ಇದು ಹೆಮ್ಮೆಯ ಕ್ಷಣ ಎಂದ ನಾರ್ಸ್ ಅಟ್ಲಾಂಟಿಕ್ ಏರ್ವೇಸ್
ಯಾವುದೇ ಪರಿಸರದಲ್ಲೂ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ
ನಾರ್ವೆಯಿಂದ ಹೊರಟು ದ.ಆಫ್ರಿಕಾದ ಕೇಪ್ಟೌನ್ನಲ್ಲಿ ಲ್ಯಾಂಡಿಂಗ್
ಹಿಮಾವೃತ ಅಂಟಾರ್ಟಿಕಾ ಖಂಡದಲ್ಲಿ ಸಂಶೋಧನಾ ನೆಲೆಗಳನ್ನು ಸ್ಥಾಪಿಸಿದ ಬಳಿಕ ಮತ್ತೊಂದು ಅಪರೂಪದ ಸಾಧನೆ ದಾಖಲಾಗಿದೆ. ಇದೇ ಮೊದಲ ಬಾರಿಗೆ ಬೃಹತ್ ವಿಮಾನವೊಂದು ಹಿಮಚ್ಛಾಧಿತ ನೆಲದಲ್ಲಿ ಇಳಿಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಭೂಮಿಯ ಮೇಲಿನ ಅತ್ಯಂತ ಶೀತದ ಪ್ರದೇಶ. ಅತ್ಯಂತ ವಿರಳ ಜನಸಂಖ್ಯೆ ಇರುವ ಪ್ರದೇಶ. ಸುತ್ತ ಸಮುದ್ರ ಇದ್ರೂ ಇದು ಪ್ರತ್ಯೇಕ ಜಲರಾಶಿಯಲ್ಲ. ವಿಶ್ವದಲ್ಲಿ 4ನೇ ಅತಿದೊಡ್ಡ ಖಂಡ ಎಂಬ ಗರಿಮೆ. ವಿಭಿನ್ನ ಪರಿಸರ ಹೊಂದಿರುವ ಅಂಟಾರ್ಟಿಕಾದಲ್ಲಿ ಸಂಶೋಧನಾ ಕೇಂದ್ರಗಳ ಸ್ಥಾಪನೆ ಬಳಿಕ ಮತ್ತೊಂದು ಮೈಲಿಗಲ್ಲು ಸ್ಥಾಪಿತವಾಗಿದೆ.
ಅಂಟಾರ್ಟಿಕಾ ನೆಲದಲ್ಲಿ ಮೊದಲ ಬಾರಿಗೆ ಇಳಿದ ವಿಮಾನ
ಅಂಟಾರ್ಟಿಕಾದ ಹಿಮಾಚ್ಛಾದಿತ ರನ್‌ವೇಯಲ್ಲಿ ನಾರ್ವೆ ದೇಶದ ಬೋಯಿಂಗ್ 787 ವಿಮಾನ ಇಳಿದು ಇತಿಹಾಸ ನಿರ್ಮಿಸಿದೆ. ಬ್ಲೂ ಐಸ್ ರನ್‌ವೇಯಲ್ಲಿ ಇಳಿದ ಅತಿದೊಡ್ಡ ಪ್ರಯಾಣಿಕ ವಿಮಾನ ಇದಾಗಿದೆ. ಶೇ.90ರಷ್ಟು ಮಂಜುಗಡ್ಡೆ ಹೊಂದಿರುವ ಭೂಮಿ ಮೇಲೆ ದೊಡ್ಡ ವಿಮಾನ ಇಳಿಸುವ ಮೂಲಕ ನಾರ್ವೆಯ ನಾರ್ಸ್ ಅಟ್ಲಾಂಟಿಕ್ ಏರ್ವೇಸ್ ದೊಡ್ಡ ಸವಾಲು ಮೆಟ್ಟಿ ನಿಂತಿದೆ. ನಾರ್ಸ್ ಏರ್ವೇಸ್ ನಿರ್ವಹಿಸ್ತಿರುವ ಬೋಯಿಂಗ್-787 ಬೃಹತ್ ವಿಮಾನ ಇದಾಗಿದ್ದು ಐತಿಹಾಸಿಕ ಸಾಧನೆ ಮಾಡಿದೆ. ಸುಮಾರು 330 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ವಿಮಾನ ಇದಾಗಿದ್ದು ಇದರಲ್ಲಿ ವಿಜ್ಞಾನಿಗಳು ಸೇರಿ 45 ಮಂದಿ ಜೊತೆಗೆ 12 ಟನ್ ಸಂಶೋಧನಾ ಪರಿಕರಗಳನ್ನು ಹೊತ್ತೊಯ್ದಿದೆ.
