮಾನ ಸೌಲಭ್ಯ ಒದಗಿಸಬೇಕು. ಹೆಣ್ಣು ಎಂಬ ಕಾರಣಕ್ಕೇ ಹಲವು ರೀತಿಯಲ್ಲಿ ದೌರ್ಜನ್ಯ ನಡೆಯುತ್ತಿದೆ. ಅದನ್ನ ಮೊದಲು ತಪ್ಪಿಸಬೇಕು. ನಟಿಯರೂ ಸೇರಿದಂತೆ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಎಲ್ಲ ಹೆಣ್ಣು ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಮತ್ತು ಸಮಾನತೆ. ಸುರಕ್ಷಿತ ವ್ರತ್ತಿಪರ ವಾತಾವರಣ ನಿರ್ಮಿಸುವ ದಿಕ್ಕಿನಲ್ಲಿ ಕೇರಳದ ನ್ಯಾ.ಹೇಮ ಸಮಿತಿಯ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ನಿವೃತ್ತ ನ್ಯಾಯಾಧೀಶರ ನೇತ್ರತ್ವದಲ್ಲಿ ಸಮಿತಿ ರಚನೆ ಆಗಬೇಕು. ಕನ್ನಡ ಚಿತ್ರರಂಗದಲ್ಲಿನ ಸ್ಥಿತಿಗತಿಗಳ ಅಧ್ಯಯನ ನಡೆಸಿ, ನಿಗದಿತ ಕಾಲಮಿತಿಯಲ್ಲಿ ವರದಿ ಪಡೆದು, ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು. ಲಿಂಗಸಂವೇದನೆಯುಳ್ಳವರ ನೇತೃತ್ವದಲ್ಲಿಯೇ ತನಿಖೆಯಾಗಬೇಕು. ಹೆಣ್ಮಕ್ಕಳನ್ನು ಕೀಳಾಗಿ, ಅಸಮಾನತೆಯಿಂದ ಕಂಡ ಪ್ರಮುಖರನ್ನ ತನಿಖೆಗೆ ಒಳಪಡಿಸಬೇಕು. ಅವಕಾಶಕ್ಕಾಗಿ ಕಮಿಟ್​ಮೆಂಟ್ ಇರುತ್ತೆ ಎಂದು ದೌರ್ಜನ್ಯ ಎಸಗಿದವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಶಿಕ್ಷೆಗೆ ತನಿಖೆ ನಡೆಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನ್ನಡ‌ ಇಂಡಸ್ಟ್ರಿಯಲ್ಲೂ ಶುರುವಾಯ್ತು ಢವಢವ.. CM ಭೇಟಿಯಾಗಿ 10 ಬೇಡಿಕೆ ಇಟ್ಟ ಫೈರ್..!

https://newsfirstlive.com/wp-content/uploads/2024/09/metoo.jpg

Load More