newsfirstkannada.com

ಸಾಯಲು ನದಿಗೆ ಹಾರಿದ್ದ ಪ್ರೇಮಿಗಳು.. ಇಬ್ಬರನ್ನ ಕಾಪಾಡಿ ಕೆನ್-ಕೆನ್ನೆಗೆ ಬಾರಿಸಿದ ಮೀನುಗಾರು -Video

Share :

Published June 17, 2024 at 10:05am

  ಯುವಕನಿಗೆ ಹೊಡೆದು ಬೈದು ಬುದ್ಧಿ ಹೇಳಿದ ಮೀನುಗಾರರು

  ಇಬ್ಬರನ್ನು ಹಿಡಿದು ದಡಕ್ಕೆ ಎಳೆದುಕೊಂಡು ಬಂದು ಹೊಡೆದ್ರು

  ಮೀನುಗಾರರ ಕಾರ್ಯಕ್ಕೆ ಎಲ್ಲೆಡೆಯಿಂದ ಭಾರೀ ಮೆಚ್ಚುಗೆ

ಲಕ್ನೋ: ನದಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಪ್ರೇಮಿಗಳಿಬ್ಬರನ್ನು ರಕ್ಷಣೆ ಮಾಡಿ ಮೀನುಗಾರರು ಮಾನವೀಯತೆ ಮೆರೆದಿದ್ದಾರೆ. ಈ ವೇಳೆ ಪ್ರಿಯಕರನ ಕೆನ್ನೆಗೆ ಹೊಡೆದು, ಹೀಗೆ ಮಾಡಬಾರದು ಎಂದು ಓರ್ವ ಮೀನುಗಾರ ಬೈದು ಬುದ್ಧಿ ಹೇಳಿದ್ದಾರೆ.

ಇದನ್ನೂ ಓದಿ: ಫ್ರೆಂಡ್​​ಶಿಪ್ ಬೇರೆ, ಸಂಬಂಧಗಳು ಬೇರೆ.. ದರ್ಶನ್​ ಪ್ರಕರಣದ ಬಗ್ಗೆ ನಟ ಸುದೀಪ್ ಇನ್ನೇನು ಅಂದ್ರು?

ಉತ್ತರ ಪ್ರದೇಶದ ಸುಲ್ತಾನಪುರದ ಬಳಿ ಹರಿದು ಹೋಗುವ ಗೋಮತಿ ನದಿಯ ನೀರಿಗೆ ಯುವಕ, ಯುವತಿ ಆತ್ಮಹತ್ಯೆ ಮಾಡಿಕೊಳ್ಳಲೆಂದು ಹಾರಿದ್ದಾರೆ. ಈ ವೇಳೆ ನದಿಯಲ್ಲಿ ಮೀನುಗಳನ್ನು ಹಿಡಿಯುತ್ತಿದ್ದ ಮೀನುಗಾರರ ತಂಡ ಇವರನ್ನು ನೋಡಿ ತಕ್ಷಣ ಜಾಗೃತರಾಗಿದ್ದಾರೆ. ನೀರಿನಲ್ಲಿ ಈಜಿಕೊಂಡು ಹೋಗಿ ಯುವಕ, ಯುವತಿಯನ್ನು ಹಿಡಿದು ದಡಕ್ಕೆ ಎಳೆದುಕೊಂಡು ಬಂದು ಕಾಪಾಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಭಾರೀ ಅನಾಹುತ.. ರೇಸ್ ನಡೆಯುವಾಗ ಜನರ ಮೇಲೆ ನುಗ್ಗಿದ ಟ್ರ್ಯಾಕ್ಟರ್

ದಡಕ್ಕೆ ಎಳೆದುಕೊಂಡು ಬರುತ್ತಿದ್ದೆ ತಡ ಓರ್ವ ಮೀನುಗಾರ, ಯುವಕನನ್ನ ಕೆನ್ನೆಗೆ ಮೂರು ಏಟು ಜೋರು ಜೋರಾಗಿ ಹೊಡೆದು ಬುದ್ಧಿ ಹೇಳಿದ್ದಾನೆ. ಸಾಯುವಂತದ್ದು ಏನಾಗಿತ್ತು? ಬದುಕಿದ್ದರೇ ಏನು ಬೇಕಾದರೂ ಮಾಡಬಹುದು ಎಂದು ಹೇಳಿ ಹೊಡೆದಿದ್ದಾನೆ. ಈ ಎಲ್ಲ ಘಟನೆಯ ದೃಶ್ಯಗಳು ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ನೆಟ್ಟಿಗರೆಲ್ಲ ಮೀನುಗಾರರ ಕಾರ್ಯಕ್ಕೆ ಭಾರೀ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾಯಲು ನದಿಗೆ ಹಾರಿದ್ದ ಪ್ರೇಮಿಗಳು.. ಇಬ್ಬರನ್ನ ಕಾಪಾಡಿ ಕೆನ್-ಕೆನ್ನೆಗೆ ಬಾರಿಸಿದ ಮೀನುಗಾರು -Video

https://newsfirstlive.com/wp-content/uploads/2024/06/BOAT.jpg

Load More