Norse Atlantic Boeing 787 Dreamliner has made history by becoming the first example of the type to land in Antarctica
pic.twitter.com/HPEBUwNWBJ— Science girl (@gunsnrosesgirl3) November 17, 2023
ಬೋಯಿಂಗ್ ವಿಮಾನ ಅತ್ಯಾಧುನಿಕ ಇಂಧನ ಸಾಮರ್ಥ್ಯ ಹೊಂದಿರುವ ವಿಮಾನವಾಗಿದೆ. ಯಾವುದೇ ಪರಿಸರದಲ್ಲೂ ಕಾರ್ಯಾಚರಿಸುವ ಗುಣಮಟ್ಟ ಹೊಂದಿದೆ. ಈ ವಿಮಾನ ಇಳಿಸುವ ಮೂಲಕ ಹಿಮಖಂಡದಲ್ಲಿ ನಾರ್ವೇಜಿಯನ್ ಸಂಶೋಧನೆಗೆ ಬಲ ಬಂದಂತಾಗಿದೆ. ಮೊದಲಿಗೆ ನಾರ್ವೆ ರಾಜಧಾನಿ ಓಸ್ಲೋದಿಂದ ಹೊರಟ ವಿಮಾನ ದಕ್ಷಿಣ ಆಫ್ರಿಕಾದ ಕೇಪ್ಟೌನ್ನಲ್ಲಿ ಲ್ಯಾಂಡಿಂಗ್ ಆಯ್ತು. ಅಲ್ಲಿಂದ ಸವಾಲಿನ ಪ್ರಯಾಣ ಅಂಟಾರ್ಟಿಕಾಕ್ಕೆ ತೆರಳಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಯ್ತು. ಅಂಟಾರ್ಟಿಕಾದಲ್ಲಿರುವ ಬ್ಲೂ ಐಸ್ ರನ್ವೇ ಸುಮಾರು ಮೈಲಿ ಉದ್ದ, 200 ಅಡಿ ಅಗಲ ಹೊಂದಿರುವ ರನ್ವೇ ಇದಾಗಿದ್ದು ವಿಮಾನ ಲ್ಯಾಂಡ್ ಆಗಿ ನಾಲ್ಕೇ ಗಂಟೆಗಳ ಬಳಿಕ ಮತ್ತೆ ಟೇಕಾಫ್ ಆಗಿದೆ.
ಜನವಸತಿಯೇ ಇಲ್ಲದ ಅಂಟಾರ್ಟಿಕಾದಲ್ಲಿ 19ನೇ ಶತಮಾನದ ಅಂತ್ಯದ ವೇಳೆ ಸಂಶೋಧನಾ ಕೇಂದ್ರಗಳು ಸ್ಥಾಪಿಸಲ್ಪಟ್ಟವು. ಅಂಟಾರ್ಟಿಕಾದಲ್ಲಿ ಭಾರತ ಕೂಡ ಮೈತ್ರಿ, ದಕ್ಷಿಣ ಗಂಗೋತ್ರಿ, ಭಾರತಿ ಎಂಬ ಸಂಶೋಧನಾ ನೆಲಗಳನ್ನು ಸ್ಥಾಪಿಸಿದೆ. ಸ್ಥಳೀಯರು ಯಾರೂ ಇಲ್ಲ. ಸಂಶೋಧನೆಗೆಂದು ವಿವಿಧ ದೇಶಗಳಿಂದ ಬಂದ ವಿಜ್ಞಾನಿಗಳು ಹಾಗೂ ಸಂಶೋಧಕರಾಗಿದ್ದಾರೆ. ಇದು ಪ್ರಪಂಚದ ಶೇ.70ರಷ್ಟು ಶುದ್ಧ ಕುಡಿಯುವ ನೀರು ಹೊಂದಿದೆ. ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ನಾರ್ವೆ ದೇಶವು ಮೊದಲ ಬಾರಿಗೆ ವಿಮಾನವನ್ನು ಯಶಸ್ವಿಯಾಗಿ ಇಳಿಸಿದೆ. ಅಂಟಾರ್ಟಿಕಾದಲ್ಲಿ ಹೊಸ ಹೊಸ ಸಂಶೋಧನೆಗಳ ನಡೆಯುತ್ತಿರುವುದು ಮತ್ತಷ್ಟು ಆವಿಷ್ಕಾರಗಳಿಗೆ ತೆರೆದುಕೊಳ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