newsfirstkannada.com

ನೂತನ ಕಾನೂನು ಅಡಿಯಲ್ಲಿ ಮೊದಲ ಕೇಸ್ ದಾಖಲು.. ಯಾವ ಐಪಿಸಿ ಸೆಕ್ಷನ್ ಏನೆಂದು ಬದಲಾಗಿದೆ..?

Share :

Published July 1, 2024 at 10:58am

    ದೇಶದಾದ್ಯಂತ ಇವತ್ತಿನಿಂದ ಹೊಸ ಕ್ರಿಮಿನಲ್ ಕಾನೂನು ಜಾರಿ

    ಜಾರಿ ಆಗ್ತಿದ್ದಂತೆಯೇ ದೆಹಲಿಯಲ್ಲಿ ಮೊದಲ ಎಫ್​ಐಆರ್ ದಾಖಲು

    ಬ್ರಿಟಿಷರ ಕಾಲದ ಕಾನೂನುಗಳಿಗೆ ಗುಡ್​​ಬೈ ಹೇಳಿದ ಭಾರತ

ಬ್ರಿಟಿಷರ ಕಾಲದ ಮೂರು ಕ್ರಿಮಿನಲ್ ಕಾನೂನುಗಳಿಗೆ ಗುಡ್​ಬೈ ಹೇಳಿದ ಮೊದಲ ದಿನವೇ ಮೊದಲ ಕೇಸ್ ದಾಖಲಾಗಿದೆ. ದೆಹಲಿಯ ಕಮಲಾ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ (Kamla Market Police Station) ಬೀದಿಬದಿ ವ್ಯಾಪಾರಿಯ ವಿರುದ್ಧ ದಾಖಲಾಗಿದೆ.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 285 ಅಡಿಯಲ್ಲಿ ಕೇಸ್​​ ದಾಖಲಾಗಿದೆ. ರೈಲು ನಿಲ್ದಾಣದ ಬಳಿಯ ಕಾಲುವೆ ನಿರ್ಮಾಣಕ್ಕೆ ಅಡ್ಡಿಪಡಿಸಿದ ಆರೋಪದ ಅಡಿಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ:ದೇಶದಲ್ಲಿ ಇಂದಿನಿಂದ ಮೂರು ಹೊಸ ಕ್ರಿಮಿನಲ್ ಕಾನೂನು ಜಾರಿ.. ಯಾವುದು ಏನಾಗಿದೆ..?

ನೂತನ ಕಾನೂನು..!
ದೇಶದಲ್ಲಿ ಇಂದಿನಿಂದ ಮೂರು ಕ್ರಿಮಿನಲ್ ಕಾನೂನುಗಳು ಜಾರಿಗೊಳ್ಳುತ್ತಿವೆ. ಬ್ರಿಟಿಷರ ಕಾಲದಿಂದ ಜಾರಿಯಲ್ಲಿದ್ದ ಐಪಿಸಿ (Indian Penal Code), ಸಿಆರ್​​ಪಿಸಿ (Criminal Procedure Code) ಹಾಗೂ ಇಂಡಿಯನ್​ ಎವಿಡೆನ್ಸ್​ ಆ್ಯಕ್ಟ್​​ಗೆ ಬದಲಿಗೆ ಹೊಸ ಕಾನೂನು ಜಾರಿಗೆ ಬರುತ್ತಿವೆ. ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ 1860ರಲ್ಲಿ ಜಾರಿ ಮಾಡಿದ್ದ ಐಪಿಸಿ ಬದಲಿಗೆ ಭಾರತೀಯ ನ್ಯಾಯ ಸಂಹಿತೆ (BNS) ಎಂದು, 1898ರಲ್ಲಿ ಜಾರಿಗೆ ಬಂದಿದ್ದ CrPC ಬದಲಿಗೆ ಭಾರತೀಯ ನಾಗರಿಕ ರಕ್ಷಣಾ ಸಂಹಿತೆ (BNSS) ಎಂದು ಹಾಗೂ 1872ರಲ್ಲಿ ಬಂದಿದ್ದ ಇಂಡಿಯನ್ ಎವಿಡೆನ್ಸ್​ ಆ್ಯಕ್ಟ್​​ ಬದಲಾಗಿ ಭಾರತೀಯ ಸಾಕ್ಷ್ಯ ಕಾಯ್ದೆ ಎಂದು ಮಾಡಲಾಗಿದೆ. ಈ ಮೂರು ಹೊಸ ಕಾಯ್ದೆಗೆ ಕಳೆದ ವರ್ಷ ಸಂಸತ್​​ನಲ್ಲಿ ಅನುಮೋದನೆ ದೊರೆತಿತ್ತು. ಡಿಸೆಂಬರ್ 25 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮಸೂದೆಗಳಿಗೆ ಅಂಕಿತ ಹಾಕಿದ್ದಾರೆ. ಹಿಟ್ ಆ್ಯಂಡ್ ರನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಬಂಧನೆಗಳನ್ನು ಮಾತ್ರ ಸದ್ಯಕ್ಕೆ ಜಾರಿಗೊಳಿಸದೆ ಇರಲು ಸರ್ಕಾರ ನಿರ್ಧಾರ ಮಾಡಲಾಗಿದೆ.

