newsfirstkannada.com

ಈ ಮೀನಿನ ಪ್ರಸಾದವೇ ಅಸ್ತಮಾ ಕಾಯಿಲೆಗೆ ದಿವ್ಯ ಔಷಧಿ; ಇದನ್ನು ಖರೀದಿಸಲು ಮುಗಿಬೀಳುತ್ತಾರೆ ಲಕ್ಷ, ಲಕ್ಷ ಜನ

Share :

09-06-2023

    ಅಸ್ತಮಾ ಕಾಯಿಲೆಗೆ ಇಲ್ಲಿದೆ ದಿವ್ಯ ಔಷಧ

    ಈ ಮೀನಿನ ಪ್ರಸಾದದಿಂದ ಅಸ್ತಮಾಕ್ಕೆ ಹೇಳಿ ಗುಡ್​ ಬೈ

    ಮೀನಿನ ಪ್ರಸಾದಕ್ಕೆ ಭಾರೀ ಡಿಮ್ಯಾಂಡ್​​.. ಜನವೋ ಜನ

ಹೈದರಾಬಾದ್​: ಅಸ್ತಮಾ ಕಾಯಿಲೆಗೆ ಸರಿಯಾದ ಚಿಕಿತ್ಸೆ ಇಲ್ಲ. ಆದರೆ ಇಂತಹ ಸಮಸ್ಯೆ ಒಳಗೊಂಡವರು ಚಿಕಿತ್ಸೆಗಾಗಿ ವೈದ್ಯರ ಮೊರೆ ಹೋದರೆ. ಇನ್ನು ಕೆಲವರು ಹಳ್ಳಿ ಮದ್ದಿನ ಮೂಲಕ ಈ ಕಾಯಿಲೆ ಗುಣ ಮುಖವಾಗಲು ಶ್ರಮಿಸುತ್ತಾರೆ. ಆದರೆ ಇದು ಮೀನಿನ ಪ್ರಸಾದದ ಮೂಲಕ ಗುಣವಾಗುತ್ತದೆ ಎಂದರೆ ನಂಬುತ್ತೀರಾ?. ಆಂಧ್ರ ಪ್ರದೇಶದಲ್ಲಿ ‘ಫಿಶ್​ ಪ್ರಸಾದಮ್’​ ಎಂಬ ಹೆಸರಿನಲ್ಲಿ ಅಸ್ತಮಾ ಕಾಯಿಗೆ ಔಷಧಿ ನೀಡಲಾಗುತ್ತಿದೆ.

ಫಿಶ್​ ಪ್ರಸಾದಮ್​ ಭಾರೀ ಜನಪ್ರಿಯತೆ ಪಡೆದ ಔಷಧವಾಗಿದ್ದು, ಮೃಗಶೀರಾಕಾರ್ಟೆ ಎಂಬ ಕಂಪನಿ ಈ ಪ್ರಸಾದವನ್ನು ನೀಡುತ್ತಾ ಬಂದಿದೆ. ಆದರೆ ಕೊರೋನಾ ಕಾಲದಲ್ಲಿ ಇದನ್ನು ಸ್ಥಗಿತ ಮಾಡಲಾಗಿತ್ತು. ಆದರೆ ಇಂದಿನಿಂದ ಮತ್ತೆ ಶುರು ಮಾಡಲಾಗಿದ್ದು, ಮೊದಲಿನಂತೆಯೇ ಬೇಡಿಕೆ ಪಡೆದುಕೊಂಡಿದೆ.

ಭಾತಿನಿ ಗೌಡ ಎಂಬ ಫ್ಯಾಮಿಲಿ ಅಸ್ತಮಾ ಕಾಯಿಲೆಗೆಂದು ಮೀನಿನ ಪ್ರಸಾದವನ್ನು ನೀಡುತ್ತಾ ಬಂದಿದೆ. ಸುಮಾರು 175 ವರ್ಷಗಳ ಇತಿಹಾಸ ಈ ಫ್ಯಾಮಿಲಿಗಿದೆ. ಇದೊಂದು ಹಳ್ಳಿ ಔಷಧವಾಗಿದ್ದು, ಇದನ್ನು ಸೇವಿಸಿದರೆ ಉಸಿರಾಟದ ಸಮಸ್ಯೆ ಮತ್ತು ಅಸ್ತಮಾ ಸಮಸ್ಯೆ ಹೋಗಲಾಡಿಸುತ್ತಂತೆ.

ಮೀನಿನ ಪ್ರಸಾದ ತಯಾರಿಸಲು ಮೃಗಶೀರಾಕಾರ್ಟೆ ಕಂಪನಿಯ ಜೊತೆಗೆ ಮೀನುಗಾರಿಕಾ ವಿಭಾಗ ಕೈ ಜೋಡಿಸಿಕೊಂಡಿದೆ. ಇದಕ್ಕಾಗಿ 1.30 ಲಕ್ಷ ಮೀನುಗಳನ್ನು ಸರಬರಾಜು ಮಾಡುತ್ತದೆ. ಅಂದಹಾಗೆಯೇ ಮುರ್ರೆಲ್​ ಮೀನನ್ನು ಔಷಧವಾಗಿ ಬಳಸುತ್ತಾರೆ. ಮಾತ್ರವಲ್ಲದೆ ಈ ಕಂಪನಿಯಲ್ಲಿ 250 ಜನರು ದುಡಿಯುತ್ತಿದ್ದಾರೆ.

ಮೊದಲಿಗೆ ಬತಿನಿ ಕುಟುಂಬ ಹೈದರಾಬಾದ್​​ನಲ್ಲಿರುವ ದೂಧಬೌಲಿಯಲ್ಲಿರುವ ನಿವಾಸದಲ್ಲಿ ಪೂಜೆ ಮಾಡುತ್ತಾರೆ. ಪೂಜೆಯ ಬಳಿಕ ಗಿಡಮೂಲಿಕೆ ಬಳಸಿ ತಯಾರಿಸಿದ ಪೇಸ್ಟ್​ ಅನ್ನು ಮುರ್ರೆಲ್​ ಮೀನಿನ ಬಾಯಿಯೊಳಗೆ ಜಾಗರೂಕತೆಯಿಂದ ಇಡುತ್ತಾರೆ. ನಂತರ ಅದನ್ನು ರೋಗಿಗಳಿಗೆ ಕೊಡುತ್ತಾರೆ. ಮೀನಿನ ಪ್ರಸಾದಕ್ಕಾಗಿ ವಿವಿಧ ರಾಜ್ಯದಿಂದಲೂ ಜನರು ಬರುತ್ತಾರೆ. ಕರ್ನಾಟಕ, ರಾಜಸ್ಥಾನ, ಮಹಾರಾಷ್ಟ್ರ ಸೇರಿದಂತೆ ಅಸ್ತಮಾ ಮಕಾಯಿಲೆಯವರು ತಮಗಿರುವ ರೋಗವನ್ನು ಹೋಗಲಾಡಿಸಲು ಮೀನಿನ ಪ್ರಸಾದ ಸೇವಿಸುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ಮೀನಿನ ಪ್ರಸಾದವೇ ಅಸ್ತಮಾ ಕಾಯಿಲೆಗೆ ದಿವ್ಯ ಔಷಧಿ; ಇದನ್ನು ಖರೀದಿಸಲು ಮುಗಿಬೀಳುತ್ತಾರೆ ಲಕ್ಷ, ಲಕ್ಷ ಜನ

https://newsfirstlive.com/wp-content/uploads/2023/06/Fish-Prasadm.jpg

Load More