ಯಾವ ಸೆಕ್ಷನ್ ಹೇಗೆ ಬದಲಾಗಿದೆ..?

  • IPC ಸೆಕ್ಷನ್ 302 ಕೊಲೆ
  • BNS ಸೆಕ್ಷನ್ ‌101 ಕೊಲೆ
  • IPC ಸೆಕ್ಷನ್ ವರದಕ್ಣಿಣೆ ಕಿರುಕುಳದಿಂದ ಸಾವು 304 (B)
  • BNS ಸೆಕ್ಷನ್ 79
  • IPC ಸೆಕ್ಷನ್‌ 376 ಅತ್ಯಾಚಾರ
  • BNS ಸೆಕ್ಷನ್‌ 63, 64
  • IPC ಸೆಕ್ಷನ್‌ ವಂಚನೆ 420
  • BNS ಸೆಕ್ಷನ್‌ ವಂಚನೆ 316
  • IPC ಸೆಕ್ಷನ್‌ ಲೈಂಗಿಕ ಕಿರುಕುಳ 354(A)
  • BNS ಸೆಕ್ಷನ್‌ ಲೈಂಗಿಕ ಕಿರುಕುಳ (74)
  • IPC ಸೆಕ್ಷನ್‌ ಮಹಿಳೆಯ ಮೇಲೆ ಹಲ್ಲೆ 354 (b)
  • BNS ಸೆಕ್ಷನ್‌ ಮಹಿಳೆಯ ಮೇಲೆ ಹಲ್ಲೆ 75
  • IPC ಸೆಕ್ಷನ್‌ ಕಳ್ಳತನ 378
  • BNS ಸೆಕ್ಷನ್‌ ಕಳ್ಳತನ 301
  • IPC ಸೆಕ್ಷನ್‌ ಮಾನನಷ್ಟ ಮೊಕದ್ದಮೆ 499
  • BNS ಸೆಕ್ಷನ್‌ ಮಾನನಷ್ಟ ಮೊಕದ್ದಮೆ – 354
  • IPC ಸೆಕ್ಷನ್‌ ಮಾನವ ಕಳ್ಳಸಾಗಾಣೆ 370
  • BNS ಸೆಕ್ಷನ್‌ ಮಾನವ ಕಳ್ಳಸಟಗಣೆ 141
  • IPC ಸೆಕ್ಷನ್‌ (124) B ದೇಶದ್ರೋಹ
  • BNS ಸೆಕ್ಷನ್‌ 150 ದೇಶದ್ರೋಹ

ಇದನ್ನೂ ಓದಿ:3 ಹೊಸ ಕ್ರಿಮಿನಲ್ ಕಾನೂನು ಜಾರಿ.. ಇವು ನ್ಯಾಯ ವ್ಯವಸ್ಥೆ, ನಾಗರಿಕರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೂತನ ಕಾನೂನು ಅಡಿಯಲ್ಲಿ ಮೊದಲ ಕೇಸ್ ದಾಖಲು.. ಯಾವ ಐಪಿಸಿ ಸೆಕ್ಷನ್ ಏನೆಂದು ಬದಲಾಗಿದೆ..?

https://newsfirstlive.com/wp-content/uploads/2024/07/BNS.jpg

Load More